ಎರ್ನಾಕುಳಂ: ಚಿನ್ನ ಸಾಗಾಟ ಪ್ರಕರಣದಲ್ಲಿ ಆರೋಪಿಗಳಾಗಿರುವ ಸ್ವಪ್ನಾ ಸುರೇಶ್ ಹಾಗೂ ಸಂಜು ಸೈದಲವಿ ಅವರ ಜಾಮೀನು ಅರ್ಜಿಯ ತೀರ್ಪು ಇಂದು(ಆಗಸ್ಟ್ 13) ಹೊರ ಬೀಳಲಿದೆ. ಕಸ್ಟಂಸ್ ಇಲಾಖೆ ದಾಖಲಿಸಿಕೊಂಡಿರುವ ಪ್ರಕರಣಗಳಿಗೆ ಸಂಬಂಧಿಸಿ ಜಾಮೀನು ಕೋರಿ ಆರ್ಥಿಕ ಅಪರಾಧಗಳ ವಿಚಾರಣೆ ನಡೆಸುತ್ತಿರುವ ಕೊಚ್ಚಿಯ ನ್ಯಾಯಾಲಯದಲ್ಲಿ ಇವರಿಬ್ಬರೂ ಅರ್ಜಿ ಸಲ್ಲಿಸಿದ್ದರು.
ಆರೋಪಿಗಳಿಗೆ ಜಾಮೀನು ನೀಡುವುದಕ್ಕೆ ಕಸ್ಟಂಸ್ ಪರ ವಕೀಲಯ ತಮ್ಮ ವಿರೋಧ ಸೂಚಿಸಿದ್ದು, ಚಿನ್ನ ಸಾಗಾಟವನ್ನು ಉದ್ದಿಮೆಯಾಗಿ ಕೈಗೆತ್ತಿಕೊಂಡಿದ್ದು, ಇದೊಂದು ವಿಸ್ತರಿತ ಶೃಂಖಲೆಯಾಗಿರುವುದಾಗಿ ವಾದಿಸಿದ್ದರು.