ತಿರುವನಂತಪುರ: ಈ ಬಾರಿಯ ಶಬರಿಮಲೆ ಯಾತ್ರೆ ಕೋವಿಡ್ ಕಟ್ಟುನಿಟ್ಟುಗಳಿಗೆ ಅನುಸಾರ ನಡೆಯಲಿದೆ ಎಂದು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ಹೇಳಿದ್ದಾರೆ.
ನಿನ್ನೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಕ್ಷೇತ್ರದ ಯಾತ್ರಾರ್ಥಿಗಳನ್ನು ಸನ್ನಿಧಾನಕ್ಕೆ ಅನುಮತಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ಇದು ನಿಯಮ ಸಂಹಿತೆಯ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತಿರಬೇಕು ಎಂದು ಸಚಿವರು ಹೇಳಿದರು.
ಯಾತ್ರಿಕರಿಗೆ ಕೋವಿಡ್ ನಕಾರಾತ್ಮಕ ಪ್ರಮಾಣಪತ್ರ ಕಡ್ಡಾಯವಾಗಲಿದ್ದು, ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಶಬರಿಮಲೆ ದರ್ಶನ ಏರ್ಪಡಿಸಲಾಗುವುದು ಎಂದು ದೇವಸ್ವಂ ಸಚಿವರು ಹೇಳಿದ್ದಾರೆ. ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್‍ನೊಂದಿಗೆ ಬರುವ ಯಾತ್ರಾರ್ಥಿಗಳನ್ನು ಆನ್‍ಲೈನ್ ನೋಂದಣಿ ಮೂಲಕ ವರ್ಚುವಲ್ ಕ್ಯೂ ವ್ಯವಸ್ಥೆಯಲ್ಲಿ ಸೇರಿಸಿಕೊಳ್ಳಲು ಮತ್ತು ಯಾವುದೇ ಗೊಂದಲ-ಗದ್ದಲಗಳಿಗೆ ಆಸ್ಪದವೀಯದೆ ದರ್ಶನಕ್ಕೆ ಕರೆತರಲು ವ್ಯವಸ್ಥೆ ಮಾಡಲು ಸಭೆ ನಿರ್ಧರಿಸಿತು. ಆದಾಗ್ಯೂ, ತುರ್ತು ಕೋವಿಡ್ ಸಂದೇಶ ಸರ್ಕಾರದಿಂದಿದ್ದರೆ ಪೂರ್ಣ ಪ್ರಮಾಣದ ತೀರ್ಥಯಾತ್ರೆಗೆ ಮಿತಿಗಳಿವೆ ಎಂದು ಸಭೆಯಲ್ಲಿ ನಿರ್ಣಯಿಸಲಾಯಿತು.
ಸಭೆಯಲ್ಲಿ ಸಚಿವ ಕಡಕಂಪಲ್ಲಿ ಅವರು ತೀರ್ಥಯಾತ್ರೆಗೆ ಅಗತ್ಯವಾದ ಸಿದ್ಧತೆಗಳು, ವಿವಿಧ ಹಂತದ ಸಮನ್ವಯ ಮತ್ತು ಸಂಬಂಧಿತ ಚಟುವಟಿಕೆಗಳನ್ನು ಸಮಯಕ್ಕೆ ಸರಿಯಾಗಿ ಮಿತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸಲಹೆ ನೀಡಿದರು. ನವೆಂಬರ್ 16 ರಿಂದ ಪ್ರಾರಂಭವಾಗಲಿರುವ ಈ ಬಾರಿಯ ಶಬರಿಮಲೆ ತೀರ್ಥಯಾತ್ರೆಗೆ ಸಿದ್ಧತೆ ನಡೆಸಲು ಸಚಿವ ಕಡಕಂಪಲ್ಲಿ ಸುರೇಂದ್ರನ್ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ನಡೆದ ಉನ್ನತ ಮಟ್ಟದ ಆನ್‍ಲೈನ್ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.