ಕಾಸರಗೋಡು: ಕಾಸರಗೋಡು ಜಿಲ್ಲೆಯ ಸಹಕಾರಿ ಸಂಘಗಳಿಂದ, ಬ್ಯಾಂಕ್ ಗಳಿಂದ ಸಾಲ ಪಡೆದಿರುವ 154 ಮಂದಿ ಫಲಾನುಭವಿಗಳಿಗೆ 39,10,736 ರೂ. ಸಾಲ ಮರುಪಾವತಿಗೆ ಸಹಾಯ ರೂಪದಲ್ಲಿ ಮಂಜೂರು ಮಾಡಲಾಗಿದೆ ಎಂದು ಸಹಕಾರಿ ಸಂಘ ಜಂಟಿ ರೆಜಿಸ್ತ್ರಾರ್ ತಿಳಿಸಿರುವರು. ಫಲಾನುಭವಿಗಳ ಹೆಸರು, ವಿಳಾಸ, ಸಂಬಂಧಪಟ್ಟ ಸಹಕಾರಿ ಬ್ಯಾಂಕ್ ಗಳ ನೋಟೀಸು ಬೋರ್ಡ್ ಗಳಲ್ಲಿ ಪ್ರಕಟಿಸಲಾಗಿದೆ ಎಂದವರು ತಿಳಿಸಿರುವರು.