ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆಯ ಪರಿಣಾಮ ತೇಜಸ್ವಿನಿ, ಚಂದ್ರಗಿರಿ, ಚೈತ್ರವಾಹಿನಿ ನದಿಗಳು ಉಕ್ಕಿಹರಿದು , ನೆರೆಹಾವಳಿ ವ್ಯಾಪಕವಾಗಿದೆ. ಜಿಲ್ಲೆಯ 11 ನದಿಗಳಲ್ಲೂ ನೀರಿನಪ್ರಮಾಣ ಅಧಿಕವಾಗಿ ಭೀತಿಯುಂಟು ಮಾಡುತ್ತಿವೆ. ಮಲೆನಾಡ ಪ್ರದೇಶಗಳಲ್ಲಿ ಮಣ್ಣು ಕುಸಿತದ ಭೀತಿಯಿದ್ದು, ವ್ಯಾಪಕ ಕೃಷಿನಾಶ ಸಂಭವಿಸಿದೆ.
ಕಾಸರಗೋಡು ಜಿಲ್ಲೆಯಲ್ಲಿ ನೆರೆಹಾವಳಿ ಸಹಿತ ಪ್ರಕೃತಿ ದುರಂತಗಳ ಹಿನ್ನೆಲೆಯಲ್ಲಿ 935 ಕುಟುಂಬಗಳ ಸದಸ್ಯರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಇವರಲ್ಲಿ 76 ಕುಟುಂಬಗಳ ಮಂದಿಯನ್ನು ಆಡಳಿತೆ ಸಿದ್ಧಪಡಿಸಿರುವ ಅಭಯಾರ್ಥಿಗಳ ಶಿಬಿರಗಳಿಗೆ, 859 ಕುಟುಂಬಗ ಸದಸ್ಯರನ್ನು ಅವರವರ ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ. ಈ ಮೂಲಕ ಒಟ್ಟು 3420 ಮಂದಿ ಸುರಕ್ಷಿತ ತಾಣಗಳಿಗೆ ಸ್ಥಳಾತರಗೊಂಡಿದ್ದಾರೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವೇಳೆ ಒಟ್ಟು 6 ಅಭಯಾರ್ಥಿಗಳ ಶಿಬಿರ ಆರಂಭಿಸಲಾಗಿದೆ. ಕಾಸರಗೋಡು ತಾಲೂಕಿನಲ್ಲಿ 1, ಹೊಸದುರ್ಗ ತಾಲೂಕಿನಲ್ಲಿ 2, ವೆಳ್ಳರಿಕುಂಡ್ ತಾಲೂಕಿನಲ್ಲಿ 3 ಶಿಬಿರಗಳು ಇವೆ.
ಕುಂಬಳೆಯ ಉಳುವಾರು, ಕಳಾಯಿ, ತಳಂಗರೆ ಕಡವತ್,ಕೊಪ್ಪಲ್ ಕಾಲನಿ, ನೀಲೇಶ್ವರ ನಗರಸಭೆಯ ಪಾಲಾಯಿ, ನೀಲಾಯಿ, ಚಾತಮತ್, ಪೆÇೀಡೋತುರ್ತಿ, ಕಾಯರ್ಂಗೋಡು, ಓರ್ಚ ಮುಂಡೇಮಾಡ್ ದ್ವೀಪ, ಕಿನಾನೂರು-ಕರಿಂದಳಂ, ಕಯ್ಯೂರು-ಚೀಮೇನಿ ಪ್ರದೇಶಗಳಲ್ಲಿ ವ್ಯಾಪಕ ನೆರೆಹಾವಳಿಯಿದೆ.
ಬಿರುಸಿನ ಮಳೆಗೆ ಕಾಸರಗೋಡು ಜಿಲ್ಲೆಯಲ್ಲಿ 10 ಮನೆಗಳು ಪೂರ್ಣಪ್ರಮಾಣದಲ್ಲಿ, 107 ಮನೆಗಳು ಭಾಗಶಃ ಹಾನಿಗೊಂಡಿವೆ. ಪೆÇಯಿನಾಚಿ ಬಂದಡ್ಕ ರಸ್ತೆಯ ಪುನ್ನಕ್ಕಾಲ್ ನಲ್ಲಿ ಗುಡ್ಡದಿಂದ ಮಣ್ಣುಕುಸಿದು ಸಂಚಾರ್ಕೆ ತಡೆಯಾಗಿದೆ.