ಉಪ್ಪಳ: ಯುವಕನೊಬ್ಬ ಗಾಂಜಾ ಪ್ರಭಾವದಿಂದ ಅಡ್ಡಾದಿಡ್ಡಿ ವಾಹನ ಚಲಾಯಿಸಿ ಅಮಾಯಕ ವ್ಯಕ್ತಿಯೋರ್ವರು ದಾರುಣರಾಗಿ ಮೃತಪಟ್ಟ ಘಟನೆ ನಿನ್ನೆ ರಾತ್ರಿ(ಮಂಗಳವಾರ) ಬೇಕೂರಿನಲ್ಲಿ ಸಂಭಿಸಿದೆ.
ಮೃತರನ್ನು ಬೇಕೂರು ಸುಭಾಷ್ ನಗರದ ರಾಮ್ ಭಟ್ (62) ಎಂದು ಗುರುತಿಸಲಾಗಿದೆ.
ಹಲವಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ಗಫೂರ್ ಎಂಬಾತ ಬೇಕೂರು ಪರಿಸರದಲ್ಲಿ ಗಾಂಜಾ ಸೇವಿಸಿ ಮಂಗಳವಾರ ಸಂಜೆ ಭಯೋತ್ಪಾದನೆಯ ವಾತಾವರಣ ಸೃಷ್ಟಿಸಿದ. ಇದನ್ನು ನೋಡಿದ ಸ್ಥಳೀಯರು ಯುವಕನ ತಡೆಹಿಡಿದು ಗದರಿಸಿ ಹದ್ದುಬಸ್ತಿನಲ್ಲಿಡಲು ಯತ್ನಿಸಿದ್ದು ಈ ವೇಳೆ ಗಫೂರ್ ತನ್ನ ಕಾರನ್ನೇರಿ ಅತೀ ವೇಗದಲ್ಲಿ ಓಡಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ. ಈ ವೇಳೆ ಎದುರು ಭಾಗದಿಂದ ಸ್ಕೂಟರ್ ಮೂಲಕ ಆಗಮಿಸುತ್ತಿದ್ದ ರಾಮ್ ಭಟ್ ಅವರ ಸ್ಕೂಟರ್ ಗೆ ಉನ್ಮಾದದಲ್ಲಿ ಅಡ್ಡಾದಿಡ್ಡಿಯಾಗಿ ಮೃತ್ಯುವೇಗದಲ್ಲಿ ಆಗಮಿಸಿದ ಗಫೂರ್ ನಿಯಂತ್ರಣ ಕೈಮೀರಿ ಸ್ಕೂಟರ್ ಗೆ ಡಿಕ್ಕಿ ಹೊಡೆಯಿತು. ಘಟನಾ ಸ್ಥಳದಲ್ಲಿಯೇ ರಾಮ್ ಭಟ್ ಮೃತಪಟ್ಟರು. ಬಳಿಕ ವಿಷಯ ತಿಳಿದು ಪೆÇಲೀಸರು ಆಗಮಿಸಿದಾಗ ಗಫೂರ್ ಕಾರನ್ನು ಅಲ್ಲೇಬಿಟ್ಟು ಪರಾರಿಯಾದನೆಂದು ತಿಳಿದುಬಂದಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿಯು ತನ್ನಲ್ಲಿ ಗನ್ ಇದೆಯೆಂದು ಹೇಳಿದ್ದನೆಂದು ತಿಳಿಸಿರುವರು. ಘಟನೆಯ ಬಗ್ಗೆ ಮಂಜೇಶ್ವರ ಪೆÇಲೀಸರು ತನಿಖೆ ಆರಂಭಿಸಿದ್ದಾರೆ. ಕೊಲೆ ಯತ್ನ ಮತ್ತು ಗಾಂಜಾ ಕಳ್ಳಸಾಗಣೆ ಸೇರಿದಂತೆ ಏಳು ಪ್ರಕರಣಗಳಲ್ಲಿ ಗಫೂರ್ ಆರೋಪಿ ಎಂದು ಪೆÇಲೀಸರು ತಿಳಿಸಿದ್ದಾರೆ. ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ಮೃತರು ಪತ್ನಿ ಶ್ಯಾಮಲಾ ರಾಮಭಟ್, ಪುತ್ರಿಯರಾದ ಮಧು ಮತ್ತು ಸಿಂಧು, ಅಳಿಯಂದಿರಾದ ಮುರಳಿ ಮತ್ತು ವಿನಾಯಕ ಭಟ್ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.