ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಮಂಜೇಶ್ವರ ತಾಲೂಕು ಮಟ್ಟದ ದೂರು ಪರಿಹಾರ ಆನ್ ಲೈನ್ ಅದಾಲತ್ ಶನಿವಾರ ಜರುಗಿತು.
ಕೋವಿಡ್ 19 ಹಿನ್ನೆಲೆಯಲ್ಲೂ ಜನತೆಯ ಅಹವಾಲುಗಳಿಗೆ ಆನ್ ಲೈನ್ ಮೂಲಕ ಜಿಲ್ಲಾಧಿಕಾರಿ ನೇರವಾಗಿ ತೀರ್ಪು ಒದಗಿಸಲು ಸಾಧ್ಯವಾದುದು ತೃಪ್ತಿ ನೀಡುವಲ್ಲಿ ಸಾಫಲ್ಯಗೊಂಡಿತು.
ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ತರಗತಿಗಳ ದುರಸ್ತಿ ಕಾಮಗಾರಿ ನಡೆಸಿ ನವೀಕರಿಸುವ ಸಂಬಂಧ ಹಸನುಲ್ ಬಾನು ಎಂಬವರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಸ್ಪಂದಿಸಿದ ಜಿಲ್ಲಾಧಿಕಾರಿ ಆ.6ರಂದು ಬೆಳಗ್ಗೆ 10.30ಕ್ಕೆ ಶಾಲೆಗೆ ಭೇಟಿ ನೀಡಿ ಸ್ಥಿತಿಗತಿ ಅವಲೋಕನ ನಡೆಸುವುದಾಗಿ ತಿಳಿಸಿದರು. ಪುತ್ತಿಗೆ ಗ್ರಾಮಪಂಚಾಯತ್ ನ ಪ್ರದೀಪ್ ಎಂಬವರ ದೂರು ಅವಲೋಕ ನಡೆಸಿದ ಜಿಲ್ಲಾಧಿಕಾರಿ ಮುಗು ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ನಿರ್ಮಾಣಕ್ಕೆ ಜಾಗ ಒದಗಿಸಲು ಮತ್ತು ನಿರ್ಮಾ ವೆಚ್ಚವಾಗಿ 60 ಲಕ್ಷ ರೂ. ನೀಡಲು ಗ್ರಾಪಂಚಾಯತ್ ಸಿದ್ಧಗೊಂಡು, ರೆಸೊಲ್ಯೂಷನ್ ಪಾಸ್ ಮಾಡಿದರೆ ಮಂಜೂರಾರಿ ನೀಡುವುದಾಗಿ ಭರವಸೆ ನೀಡಿದರು.
ವೋಲ್ಟೇಜ್ ಕ್ಷಾಮ, ವಿದ್ಯುತ್ ಸಬ್ ಸ್ಟೇಷನ್ ಮಂಜೂರಾತಿ ಸಂಬಂಧ ಬಂದ್ಯೋಡಿನ ಮಹಮ್ಮದ್ ಅಬ್ದುಲ್ಲ ಎಂಬವರು ಸಲ್ಲಿಸಿದ್ದ ದೂರಿನಲ್ಲಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಈ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಪರಿಹಾರಕ್ಕೆ ಯತ್ನಿಸುವುದಾಗಿ ತಿಳಿಸಿದರು.
ಮಂಜೇಶ್ವರ ತಾಲೂಕಿನ 65 ಶಾಲೆಗಳಲ್ಲಿ ಮಲೆಯಾಳಂ ಮಧ್ಯಮ ಶಿಕ್ಷಕರ ಅಗತ್ಯವಿದೆ ಎಂದು ಆಲಿ ಮಾಸ್ಟರ್ ಎಂಬವರು ಮನವಿ ಸಲ್ಲಿಸಿದ್ದು, ದಿನವೇತನ ಪ್ರಕಾರ 5 ಶಾಲೆಗಳಿಗೆ ಒಬ್ಬ ಶಿಕ್ಷಕನನ್ನು ನೇಮಿಸುವಂತೆ ಶಿಕ್ಷಣ ಇಲಾಖೆಗೆ ಬೇಡಿಕೆ ಸಲ್ಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು.
ಅದಾಲತ್ ನಲ್ಲಿ ಒಟ್ಟು 25 ದೂರುಗಳು ಪರಿಶೀಲನೆಗೊಂಡುವು. 13 ದೂರುಗಳಿಗೆ ಪರಿಹಾರ ಒದಗಿಸಲಾಗಿದೆ. ಇವುಗಳಲ್ಲಿ 12 ದೂರುಗಳಿಗೆ ಆನ್ ಲೈನ್ ಮೂಲಕ ತೀರ್ಪು ನೀಡಲಾಗಿದೆ.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿ ಎನ್.ಎ.ಸಜಿ ಎಫ್.ಮೆಂಡಿಸ್, ತಹಸೀಲ್ದಾರ್ ಆಂಟೋ ಪಿ.ಜೆ., ವಿವಿಧ ಇಲಾಖೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
14ರಂದು ಕಾಸರಗೋಡು ತಾಲೂಕು ಮಟ್ಟದ ಆನ್ ಲೈನ್ ಅದಾಲತ್: