ಕಾಸರಗೋಡು : ರಾಜ್ಯ ಪರಿಶಿಷ್ಟ ಜಾತಿ-ಪಂಗಡ ಇಲಾಖೆ ಮತ್ತು ತಿರುವನಂತಪುರಂ ಪ್ರೆಸ್ ಕ್ಲಬ್ ಜಂಟಿ ವತಿಯಿಂದ ಪರಿಶಿಷ್ಟ ಜಾತಿ-ಪಂಗಡ ಜನಾಂಗದವರಿಗೆ ಒಂದು ವರ್ಷದ ಉಚಿತ ಸ್ನಾತಕೋತ್ತರ ಪತ್ರಿಕೋದ್ಯಮ ಡಿಪೆÇ್ಲಮಾಕ್ಕೆ ಅರ್ಜಿ ಕೋರಲಾಗಿದೆ. ಅಂಗೀಕೃತ ವಿವಿಯಿಂದ ಪದವಿ ಪಡೆದಿರುವ ಯಾ ಪದವಿ ಪರೀಕ್ಷೆ ಬರೆದು ಫಲಿತಾಂಶಕ್ಕಾಗಿ ಕಾಯುತ್ತಿರುವ ಮಂದಿ ಅರ್ಜಿ ಸಲ್ಲಿಸಬಹುದು. ಆ.20ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಪದವಿ ಪರೀಕ್ಷೆಯಲ್ಲಿ ಲಭಿಸಿದ ಅಂಕ ಮತ್ತು ಸಂದರ್ಶನದಲ್ಲಿ ಲಭಿಸಿದ ಅಂಕಗಳ ಹಿನ್ನೆಲೆಯಲ್ಲಿ 30 ಮಂದಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಇರುವುವು. ಅರ್ಜಿದಾರರಿಗೆ 28 ವರ್ಷ ಪ್ರಾಯ ಮೀರಿರಬಾರದು. ದೂರವಾಣಿ ಸಂಖ್ಯೆ: 0471-2533272.icsets@gmail.com. .