HEALTH TIPS

ಭಾರತದ ಭೂ ಪ್ರದೇಶವನ್ನೊಳಗೊಂಡ ಹೊಸ ಪಾಕಿಸ್ತಾನ ನಕ್ಷೆ ಬಿಡುಗಡೆ ಮಾಡಿದ ಇಮ್ರಾನ್ ಖಾನ್

          ಇಸ್ಲಾಮಾಬಾದ್: ಭಾರತವನ್ನು ಮತ್ತೆ ಪಾಕಿಸ್ತಾನ ಕೆಣಕಿದ್ದು, ಭಾರತದ ಭೂ ಪ್ರದೇಶವನ್ನೊಳಗೊಂಡ ಹೊಸ ಪಾಕಿಸ್ತಾನ ನಕ್ಷೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ.
      ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್‍ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡ ಪಾಕಿಸ್ತಾನ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿದೆ.  ನೇಪಾಳದಂತೆಯೇ, ಪಾಕಿಸ್ತಾನವೂ ಕೂಡ ತನ್ನ ನೂತನ ರಾಜಕೀಯ ನಕ್ಷೆಯನ್ನು ಬಿಡುಗಡೆಗೊಳಿಸಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಗುಜರಾತ್ ನ ಜುನಾಗಢ ಅನ್ನು ತನ್ನ ನೂತನ ನಕ್ಷೆಯಲ್ಲಿ ಸೇರಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಂಗಳವಾರ ದೇಶದ ಹೊಸ ರಾಜಕೀಯ ನಕ್ಷೆಯನ್ನುಪ್ರಕಟಿಸಿದೆ. 
      ಕಳೆದ ವರ್ಷ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ 370 ನೇ ವಿಧಿಯನ್ನು ತೆಗೆದುಹಾಕಿದ ಮೊದಲ ವಾರ್ಷಿಕೋತ್ಸವದ ಮುನ್ನಾ ದಿನದಂದು ಪಾಕಿಸ್ತಾನ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಾಕಿಸ್ತಾನ ತನ್ನ ನಕ್ಷೆಯಲ್ಲಿ ಈ ಪ್ರದೇಶಗಳನ್ನು ತೋರಿಸುತ್ತಿರುವುದು ಇದೇ ಮೊದಲು. ಈ ಬಗ್ಗೆ ಪಾಕಿಸ್ತಾನ ಡಾನ್ ಪತ್ರಿಕೆ ವರದಿ ಮಾಡಿದ್ದು, ಹೊಸ ನಕ್ಷೆಗೆ ಇಮ್ರಾನ್ ಖಾನ್ ಸರ್ಕಾರ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ. ಈ ಬಗ್ಗೆ ಮಾತನಾಡಿರುವ ಇಮ್ರಾನ್ ಅವರು, ಇಂದು ಕ್ಯಾಬಿನೆಟ್ ಪರವಾಗಿ ಈ ನಕ್ಷೆಗೆ ಅನುಮೋದನೆ ನೀಡಿದ ಬಳಿಕ ಇದು ಪಾಕಿಸ್ತಾನದ ಅಧಿಕೃತ ನಕ್ಷೆಯಾಗಿದ್ದು. ಇದನ್ನು ಶಾಲೆಗಳಲ್ಲಿ, ಕಾಲೇಜುಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಳಸಲಾಗುವುದು ಎಂದು ಹೇಳಿದ್ದಾರೆ. 
     ಹೊಸ ನಕ್ಷೆಯಲ್ಲಿ ಪಾಕಿಸ್ತಾನವು ಭಾರತದೊಂದಿಗಿನ ಗಡಿಯನ್ನು ತೋರಿಸುತ್ತದೆ, ಪಾಕಿಸ್ತಾನವು ಅದರ ಪಕ್ಕದ ಕಾಶ್ಮೀರದ ಸಂಪೂರ್ಣ ಭಾಗವನ್ನು ತೋರಿಸಿದೆ. ಆದಾಗ್ಯೂ ಚೀನಾದ ಗಡಿಯಲ್ಲಿರುವ ಕಾಶ್ಮೀರ ಮತ್ತು ಲಡಾಖ್‍ನ ಒಂದು ಭಾಗವನ್ನು ಗುರುತಿಸಲಾಗಿಲ್ಲ ಮತ್ತು ಇದನ್ನು "ಅನಿರ್ದಿಷ್ಟ ಗಡಿ" ಎಂದು ವಿವರಿಸಲಾಗಿದೆ. ಅಂತೆಯೇ ನಿಯಂತ್ರಣ ರೇಖೆಯನ್ನು ಕರಕೋರಂ ಪಾಸ್ಗೆ ವಿಸ್ತರಿಸಲಾಗಿದೆ, ಇದರಲ್ಲಿ ಸಿಯಾಚಿನ್ ಅನ್ನು ಪಾಕಿಸ್ತಾನದ ಭಾಗವೆಂದು ಸ್ಪಷ್ಟವಾಗಿ ವಿವರಿಸಲಾಗಿದೆ. ನಿಯಂತ್ರಣ ರೇಖೆಯನ್ನು (ಎಲ್‍ಒಸಿ) ಕೆಂಪು ಚುಕ್ಕೆಗಳಿರುವ ರೇಖೆಯೊಂದಿಗೆ ತೋರಿಸಲಾಗಿದೆ.
         ರಾಜಕೀಯ ಮೂರ್ಖತನ; ಪಾಕ್ ನಕ್ಷೆಗೆ ಭಾರತ ತೀವ್ರ ಆಕ್ಷೇಪ
     ಪಾಕಿಸ್ತಾನದ ಹೊಸ ರಾಜಕೀಯ ನಕ್ಷೆಗೆ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಪಾಕಿಸ್ತಾನದ ರಾಜಕೀಯ ಮೂರ್ಖತನ ಎಂದು ಟೀಕಿಸಿದೆ. ಅಲ್ಲದೆ ಪಾಕಿಸ್ತಾನದ ಹಾಸ್ಯಾಸ್ಪದ ಹಕ್ಕುಗಳಿಗೆ ಕಾನೂನು ಮಾನ್ಯತೆ ಅಥವಾ ಅಂತಾರಾಷ್ಟ್ರೀಯ ವಿಶ್ವಾಸಾರ್ಹತೆ ಇಲ್ಲ ಎಂದೂ ಹೇಳಿದೆ. 

The political map of Pakistan unveiled by PM @ImranKhanPTI earlier today.
Image

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries