ನವದೆಹಲಿ: ಇಡುಕಿ ರಾಜಮಲೆಯಲ್ಲಿ ಸಂಭವಿಸಿದ ಭೂಕುಸಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ದುಃಖ ವ್ಯಕ್ತಪಡಿಸಿದ್ದಾರೆ. "ಇಡುಕ್ಕಿ ರಾಜಮಲೆಯಲ್ಲಿ ಸಂಭವಿಸಿದ ದುರಂತದ ಸುದ್ದಿ ತುಂಬಾ ನೋವಿನಿಂದ ಕೂಡಿದೆ. ನಾವು ಸಂತ್ರಸ್ತರ ಕುಟುಂಬಗಳ ದುಃಖವನ್ನು ಹಂಚಿಕೊಳ್ಳುತ್ತಿದ್ದೇವೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ. ದುರಂತದ ಸ್ಥಳದಲ್ಲಿ ಸಹಾಯ ಮಾಡಲು ಎನ್‍ಡಿಆರ್‍ಎಫ್ ತಂಡವಿದೆ" ಎಂದು ಪ್ರಧಾನಿ ಸಂದೇಶದಲ್ಲಿ ತಿಳಿಸಿದ್ದಾರೆ.
ಇಡುಕ್ಕಿಯಲ್ಲಿ ಸಂಭವಿಸಿದ ದುರಂತದಲ್ಲಿ ಈವರೆಗೆ 15 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅಪಘಾತದಲ್ಲಿ 53 ಜನರು ಕಾಣೆಯಾಗಿದ್ದಾರೆ. ನನ್ನ ಮನಸ್ಸು ದುಃಖಿತ ಕುಟುಂಬ ಸದಸ್ಯರೊಂದಿಗೆ ಇದೆ ಎಂದು ನರೇಂದ್ರ ಮೋದಿ ಹೇಳಿರುವರು.
ವಿಪತ್ತು ಸ್ಥಳದಲ್ಲಿ ಕಾರ್ಯಾಚರಣೆ ಮುಂದುವರೆದಿದೆ. ಪೆÇನ್ಮುಡಿ ಬೆಟ್ಟದಿಂದ ಎರಡು ಕಿಲೋಮೀಟರ್ ದೂರದಲ್ಲಿರುವ ಬೆಟ್ಟದ ಮೇಲೆ ಭೂಕುಸಿತ ಸಂಭವಿಸಿದೆ. ಮೂರು ಕಿಲೋಮೀಟರ್ ವ್ಯಾಪ್ತಿಯು ಕಲ್ಲುಗಳು ಮತ್ತು ಮಣ್ಣಿನಿಂದ ಆವೃತಗೊಂಡು ಮುಚ್ಚಲ್ಪಟ್ಟಿದೆ. ಎನ್‍ಡಿಆರ್‍ಎಫ್ ತಂಡ ಸ್ಥಳ ತಲುಪಿದೆ. ರಾಜಮಲೆಯಲ್ಲಿ ಶುಕ್ರವಾರ ಮುಂಜಾನೆ 2 ಗಂಟೆ ಸುಮಾರಿಗೆ ಭೂಕುಸಿತ ಸಂಭವಿಸಿತ್ತು.
ಏತನ್ಮಧ್ಯೆ ರಾಜಮಲೆಯಲ್ಲಿ ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ಸಂಘಟಿಸಲು ಮತ್ತು ಉಸ್ತುವಾರಿ ನಿರ್ವಹಿಸಲು ಮುಖ್ಯಮಂತ್ರಿ ಅಪರಾಧ ಶಾಖೆ ಐಜಿ ಗೋಪೇಶ್ ಅಗರ್ವಾಲ್ ಅವರನ್ನು ವಿಶೇಷ ಅಧಿಕಾರಿಯಾಗಿ ನೇಮಿಸಿದ್ದಾರೆ.