ಕಾಸರಗೋಡು: ಕೋವಿಡ್ ಪ್ರತಿರೋಧ ಸಂಹಿತೆಗಳ ಕಡ್ಡಾಯ ಪಾಲನೆ ಮೂಲಕ ಕಾಸರಗೋಡು ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವ ನಡೆದಿರುವುದು ಈ ಬಾರಿಯ ವಿಶೇಷತೆಯಾಗಿತ್ತು.
ಪರೇಡ್ ಮಾತ್ರ ಪಥಸಂಚಲಕ್ಕೆ ಕೊಕ್:
ಈ ಬಾರಿ ಪಥಸಂಚಲನ ಇರಲಿಲ್ಲ. ಪರೇಡ್ ನಲ್ಲಿ ಪೆÇಲೀಸ್ ಪಡೆಯ 3 ತಂಡಗಳು, ಅಬಕಾರಿ ದಳದ ಒಂದು ತಂಡ ಮಾತ್ರ ಇದ್ದುವು.
ಪ್ರೇಕ್ಷಕರಾಗಿದ್ದವರು ಆರೋಗ್ಯ ಕಾರ್ಯಕರ್ತರು!:
ಈ ಬಾರಿಯ ಜಿಲ್ಲಾ ಮಟ್ಟದ ಸ್ವಾತಂತ್ರ್ಯೋತ್ಸವಕ್ಕೆ ಪ್ರೇಕ್ಷಕರಾಗಿದ್ದವರು ಆರೋಗ್ಯ ಕಾರ್ಯಕರ್ತರು. ಕೋವಿಡ್ ಸೋಂಕು ನಿವಾರಣೆಗೆ ಅಹೋರಾತ್ರಿ ಹೋರಾಟ ನಡೆಸುತ್ತಿರುವ ಇವರು ಈ ಬಾರಿಯ ಸಮಾರಂಭಕ್ಕೆ ವಿಶೇಷ ಆಮಂತ್ರಿತರಾಗಿದ್ದರು. ವಿವಿಧೆಡೆಗಳ ವೈದ್ಯಾಧಿಕಾರಿಗಳಾಗಿರುವ ಡಾ.ಎ.ಂ.ಕುಂuಟಿಜeಜಿiಟಿeಜರಾಮನ್, ಡಾ.ರಿಜಿತ್ ಕೃಷ್ಣನ್, ಡಾ.ಎ.ಎಸ್.ಷಮೀಮಾ ತನ್ವೀರ್, ದಾದಿಯರ, ಸ್ಯಾನಿಟೇಷನ್ ಕಾರ್ಯಕರ್ತರ, ಆಂಬುಲೆನ್ಸ್ ಚಾಲಕರ,ತುರ್ತು ತಂತ್ರಜ್ಞರ ಪ್ರತಿನಿಧಿಗಳೂ ಆಹ್ವಾನಿತರಾಗಿದ್ದರು.
ಪ್ರತ್ಯೇಕ ಹಿನ್ನೆಲೆಯಲ್ಲಿ ವಿಶೇಷ ಜಾಗೃತಿ:
ಕೋವಿಡ್ ಸೋಂಕು ಅತ್ಯಧಿಕವಾಗಿ ಹರಡುತ್ತಿರುವ ಪ್ರತ್ಯೇಕ ಹಿನ್ನೆಲೆಯಲ್ಲಿ ವಿಶೇಷ ಜಾಗೃತಿ ಮೂಲಕ ಕಾರ್ಯಕ್ರಮ ಜರುಗಿದುದು ಈ ಬಾರಿಯ ವಿಶೇಷತೆಯಾಗಿತ್ತು. ಕೋವಿಡ್ ಪ್ರತಿರೋಧ ಸಂಹಿತೆಗಳನ್ನು ಕಡ್ಡಾಯವಾಗಿ ಪಾಲಿಸಿ ಸಮಾರಭ ನಡೆದಿತ್ತು. ಬೆಳಗ್ಗೆ 9 ಗಂಟೆಗೆ ಆರಂಭಗೊಂಡ ಕಾರ್ಯಕ್ರಮ 9.12ಕ್ಕೂ ಸಮಾಪ್ತಿಗೊಂಡಿತ್ತು. ವಿದ್ಯಾರ್ಥಿ ಪೆÇಲೀಸ್, ಸ್ಕೌಟ್ ಮತ್ತು ಗೈಡ್ಸ್ ಸಹಿತ ವಿದ್ಯಾರ್ಥಿಗಳ ವಿವಿಧ ತಂಡಗಳ ಪಥಸಂಚಲನವನ್ನು, ಸಾಂಸ್ಕøತಿಕ ಕಾರ್ಯಕ್ರಮಗಳನ್ನೂ, ಲಘು ಉಪಹಾರ ವಿತರಣೆ ಇತ್ಯಾದಿ ಕೈಬಿಡಲಾಗಿತ್ತು. 65 ವರ್ಷ ಪ್ರಾಯಕ್ಕಿಂತ ಮೇಲ್ಪಟ್ಟವರಿಗೆ ಮತ್ತು 10 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪ್ರೇಕ್ಷಕರಾಗಿ ಭಾಗವಹಿಸಲೂ ಅನುಮತಿಯಿರಲಿಲ್ಲ. ಸಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ವ್ಯವಸ್ಥೆಗಳಿದ್ದುವು.