ತಿರುವನಂತಪುರ: ಕೋವಿಡ್ ರಕ್ಷಣಾ ಕಾರ್ಯತಂತ್ರಗಳು ವಿಫಲವಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಎಚ್ಚರಿಸಿದ್ದಾರೆ. ರೋಗ ಹರಡುವುದನ್ನು ತಡೆಯುವ ಪ್ರಯತ್ನಗಳಲ್ಲಿ ನಿರ್ಲಕ್ಷ್ಯಗಳು ವ್ಯಾಪಕವಾಗಿ ಕಮಡುಬರುತ್ತಿದೆ. ಈ ಬಗ್ಗೆ ಯಾವುದೇ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಹೇಳಿದರು. ಆನ್‍ಲೈನ್‍ನಲ್ಲಿ ರಾಜ್ಯದ 102 ಹೊಸ ಕುಟುಂಬ ಆರೋಗ್ಯ ಕೇಂದ್ರಗಳ ಉದ್ಘಾಟನೆಯನ್ನು ಸೋಮವಾರ ನಿಔಹಿಸಿದ ವೇಳೆ ಅವರು ಮಾತನಾಡಿದರು.
ಕೋವಿಡ್ ರಕ್ಷಣಾ ಚಟುವಟಿಕೆಗಳಲ್ಲಿ ಅಜಾಗರೂಕತೆ ಮತ್ತು ರಾಜಿ ಕಾರಣ ಪ್ರಸ್ತುತ ಪರಿಸ್ಥಿತಿ ಬಿಗಡಾಯಿಸಲು ಪ್ರಮುಖ ಕಾರಣ ಎಂದು ಸಿಎಂ ಹೇಳಿದರು. ನಾವೆಲ್ಲರೂ ಇದನ್ನು ತಪೆÇ್ಪಪ್ಪಿಗೆಯೊಂದಿಗೆ ನೆನಪಿನಲ್ಲಿಟ್ಟುಕೊಳ್ಳಬೇಕು. ಸಂಪರ್ಕತಡೆಯನ್ನು ಅನುಷ್ಠಾನಗೊಳಿಸುವಲ್ಲಿ ಮತ್ತು ದೈಹಿಕ ದೂರವನ್ನು ಕಾಪಾಡಿಕೊಳ್ಳುವಲ್ಲಿ ಗಂಭೀರತೆಯ ಕೊರತೆಯಿದೆ ಎಂದು ಸಿಎಂ ಗಮನಸೆಳೆದರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಸತತವಾಗಿ ಒಂದು ಸಾವಿರವನ್ನು ದಾಟುತ್ತಿರುವುದರಿಂದ ಮುಖ್ಯಮಂತ್ರಿ ಎಚ್ಚರಿಕೆ ಮಾತಗಳನ್ನಾಡಿದರು. ಇತ್ತೀಚಿನ ಒಮದು ವಾರದಲ್ಲಿ ಕೋವಿಡ್ ಸಂಪರ್ಕ ಮೂಲಕ ವ್ಯಾಪಕ ಹರಡುತ್ತಿದೆ. ಜೊತೆಗೆ ಏಕಾಏಕಿ ಅಧಿಕೃತವಾಗಿ ಸಂಪರ್ಕ ಕಾರಣದಿಂದಲೇ ಕೋವಿಡ್ ದೃಢಪಟ್ಟಿರುವ ಮೊದಲ ರಾಜ್ಯವೂ ಕೇರಳ ಎಂದರು. ರೋಗ ಹರಡುವುದನ್ನು ತಡೆಗಟ್ಟಲು ಸರ್ಕಾರವು ಸಂಪೂರ್ಣ ಲಾಕ್‍ಡೌನ್ ಘೋಷಿಸುವುದಾಗಿ ಸರ್ವಪಕ್ಷ ಸಭೆಯಲ್ಲಿ ಸೂಚಿಸಲಾಗಿತ್ತು. ಆದರೆ ಸಂಪೂರ್ಣ ಲಾಕ್ ಡೌನ್ ಅಗತ್ಯವಿಲ್ಲ ಮತ್ತು ಕ್ಲಸ್ಟರ್ ನಿಯಂತ್ರಣಗಳು ಸಾಕಾಗುವುದೆಮದು ಭಾವಿಸಲಾಯಿತು. ಆದರೆ ಇದೀಗ ಪರಿಸ್ಥಿತಿ ಕೈಮೀರುತ್ತಿರುವುದರಿಂದ ಜಾಗರೂಕತೆತಯೊಂದೇ ದಾರಿಯಿರುವುದೆಮದು ಪಿಣರಾಯಿ ವಿಜಯನ್ ತಿಳಿಸಿದರು.