ಉಪ್ಪಳ: ಕೇರಳ ಕರ್ನಾಟಕ ಗಡಿ ಪ್ರದೇಶವಾದ ಬಾಯಾರು ಬಳಿಯ ಪಾದೆಕಲ್ಲು ಎಂಬ ಪ್ರದೇಶದಲ್ಲಿ ಕೇರಳ ಸರ್ಕಾರವು ರಸ್ತೆಗೆ ಹಾಕಿದ್ದ ಮಣ್ಣನ್ನು ಯುವಮೋರ್ಚ ಮಂಜೇಶ್ವರ ಮಂಡಲ ಕಾರ್ಯಕರ್ತರು ಶನಿವಾರ ಬೆಳಿಗ್ಗೆ ತೆರವುಗೊಳಿಸಿದರು.
ಯುವಮೋರ್ಚ ಮಂಜೇಶ್ವರ ಮಂಡಲಾಧ್ಯಕ್ಷ ಚಂದ್ರಕಾಂತ್ ಶೆಟ್ಟಿಯವರು ಮಣ್ಣು ತೆರವುಗೊಳಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಪೈವಳಿಕೆ ಪಂಚಾಯತಿ ಸಮಿತಿ ಅಧ್ಯಕ್ಷ ಲೋಕೇಶ್ ನೋಂಡ, ಪ್ರಧಾನ ಕಾರ್ಯದರ್ಶಿ ಶ್ರೀಧರ ಬದಿಯಾರ್, ಯುವಮೋರ್ಚ ಪೈವಳಿಕೆ ಪಂಚಾಯತಿ ಸಮೀತಿ ಅಧ್ಯಕ್ಷ ಮನುಕುಮಾರ್ ಪೆರ್ವಡಿ, ಪ್ರಧಾನ ಕಾರ್ಯದರ್ಶಿ ಸಂತೋಷ್ ಬಾಯಾರ್, ಯುವಮೋರ್ಚ ಕಾರ್ಯಕರ್ತರಾದ ವಿ.ಜಿ. ಚಿಪ್ಪಾರ್, ಕೃಷ್ಣ ಪ್ರಸೀತ್, ವಿನೋದ್ ಕುಮಾರ್ ಕಾಯರ್ಕಟ್ಟೆ ಮೊದಲಾದವರು ಭಾಗವಹಿಸಿದ್ದರು.