ಕಾಸರಗೋಡು: ಸ್ವಾತಂತ್ರ್ಯ ದಿನಾಚರಣೆ ಆ.15 ರಂದು ವಿದ್ಯಾನಗರ ನಗರಸಭೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಂದು ಬೆಳಗ್ಗೆ 9 ಗಂಟೆಗೆ ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಧ್ವಜಾರೋಹಣ ನಡೆಸುವರು.
ಪಥಸಂಚನದಲ್ಲಿ ಪೆÇಲೀಸ್ ಸೇನೆಯ 3 ತಂಡಗಳು, ಅಬಕಾರಿ ದಳದ ಒಂದು ತಂಡ ಮಾತ್ರ ಭಾಗವಹಿಸಲಿವೆ. ಪಥಸಂಚನಲ ಇರುವುದಿಲ್ಲ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಸಹಿತ ಆಮಂತ್ರಿತರು ಮಾತ್ರ ಪಾಲ್ಗೊಳ್ಳುವರು.
ಕೋವಿಡ್ ಸೋಂಕು ಹೆಚ್ಚಳ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಪ್ರವೇಶಾತಿ ಇರುವುದಿಲ್ಲ. ಮೂವರು ಡಾಕ್ಟರ್ ಗಳು, ಇಬ್ಬರು ದಾದಿಯರು, ಇಬ್ಬರು ಪಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ಶುಚೀಕರಣ ಕಾರ್ಮಿಕರು ಇರುವರು. ಮೂವರು ಕೋವಿಡ್ ರೋಗದಿಂದ ಗುಣಮುಖರಾದವರು ವಿಶೇಷ ಆಮಂತ್ರಿತರಾಗಿರುವರು. ಗರಿಷ್ಠ ನೂರು ಮಂದಿ ಆಮಂತ್ರಿತರು ಪಾಲ್ಗುಳ್ಳುವಂತೆ ನೋಡಿಕೊಳ್ಳಲಾಗುವುದು.
ರಾಜ್ಯ-ಸ್ಥಳೀಯಾಡಳಿತ-ಆರೋಗ್ಯ ಇಲಾಖೆಗಳ ಆದೇಶ ಪ್ರಕಾರ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಪೆÇಲೀಸ್ ಪಡೆ, ಸ್ಕೌಟ್ ಮತ್ತು ಗೈಡ್ಸ್, ಎನ್.ಸಿ.ಸಿ. ಜ್ಯೂನಿಯರ್ ವಿಭಾಗ ಈ ಬಾರಿ ಭಾಗವಹಿಸಲು ಅನುಮತಿಯಿಲ್ಲ. ದೇಶಭಕ್ತಿ ಗಾಯನಕ್ಕಾಗಿ ಸಹ ಶಾಲಾ ವಿದ್ಯಾರ್ಥಿಗಳು ಸಮಾರಂಭದಲ್ಲಿ ಭಾಗವಹಿಸುವಂತಿಲ್ಲ. 65 ವರ್ಷಕ್ಕಿಂತ ಅಧಿಕ ವಯೋಮಾನದ ವೃದ್ಧರು, 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಸಮಾರಂಭದಲ್ಲಿ ಪ್ರೇಕ್ಷಕರಾಗಿಯೂ ಭಾಗಿಯಾಗಬಾರದು. ಸಾಂಸ್ಕøತಿಕ ಕಾರ್ಯಕ್ರಮಗಳು ಇರುವುದಿಲ್ಲ. ಸಮಾರಂಭದಲ್ಲಿ ಪದಕ, ಬಹುಮಾನ ವಿತರಣೆಯೂ ಇರುವುದಿಲ್ಲ.
ಸಮಾರಂಭದಲ್ಲಿ ಕಠಿಣ ಕೋವಿಡ್ ಪ್ರತಿರೋಧ ಸಂಹಿತೆ ಪಾಲಿಕೆಯಾಗಲಿದೆ. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಸಾನಿಟೈಸರ್ ಬಳಕೆ, ಥರ್ಮಲ್ ಸ್ಕ್ಯಾನಿಂಗ್ ಇತ್ಯಾದಿ ಖಚಿತಪಡಿಸಲಾಗುವುದು.