HEALTH TIPS

ರಾಜ್ಯದಲ್ಲಿ ಕೋವಿಡ್ ಗುಲ್ಲು-ಕೋವಿಡ್ ಸಂಪರ್ಕ ಪಟ್ಟಿಯನ್ನು ಪೋಲೀಸರು ಸಿದ್ಧಪಡಿಸಬಾರದು; ಸರ್ಕಾರಿ ವೈದ್ಯರುಗಳಿಂದ ಮುಖ್ಯಮಂತ್ರಿಗೆ ಪತ್ರ


      ತಿರುವನಂತಪುರ: ರಾಜ್ಯದ ಕೋವಿಡ್ ರೋಗಿಗಳ ಸಂಪರ್ಕ ಪಟ್ಟಿಯನ್ನು ಪೋಲೀಸರಿಗೆ ಹಸ್ತಾಂತರಿಸಲು ವೈದ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ನಿಲುವನ್ನು ವಿರೋಧಿಸಿ ಸರ್ಕಾರಿ ವೈದ್ಯರು ಮುಖ್ಯಮಂತ್ರಿಗೆ ಪತ್ರ ಸಲ್ಲಿಸಿದ್ದರು. ಆರೋಗ್ಯ ಇಲಾಖೆಯ ವೃತ್ತಿ ಗೌಪ್ಯತೆಗಳನ್ನು  ಪೋಲೀಸರಿಗೆ ಹಸ್ತಾಂತರಿಸುವುದನ್ನು ವೈದ್ಯರು ವಿರೋಧಿಸುತ್ತಿದ್ದಾರೆ.
          ವೈದ್ಯರ ಸಂಘದ ಜೊತೆಗೆ ಕೋವಿಡ್ ತಡೆಗಟ್ಟುವ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಆರೋಗ್ಯ ವೃತ್ತಿಪರರ ವಿವಿಧ ಸಂಘಟನೆಗಳು ಸಹ ಪ್ರತಿಭಟನೆಯಲ್ಲಿ ಕೈಜೋಡಿಸಿವೆ.  ಸಂಪರ್ಕ ಪಟ್ಟಿಯನ್ನು ಸಿದ್ಧಪಡಿಸುವುದು ಸೇರಿದಂತೆ ಕಾರ್ಯಗಳನ್ನು ಪೋಲೀಸರಿಗೆ ವಹಿಸುವುದು ಬಹುದೊಡ್ಡ ಪರಿಣಾಮಗಳನ್ನು ಬೀರುತ್ತದೆ ಎಂಬುದು ಕೇರಳ ಗೆಝೆಟೆಡ್ ಮೆಡಿಕಲ್ ಆರ್ಗನೈಸೇಶನ್ (ಕೆಜಿಎಂಒ) ಪ್ರತಿಕ್ರಿಯೆಯಾಗಿದೆ. ಆರೋಗ್ಯ ಕ್ಷೇತ್ರದಲ್ಲಿ ತರಬೇತಿ ಪಡೆದವರು ಇಂತಹ ಕೆಲಸಗಳನ್ನು ಮಾಡಬೇಕು ಮತ್ತು ಸಂಪರ್ಕತಡೆಯಲ್ಲಿರುವ ಜನರ ಸ್ಥಿತಿಯನ್ನು ಪರಿಶೀಲಿಸಲು ಮತ್ತು ಅದರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಮಾತ್ರ ಪೋಲೀಸರನ್ನು ನಿಯೋಜಿಸಬೇಕು ಎಂದು ಕೆಜಿಎಂಒ ಹೇಳಿದೆ. ಈಬಗ್ಗೆ ಕೆಜಿಎಂಒ  ಮುಖ್ಯಮಂತ್ರಿಗೆ ಪತ್ರವನ್ನು ಸಲ್ಲಿಸಿದೆ.
      ಆರೋಗ್ಯ ಇಲಾಖೆಯ ಜವಾಬ್ದಾರಿಗಳನ್ನು ಪೋಲೀಸರಿಗೆ ವರ್ಗಾಯಿಸುವುದರ ವಿರುದ್ಧ ಆರೋಗ್ಯ ನಿರೀಕ್ಷಕರ ಸಂಘ ಮತ್ತು ಐಎಂಎ ಕೂಡಾ ವಿರೋಧ ವ್ಯಕ್ತಪಡಿಸಿದೆ. ಈ ಕ್ರಮವು ಸಮರ್ಥನೀಯವಲ್ಲ ಎಂದು ಐಎಂಎ ಹೇಳಿದೆ ಮತ್ತು ಆರೋಗ್ಯ ಕಾರ್ಯಕರ್ತರು ಕೆಲಸಕ್ಕೆ ಮರಳಬೇಕೆಂದು ಒತ್ತಾಯಿಸಿದೆ. 
       ಕಂಟೈನ್‍ಮೆಂಟ್ ವಲಯಗಳನ್ನು ಒಳಗೊಂಡಂತೆ ಪೋಲೀಸರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ನೀಡಲಾಗುವುದು ಎಂದು ಸೋಮವಾರ ಮುಖ್ಯಮಂತ್ರಿ ಘೋಷಿಸಿದ್ದರು. ಕೋವಿಡ್ ರಕ್ಷಣೆಯಲ್ಲಿ ಎಲ್ಲಡೆ ನಿರ್ಲಕ್ಷ್ಯ ಕಂಡುಬರುತ್ತಿದೆ. ಮತ್ತು ಹೆಚ್ಚಿನ ದೂರುಗಳು ಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದರು. ಇದರ ಬೆನ್ನಲ್ಲೇ, ಕೊಚ್ಚಿ ನಗರ ಆಯುಕ್ತ ಐ.ಜಿ.ವಿಜಯ್ ಸಖಾರೆ ಅವರನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿ ಪೋಲೀಸರಲ್ಲಿ ವ್ಯಾಪಕ ಕರ್ತವ್ಯಗಳನ್ನು ನೀಡಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries