ಕಾಸರಗೋಡು: ಸಂಪರ್ಕ ಮೂಲ ಪತ್ತೆಯಾಗದ ಕೋವಿಡ್ ಸೋಂಕು ಖಚಿತ ಪ್ರಕರಣಗಳಲ್ಲಿ ಕಾಸರಗೋಡು ಜಿಲ್ಲಾ ಮಟ್ಟದಲ್ಲಿ ಕಾಸರಗೋಡು ನಗರಸಭೆ ಮತ್ತು ಪಳ್ಳಿಕ್ಕರೆ ಗ್ರಾಮಪಂಚಾಯತ್ ವ್ಯಾಪ್ತಿ ಪ್ರದೇಶಗಳು ಮುಂಚೂಣಿಯಲ್ಲಿವೆ.
ಆ.5 ವರೆಗಿನ ಗಣನೆ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಸಂಪರ್ಕ ಮೂಲ ಪತ್ತೆಯಾಗದ ಸೋಂಕು ಖಚಿತ ಪ್ರಕರಣಗಳು ಒಟ್ಟು 203 ಆಗಿವೆ. ಜಿಲ್ಲೆಯಲ್ಲಿ ಒಟ್ಟು ರೋಗಬಾಧಿತರ ಸಂಖ್ಯೆ 2195 ಆಗಿದೆ. ಮೂರನೇ ಹಂತದಲ್ಲಿ ಮಾತ್ರ 2016 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಈಗ (ಆ.5 ವರೆಗಿನ ಗಣನೆ) 927 ಮಂದಿ ವಿವಿದೆಡೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1259 ಮಂದಿ ಗುಣಮುಖರಾಗಿದ್ದಾರೆ. ಈ ವರೆಗೆ 9 ಮಂದಿ ಕೋವಿಡ್ ರೋಗಬಾಧೆಯಿಂದ ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 4162 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2946 ಮಂದಿ, ಸಾಂಸ್ಥಿಕವಾಗಿ 1216 ಮಂದಿ ನಿಗಾದಲ್ಲಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 263 ಕಂಟೈ ನ್ಮೆಂಟ್ ಝೋನ್ ಗಳಿವೆ.