ಕಾಸರಗೋಡು: ಜಿಲ್ಲೆಯ ಜನತೆಯ ಅನೇಕ ವರ್ಷಗಳ ಬೇಡಿಕೆಯಾಗಿರುವ ಅನಿಲ(ಗ್ಯಾಸ್) ಚಾಲಿತ ಸ್ಮಶಾನ ನಿರ್ಮಾಣ ಅಂತಿಮ ಹಂತದಲ್ಲಿದೆ.
ಕಾಸರಗೋಡು ಬ್ಲಾಕ್ ಪಂಚಾಯತ್ ವ್ಯಾಪ್ತಿಯಲ್ಲಿ, ಮಧೂರು ಗ್ರಾಮಪಂಚಾಯತಿ ಪಾರೆಕಟ್ಟೆಯಲ್ಲಿ ಮೃತದೇಹಗಳನ್ನು ಗ್ಯಾಸ್ ಬಳಸಿ ಅಂತ್ಯಕ್ರಿಯೆ ನಡೆಸುವ ವ್ಯವಸ್ಥೆ ನಿರ್ಮಾಣಗೊಳ್ಳುತ್ತಿದೆ.
ಶವದಹನಕ್ಕೆ ಸೂಕ್ತ ವ್ಯವಸ್ಥೆ ಬೇಕು ಎಂಬ ನಿರಂತರ ಬೇಡಿಕೆಗಳ ಹಿನ್ನೆಲೆಯಲ್ಲಿ ಕಾಸರಗೋಡು ಬ್ಲಾಕ್ ಪಂಚಾಯತ್ ತಳೆದಿರುವ ಪ್ರತ್ಯೇಕ ಕಾಳಜಿಯ ಹಿನ್ನೆಲೆಯಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ. ಈಗ ಕಾಸರಗೋಡು ವಲಯದಲ್ಲಿ ಸೂಕ್ತ ಗ್ಯಾಸ್ ಬಳಕೆ ಸ್ಮಶಾನವಿಲ್ಲ. ಈ ಮೂಲಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರವಾಗಲಿದೆ ಎಂದು ಬ್ಲಾಕ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮುಹಮ್ಮದ್ ಕುಂಞÂ ಚಾಯಿಂಡಡಿ ತಿಳಿಸಿರುವರು.
ಮೂರು ವರ್ಷಗಳ ಹಿಂದೆಯೇ ಈ ಸಂಬಂಧ ನಿರ್ಮಾಣ ಪ್ರಕ್ರಿಯೆ ಆರಂಭಗೊಂಡಿದ್ದರೂ, ವಿವಿಧ ತಾಂತ್ರಿಕ ಕಾರಣಗಳಿಂದ ನಿರ್ಮಾಣ ವಿಳಂಬವಾಗಿತ್ತು. ನಂತರ ಕಳೆದ ಫೆಬ್ರವರಿ ತಿಂಗಳಲ್ಲಿ ನಿರ್ಮಾಣ ಮರಳಿ ಪ್ರಾರಂಭವಾಗಿದ್ದು, ಸೆಪ್ಟೆಂಬರ್ ನಲ್ಲಿ ಪೂರ್ತಿಗೊಳ್ಳುವ ನಿರೀಕ್ಷೆಯಿದೆ ಎಂದವರು ನಿರೀಕ್ಷೆ ವ್ಯಕ್ತಪಡಿಸಿದರು.
90 ಲಕ್ಷ ರೂ.ನ ಯೋಜನೆ:
ಈ ಸ್ಮಶಾನ ನಿರ್ಮಾಣ 90 ಲಕ್ಷ ರೂ.ನಲ್ಲಿ ನಿರ್ಮಾಣಗೊಳ್ಳಳಿದೆ. ಕಾಸರಗೋಡು ಬ್ಲೋಕ್ ಪಂಚಾಯತ್ 56 ಲಕ್ಷ ರೂ., ಮಧೂರು ಗ್ರಾಮಪಂಚಾಯತ್ 34 ಲಕ್ಷ ರೂ. ಈ ನಿಟ್ಟಿನಲ್ಲಿ ಮೀಸಲಿರಿಸಿವೆ. ಮಧೂರು ಪಂಚಾಯತ್ ಸ್ವಾಮ್ಯದ ಪಾರೆಕಟ್ಟೆ ಪ್ರದೇಶದ 50 ಸೆಂಟ್ಸ್ ಜಾಗದಲ್ಲಿ ಯೋಜನೆಯ ನಿರ್ಮಾಣ ಸಾಗುತ್ತಿದೆ.
ಹಿಂದಿನಿಂದಲೇ ಈ ಪ್ರದೇಶದಲ್ಲಿ ಮೃತದೇಹಗಳನ್ನು ಸುಡುವ ಪ್ರಕ್ರಿಯೆ ನಡೆದುಬರುತ್ತಿದೆ. ಗ್ಯಾಸ್ ಬಳಸಿ ಸುಡುವ ಮೂಲಕ ಬೇಗನೆ ಶವಗಳನ್ನು ಸುಡಬಹುದು, ದುಗರ್ಂಧ ಪಸರಿಸುವ ಸಾಧ್ಯತೆಗಳಿರುವುದಿಲ್ಲ ಇತ್ಯಾದಿ ಸಮಸ್ಯೆಗಳಿಂದ ಪಾರಾಗಬಹುದಾಗಿದೆ. ಎಲ್.ಪಿ.ಜಿ. ಅನಿಲವನ್ನು ಈ ನಿಟ್ಟಿನಲ್ಲಿ ಬಳಸಲಾಗುವುದು. ಯೋಜನೆ ಪೂರ್ಣಗೊಂಡ ನಂತರ ಗ್ರಾಮಪಂಚಾಯತ್ ಗೆ ಈ ವ್ಯವಸ್ಥೆಯ ಪೂರ್ಣ ಹೊಣೆಯಿರುವುದು.
ಶುಚಿತ್ವ ಮಿಷನ್ ನ ಎಂಪಾನಲ್ಡ್ ಪಟ್ಟಿಯಲ್ಲಿರುವ ಜ್ವಾಲಾ ಎಂಬ ಸಂಸ್ಥೆ ತಾಂತ್ರಿಕ ವ್ಯವಸ್ಥೆಯನ್ನು ಒದಗಿಸಲಿದೆ. ಮೊದಲ ಹಂತದಲ್ಲಿ ತಾಂತ್ರಿಕ ಪರಿಣತರು ಇಲ್ಲಿನ ಸಿಬ್ಬಂದಿಗೆ ಸಹಾಯ ಒದಗಿಸಲಿದ್ದಾರೆ.
ಈ ಯೋಜನೆಯ ಜೊತೆಯಲ್ಲೇ ಕಾಡು ಪೆÇದೆ ತೆರವುಗೊಳಿಸಿ, ಸ್ಮಶಾನದ ಆವರಣವನ್ನು ಶುಚಿಗೊಳಿಸುವ, ಸಂತಾಪ ಸೂಚಕ ಸಮಾರಂಭಗಳನ್ನು ನಡೆಸುವ ನಿಟ್ಟಿನಲ್ಲಿ ಸಭಾಂಗಣವೊಂದನ್ನು ನಿರ್ಮಿಸುವ ಉದ್ದೇಶವೂ ಇಲ್ಲಿದೆ.