ಪ್ರಖ್ಯಾತ ಹಿನ್ನೆಲೆ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕೆಲವು ದಿನಗಳ ಹಿಂದೆ ಕೊರೋನಾವೈರಸ್ ಸೋಂಕಿಗೆ ತಿತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದರು, ಇಂದು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ವೆಂಟಿಲೇಟರ್ ಅಳವಡಿಸಲಾಗಿದೆ ಎಂಬ ಸುದ್ದಿ ಬೆನ್ನಲ್ಲೇ ಅವರ ಅಪಾರ ಅಭಿಮಾನಿ ಬಳಗ ಆತಂಕಕ್ಕೆ ಒಳಗಾಗಿದೆ, ಆದರೆ ಇದೀಗ ಸ್ವತಃ ಬಾಲಸುಬ್ರಹ್ಮಣ್ಯಂ ಅವರೇ ಫೇಸ್‌ಬುಕ್ ಪ್ರೊಫೈಲ್ ಮೂಲಕ ವಿಡಿಯೋ ಸಂದೇಶ ಹಾಕಿದ್ದು ತಾವು ಆರೋಗ್ಯವಾಗಿರುವುದಾಗಿ ಸಂಜ್ಞೆಯ ಮೂಲಕ ಸ್ಪಷ್ಟಪಡಿಸಿದ್ದಾರೆ.
"ತಮ್ಮ ಕುಟುಂಬ ಸದಸ್ಯರ ಆರೋಗ್ಯವನ್ನು ಅಪಾಯಕ್ಕೆ ತಳ್ಳಲು ಇಚ್ಚಿಸದೆ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲು ಬಯಸಿದ್ದೇನೆ "ಎಸ್‌ಪಿಬಿ ಹೇಳಿದ್ದಾರೆ.
ಗಾಯಕರ ಪುತ್ರರಾದ ಎಸ್‌ಪಿ ಚರಣ್ ಪತ್ರಿಕಾಗೋಷ್ಠಿಯನ್ನು ನಡೆಸಿ "ತಂದೆಯವರ ಆರೋಗ್ಯ ಸ್ಥಿರವಾಗಿದೆ, ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎಂದಿದ್ದು ಇದು ಎಲ್ಲಾ ತಮಿಳು ಸುದ್ದಿ ಮಾದ್ಯಮಗಳಲ್ಲಿ ವರದಿಯಾಗಿದೆ,
ಇದೀಗ ಗಾಯಕನ ಅಭಿಮಾನಿಗಳಲ್ಲಿ ಆಶಾವಾದ ತುಂಬಲು ಆಸ್ಪತ್ರೆ ಯಿಂದ ಎಸ್‌ಪಿಬಿಯ ಹೆಬ್ಬೆರಳು ತೋರಿಸುವ ಚಿತ್ರದೊಂದಿಗೆ ಸೌಂಡ್ ನೋಟ್ ಸಹ ಬಿಡುಗಡೆಯಾಗಿದೆ, ಅವರ ಅನಾರೋಗ್ಯದ ಸುದ್ದಿ ಹೊರಬಂದಾಗಿನಿಂದಲೂ ಅವರ ಅಪಾರ ಭಿಮಾನಿಗಳಿಗೆ ಇದು ಸಮಾಧಾನ ತಂದಿದೆ.