ಕೊಚ್ಚಿ: ತನ್ನ ಬೆತ್ತಲೆ ದೇಹದ ಚಿತ್ರವನ್ನು ಮಕ್ಕಳೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಹರಡಿದ ಪ್ರಕರಣದಲ್ಲಿ ರಹನಾ ಫಾತಿಮಾಳಲ್ಲಿ ಶುಕ್ರವಾಶರ ಕಟು ಶಬ್ದಗಳಿಂದ ವಿಮರ್ಶಿಸಿ ಜಾಮೀನು ನಿರಾಕರಿಸಿದ ಬೆನ್ನಿಗೆ ಫಾತಿಮಾ ಈ ಬಗ್ಗೆ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಮತ್ತೆ ತನ್ನ ನಿಲುವಿಗೇ ಅಂಟಿಕೊಂಡಿರುವ ಸಂದೇಶ ರವಾನಿಸಿದ್ದಾಳೆ.
ಹೆಚ್ಚಿನ ತನಿಖೆ ಮತ್ತು ಕಾನೂನು ಕ್ರಮಗಳಿಗೆ ತಾನು ವಿಧೇಯಳಾಗುವೆ. ಆದರೆ ಸಾಮಾಜಿಕ ಬದಲಾವಣೆ, ಲಿಂಗ ಸಮಾನತೆ ಮತ್ತು ಸ್ತ್ರೀ ದೇಹದ ಅತಿಯಾದ ಲೈಂಗಿಕತೆಯ ವಿರುದ್ಧದ ಹೋರಾಟವನ್ನು ಬೆಂಬಲಿಸಿದ ಎಲ್ಲರಿಗೂ ವಂದನೆಗಳು. ನನ್ನ ವಾದ ಸರಿ ಎಂದು ಸಮಯ ಸಾಬೀತುಪಡಿಸಲಿ 'ಎಂದು ರಹನಾ ಫಾತಿಮಾ ಫೇಸ್‍ಬುಕ್‍ನಲ್ಲಿ ಬರೆದಿದ್ದಾಳೆ.
ರೆಹೆನಾ ಫಾತಿಮಾಳು ತನ್ನ ದೇಹದ ಮೇಲೆ ಮಕ್ಕಳಿಂದ ಚಿತ್ರಗಳನ್ನು ಬರೆಯಿಸಿದ ಪ್ರಕರಣದ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಲು ನಿರಾಕರಿಸಿದೆ. ನ್ಯಾಯಾಲಯವು ಕಟು ಶಬ್ದಗಳಿಂದ ಪ್ರಶ್ನೆಗಳ ಸುರಿಮಳೆಗೈದಿದ್ದು, ಮಕ್ಕಳಿಂದ ಇಂತಹ ಕೆಲಸಗಳನ್ನು ಮಾಡಿಸುವುದು ಯಾಕೆ, ಮುಂದೇನಾಗಲಿದೆ ಎಂಬ ವಿವೇಚನೆ ಇದೆಯೇ ಎಂದು ಕೇಳಿದೆ.
ಲೈಂಗಿಕತೆಯ ಬಗ್ಗೆ ಸಂಕುಚಿತ ದೃಷ್ಟಿಕೋನಗಳನ್ನು ಇಲ್ಲವಾಗಿಸಲು, ಆ ಬಗ್ಗೆ ಪ್ರಚಾರ ಮಾಡಲು ಪ್ರಯತ್ನಿಸುತ್ತಿರುವುದಾಗಿ ರಹನಾ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದರು. ನ್ಯಾಯಮೂರ್ತಿ ಅರುಣ್ ಮಿಶ್ರಾ ಈ ಪ್ರಕರಣವನ್ನು ಸಂಪೂರ್ಣವಾಗಿ ಆಘಾತಕಾರಿ ಎಂದು ಬಣ್ಣಿಸಿದ್ದಾರೆ. ಹಾಗಿದ್ದರೆ ಭಾರತೀಯ ಸಂಸ್ಕøತಿ ಎಂದರೆ ಏನು ಎಂದು ಕೇಳಿದರು. ಇದು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ವ್ಯಾಪ್ತಿಗೆ ಬರುತ್ತದೆ ಎಂದು ಬೊಟ್ಟುಮಾಡಿರುವರು.