ಕಾಸರಗೋಡು: ಪೋಲೀಸರು ಮಾಹಿತಿ ಸಂಗ್ರಹಕ್ಕಾಗಿ ಕಡಪ್ಪುರಕ್ಕೆ ಕರೆದೊಯ್ದಾಗ ಸಮುದ್ರಕ್ಕೆ ಹಾರಿ ನಾಪತ್ತೆಯಾಗಿದ್ದ ಕಾಸರಗೋಡು ಕೂಡ್ಲು ಕಾಳ್ಯಂಗಾಡ್‍ನ ಮಹೇಶ್(22) ಮೃತ ದೇಹ ಬುಧವಾರ ಬೆಳಗ್ಗೆ ಉಡುಪಿ ಸಮುದ್ರ ತೀರದಲ್ಲಿ ಪತ್ತೆಯಾಗಿದೆ.
ಬಟ್ಟೆಬರೆಗಳು ಹಾಗು ಕೈಯಲ್ಲಿದ್ದ ಕೋಳದ ಸಹಾಯದಿಂದ ಮೃತದೇಹದ ಗುರುತು ಪತ್ತೆಹಚ್ಚಲಾಗಿದೆ. 15 ದಿನಗಳ ಬಳಿಕ ಮೃತದೇಹ ಪತ್ತೆಯಾಗಿದೆ. ಪೋಕ್ಸೋ ಪ್ರಕರಣದಲ್ಲಿ ಆರೋಪಿಯಾದ ಮಹೇಶ್‍ನನ್ನು ಜುಲೈ 21 ರಂದು ಪೆÇಲೀಸರು ಬಂ„ಸಿದ್ದರು. ಬಳಿಕ ಆತನ ಮೊಬೈಲ್ ಫೆÇೀನ್ ಪತ್ತೆಹಚ್ಚಲೆಂದು ಪೋಲೀಸರು ಜುಲೈ 22 ರಂದು ಬೆಳಗ್ಗೆ ಕಸಬಾ ಕಡಪ್ಪುರಕ್ಕೆ ಕರೆದೊಯ್ದಿದ್ದರು. ಈ ವೇಳೆ ಪೋಲೀಸರ ಕೈಯಿಂದ ತಪ್ಪಿಸಿಕೊಂಡ ಮಹೇಶ್ ಸಮುದ್ರಕ್ಕೆ ಹಾರಿದ್ದನು. ಅಂದಿನಿಂದಲೇ ಶೋಧ ಆರಂಭಿಸಿದ್ದರೂ ಪತ್ತೆಯಾಗಿರಲಿಲ್ಲ. ಉಡುಪಿಯಲ್ಲಿ ಮೃತದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಕಾಸರಗೋಡು ಪೋಲೀಸರು ಉಡುಪಿಗೆ ತೆರಳಿದ್ದಾರೆ.