ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ 74 ನೇ ಸ್ವಾತಂತ್ರೋತ್ಸವವನ್ನು ಬೆಳಗ್ಗೆ ಪ್ರೆಸ್ ಕ್ಲಬ್ ಕಚೇರಿಯಲ್ಲಿ ಕೋವಿಡ್ ಮಾನದಂಡಗಳನ್ನು ಪಾಲಿಸಿ ಆಚರಿಸಲಾಯಿತು.
ಮಂಜೇಶ್ವರ ಪ್ರೆಸ್ ಕ್ಲಬ್ ಅಧ್ಯಕ್ಷ ಅಬ್ದುಲ್ ರಹಮಾನ್ ಉದ್ಯಾವರ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಓಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ. ನವೀನ್ ರಾಜ್ ಕೆ.ಜೆ, ಕೇರಳ ಸರ್ಕಾರದ ಪಾರ್ತಿಸುಬ್ಬ ಯಕ್ಷಗಾನ ಕಲಾ ಕ್ಷೇತ್ರ ಸದಸ್ಯ, ಯಕ್ಷಗಾನ ಸಂಘಟಕ ಸಂಕಬೈಲು ಸತೀಶ್ ಅಡಪ, ಮಂಜೇಶ್ವರ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಅರಿಫ್ ಮಚ್ಚಂಪಾಡಿ, ಪದಾಧಿಕಾರಿಗಳಾದ ಪತ್ರಕರ್ತರಾದ ಸಲಾಂ ವರ್ಕಾಡಿ, ರತನ್ ಕುಮಾರ್ ಹೊಸಂಗಡಿ, ರವಿ ಪ್ರತಾಪ ನಗರ, ಛಾಯಾಗ್ರಾಹಕ ದೀಪಕ್ ರಾಜ್ ಉಪ್ಪಳ ಮೊದಲಾದವರು ನೇತೃತ್ವ ನೀಡಿದರು. ಈ ಸಂದರ್ಭ ವ್ಯಾಪಾರಿ ಬಂಧುಗಳು ಸಹಿತ ಹಲವರು ಉಪಸ್ಥಿತರಿದ್ದರು. ಮಂಜೇಶ್ವರ ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಆರಿಫ್ ಮಚ್ಚಂಪಾಡಿ ಸ್ವಾಗತಿಸಿ, ಪ್ರೆಸ್ ಕ್ಲಬ್ ಜೊತೆ ಕಾರ್ಯದರ್ಶಿ ರತನ್ ಕುಮಾರ್ ಹೊಸಂಗಡಿ ವಂದಿಸಿದರು.