ಕಾಸರಗೋಡು: ರಾಜ್ಯ ಸರಕಾರದ ಆದೇಶ ಪ್ರಕಾರ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳಿಗೆ ಸ್ವಗೃಹದಲ್ಲೇ ಚಿಕಿತ್ಸೆ ನೀಡುವ ಸೌಲಭ್ಯ ಏರ್ಪಡಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಇದೇ ವೇಳೆ 65 ವರ್ಷ ದಾಟಿವರನ್ನು, ಗರ್ಭಿಣಿಯರನ್ನು, ಹತ್ತು ವರ್ಷಕ್ಕಿಂತ ಕೆಳಗಿನ ಮಕ್ಕಳನ್ನು ಹೊರತುಪಡಿಸಿ, ರೋಗ ಲಕ್ಷಣ ಹೊಂದದೇ ಇರುವ, ಮನೆಗಳಲ್ಲಿ ಅಗತ್ಯದ ಎಲ್ಲ ಸೌಕರ್ಯಗಳಿರುವ ಕೊಠಡಿ ಹೊಂದಿರುವ ಮಂದಿಗೆ ಸ್ವಗೃಹಗಳಲ್ಲೇ ಚಿಕಿತ್ಸೆ ಒದಗಿಸಲಾಗುವುದು ಎಂದವರು ಸ್ಪಷ್ಟಪಡಿಸಿದರು.
ಮನೆಗಳಲ್ಲಿ ಚಿಕಿತ್ಸೆ ಪಡೆಯ ಬಯಸುವ ರೋಗಿಗಳು ಈ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸಬೇಕು:
1. ಪೆÇೀಷಕ ಸಮೃದ್ಧವಾಗಿರುವ ಆಹಾರ ಸೇವನೆ ನಡೆಸಬೇಕು.
2. ಧಾರಾಳ ಶುದ್ಧ ನೀರು ಸೇವಿಸಬೇಕು. ದೇಹದಲ್ಲಿ ಜಲಾಂಶ ಕಡಿಮೆಯಾಗದಂತೆ ನೋಡಿಕೊಳ್ಳಬೇಕು.
3. ಪ್ರತಿ ರಾತ್ರಿ 7-8 ತಾಸು ನಿದ್ದೆ ಮಾಡಬೇಕು.
4. ಯಾವುದೇ ರೀತಿಯ ರೋಗ ಲಕ್ಷಣ, ಅಸ್ವಸ್ಥತೆ ಕಂಡುಬಂದಲ್ಲಿ(ಜ್ವರ, ಶೀತ, ಗಂಟಲುನೋವು, ಕ್ಷೀಣ, ಉಸಿರಾಟ ತೊಂದರೆ ಬಾಯಿರುಚಿ ಕೆಡುವುದು, ವಾಂತಿ-ಬೇಧಿ ಇತ್ಯಾದಿ) ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
5. ಹೃದಯ ಬಡಿತ ಹೆಚ್ಚಳ, ಚಿತ್ತ ಭ್ರಮಣೆ, ಎದೆನೋವು, ತಲೆಸುತ್ತು, ರಕ್ತವಾಂತಿ, ಮೂರ್ಛೆ ತಪ್ಪುವುದು ಇತ್ಯಾದಿ ಕಂಡುಬಂದಲ್ಲೂ ತಕ್ಷಣ ಆರೋಗ್ಯ ಇಲಾಖೆಗೆ ಮಾಹಿತಿ ನೀಡಬೇಕು.
ಇಂಥಾ ಅನುಭವಗಳಾದಲ್ಲಿ ಆರೋಗ್ಯ ಕೇಂದ್ರ ಯಾ ಕಾಸರಗೋಡು ಜಿಲ್ಲಾ ನಿಯಂತ್ರಣ ಘಟಕ(ದೂರುವಾಣಿ ಸಂಖ್ಯೆ: 994600293, 9946895555), ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನ ಡ್ಯೂಟಿ ಡಾಕ್ಟರ್(ದೂರವಾಣಿ ಸಂಖ್ಯೆ: 9072533388.) ಅವರನ್ನು ಸಂಪರ್ಕಿಸಬೇಕು.
6. ರೋಗಲಕ್ಷಣವನ್ನು ನಿಖರವಾಗಿ ನಮೂದಿಸುವ ನಿಟ್ಟಿನಲ್ಲಿ ರೋಗಿ ಡೈರಿಯೊಂದನ್ನು ಇರಿಸಿಕೊಳ್ಳಬೇಕು.
7. ರೋಗಿಯ ಆಹಾರ, ಇನ್ನಿತರ ಅಗತ್ಯಗಳಿಗಾಗಿ ಪರಿಚರಣೆಗೆ ಸಿದ್ಧರಾದವರು ತ್ರಿಲೇರ್ ಮಾಸ್ಕ್ ಧರಿಸಬೇಕು, ಕನಿಷ್ಠ 2 ಮೀಟರ್ ಶಾರೀರಿಕ ಅಂತರ ಕಾಯ್ದುಕೊಳ್ಳಬೇಕು.
8. ಮನೆಯ ಇತರ ಸದಸ್ಯರು ಆಹಾರ ಸೇವಿಸುವ ಕಡೆಗೆ, ನಿದ್ರಿಸುತ್ತಿರುವ ಕಡೆಗೆ ರೋಗಿ ತೆರಳಕೂಡದು. ಆ ಕೊಠಡಿಗಳನ್ನು ರೋಗಿ ಬಳಸಕೂಡದು. ಮನೆಯ ಇತರ ಸದಸ್ಯರು ರೋಗಿಯೊಂದಿಗೆ ಸಂಪರ್ಕ ನಡೆಸಕೂಡದು.
9. ಮನೆಯ ಇತರ ಸದಸ್ಯರು ಬಳಸುವ ಟೀವಿ ರಿಮೋಟ್, ಮೊಬೈಲ್ ಫೆÇೀನ್, ಪಾತ್ರೆ,ಲೋಟ ಸಹಿತ ನಿತ್ಯೋಪಯೋಗಿ ಉಪಕರಣಗಳನ್ನು ರೋಗಿ ಬಳಸಕೂಡದು.
10. ರೋಗಿಯ ಬಟ್ಟೆಗಳನ್ನು ತಾವಿರುವ ಕೋಣೆಯ ಶೌಚಾಲಯದಲ್ಲಿ ತಾನೇ ಒಗೆದುಕೊಳ್ಳಬೇಕು. ಒಣಗಿಸುವ ನಿಟ್ಟಿನಲ್ಲಿ ಮಾತ್ರ ಆ ಬಟ್ಟೆಯನ್ನು ಪರಿಚರಣೆಗೆ ನಿಂತವರಿಗೆ ಹಸ್ತಾಂತರಿಸಬೇಕು. ರೋಗಿ ಸ್ಪರ್ಶಿಸಿದ ಜಾಗವನ್ನು ತಕ್ಷಣವೇ ರೋಗಾಣುಮುಕ್ತ ಗೊಳಿಸಬೇಕು.
11. ಈ ಮನೆಗೆ ಯಾವ ಕಾರಣಕ್ಕೂ ಸಂದರ್ಶಕರು ಬರಕೂಡದು.
12. ರೋಗಿ ಕೆಮ್ಮುವ ವೇಳೆ ಕರವಸ್ತ್ರದಿಂದ ಬಾಯಿ, ಮೂಗು ಮುಚ್ಚಿಕೊಳ್ಳಬೇಕು.
13. ಕೈಗಳನ್ನು ಆಗಾಗ ಸಾಬೂನು ಯಾ ಹ್ಯಾಂಡ್ ವಾಷ್ ಬಳಸಿ ಶುಚಿಕೊಳಿಸಬೇಕು.
14. ಮನೆಯೊಳಗಿನ ತ್ಯಾಜ್ಯಗಳನ್ನುಹೊರಬದಿ ಉರಿಸಬೇಕು. ಉರಿಸಲಾಗದೇ ಇರುವ ತ್ಯಾಜ್ಯವಾಗಿದ್ದರೆ ಬ್ಲೀಚಿಂಗ್ ಪುಡಿ ಬಳಸಿ ರೋಗಾಣುಮುಕ್ತಗೊಳಿಸಬೇಕು. ಜೈವಿಕ ತ್ಯಾಜ್ಯಗಳನ್ನು ಮಣ್ಣಿನಡಿ ಹೂತುಹಾಕಬೇಕು ಎಂದವರು ತಿಳಿಸಿದರು.