ನವದೆಹಲಿ: ಕಾಂಗ್ರೆಸ್ ಪಕ್ಷಕ್ಕೆ ಮಾರ್ಗದರ್ಶಕನಿಲ್ಲ ಎಂಬ ಭಾವನೆಯನ್ನು ತೊಲಗಿಸಲು ಪೂರ್ಣಾವಧಿಯ ಅಧ್ಯಕ್ಷರು ಅತ್ಯಂತ ಅಗತ್ಯವಾಗಿದೆ ಎಂದು ಆ ಪಕ್ಷದ ಹಿರಿಯ ನಾಯಕ ಶಶಿತರೂರ್ ಹೇಳಿದ್ದಾರೆ.
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಆ ಹೊಣೆಗಾರಿಕೆಯನ್ನು ನಿರಂತರವಾಗಿ, ಅಪರಿಮಿತವಾಗಿ ನಿರ್ವಹಿಸಬೇಕು ಎಂದು ಆಶಿಸುವುದು ಅನ್ಯಾಯ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾವಿಕನಿಲ್ಲದ ನೌಕೆ, ಮಾರ್ಗದರ್ಶಕನಿಲ್ಲದ ಪಕ್ಷ ಎಂಬ ಭಾವನೆಯನ್ನು ಹಿಮ್ಮೆಟ್ಟಿಸಲು ಪೂರ್ಣ ಕಾಲಿಕ ಅಧ್ಯಕ್ಷರನ್ನು ಹುಡುಕುವ ಪ್ರಕ್ರಿಯೆಯನ್ನು ವೇಗಗೊಳಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ.