ಕಾಸರಗೋಡು: ಕೋವಿಡ್ ಸೋಂಕಿನ ಹನ್ನೆಲೆಯಲ್ಲಿ ಸಂಕಷ್ಟ ಅನುಭವಿಸುತ್ತಿರುವ ಹಾಲು ಉತ್ಪಾದಕರಿಗೆ ಕೈ ಸಹಾಯ ಒದಗಿಸುವ ಉದ್ದೇಶದಿದ ರಾಜ್ಯ ಹಾಲು ಅಭಿವೃದ್ಧಿ ಇಲಾಖೆ ಹಿಂಡಿ ವಿತರಣೆ ನಡೆಸಲಿದೆ. ಹಾಲು ಉತ್ಪಾದಕ ಸಂಘಗಗಳಲ್ಲಿ ಏಪ್ರಿಲ್ ಹಾಲು ಅಳತೆ (ವಿತರಣೆ) ನಡೆಸಿರುವ ಕೃಷಿಕರಿಗೆ ಗರಿಷ್ಠ 5 ಗೋಣಿಚೀಲ ಹಿಂಡಿ, ಗೋಣಿಯೊಂದಕ್ಕೆ 400 ರೂ.ನ ಸಬ್ಸಿಡಿ ಸಹಿತ ವಿತರಣೆ ನಡೆಯಲಿದೆ.
ಯೋಜನೆಯ ರಾಜ್ಯ ಮಟ್ಟದ ಉದ್ಘಾಟನೆ ಆ.17ರಂದು ಬೆಳಗ್ಗೆ 10 ಗಂಟೆಗೆ ಹಾಲು ಉತ್ಪಾದನೆ ಇಲಾಖೆ ಸಚಿವ,ನ್ಯಾಯವಾದಿ ಕೆ.ಕೆ.ರಾಜು ಫೇಸ್ ಬುಕ್ಲೈವ್ ಮೂಲಕ ನಡೆಸುವರು. ಕಾಸರಗೋಡು ಜಿಲ್ಲಾ ಮಟ್ಟದ ಉದ್ಘಾಟನೆ ಆ.17ರಂದು
ಮಧ್ಯಾಹ್ನ 3.30ಕ್ಕೆ ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ನೆರವೇರಿಸುವರು. ಈ ಯೋಜನೆಯ ಸೌಲಭ್ಯ ಕಾಸರಗೋಡು ಜಿಲ್ಲೆಯ 7327 ಕೃಷಿಕರಿಗೆ ಲಭಿಸಲಿದೆ.