ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ ನಾಲ್ಕನೇ ವಾರ್ಡ್ ನಾಗರಿಕರು ಕಳೆದ ಹಲವು ತಿಂಗಳುಗಳಿಂದ ಮೂರುಗೊಳಿ ಹಾಗೂ ಪಾವಳದಲ್ಲಿ ಕೊವಿಡ್ ಸಂಬದ್ದ ಸಂಚಾರ ನಿಯಂತ್ರಣಕ್ಕೆ ಕಾದು ಕುಳಿತಿರುವ ಪೆÇೀಲಿಸರಿಂದ ಬಾರಿ ಕಿರಿಕಿರಿ ಅನುಭವಿಸುತ್ತಿರುವುದಾಗಿ ತಿಳಿದುಬಂದಿದೆ.
ನಾಲ್ಕನೇ ವಾರ್ಡ್ ಜನರು ದಿನ ಬಳಕೆ ಆವಶ್ಯಕತೆಗೆ ಮಜೀರ್ಪಳ್ಳಕ್ಕೆ ಬರಬೇಕಾಗಿದೆ. ಪಡಿತರ, ವಿದ್ಯುತ್ ಬಿಲ್ ಪಾವತಿ, ಮನೆತೆರಿಗೆ ಇತ್ಯಾದಿ ಪಾವತಿಸಲು ಬರುವವರನ್ನು ಪೆÇಲೀಸ್ ತಡೆಯುತ್ತಿದ್ದು, ಕೃಷಿಕರು ಅಡಿಕೆ ಮಾರಾಟ ಮಾಡಲು ತೆರಳಲೂ ಸಮ್ಮತಿಸುತ್ತಿಲ್ಲ. ಇದರಿಂದ ನೊಂದ ಊರಿನ ನಾಗರಿಕರು ಇತ್ತೀಚೆಗೆ ಗ್ರಾ.ಪಂ. ಸದಸ್ಯ, ಸಿಪಿಐ ವರ್ಕಾಡಿ ಲೋಕಲ್ ಸೆಕ್ರೆಟರಿ ಸಿದ್ದೀಖ್ ಪಾಡಿ ಅವರ ನೇತೃತ್ವದಲ್ಲಿ ಪೆÇಲಿಸರನ್ನು ಭೇಟಿಯಾಗಿ ಚರ್ಚೆ ನಡೆಸಿದರು.
ಮಂಜೇಶ್ವರ ಸಿಐ ಅನೂಪ್ ಅವರನ್ನು ಸ್ಥಳಕ್ಕೆ ಕರೆಸಿ ವಿಷಯ ಅವರಲ್ಲಿ ಸಮಸ್ಯೆಯ ಬಗ್ಗೆ ಮನದಟ್ಟು ಮಾಡಲಾಯಿತು. ಸಿಐ ಅವರು ಊರಿನ ನಾಗರಿಕರಿಗೆ ತೊಂದರೆ ಕೊಡಬಾರದೆಂದು ಪೆÇೀಲಿಸರೀಗೆ ನಿರ್ದೇಶನ ನೀಡಿದರು. ಪೆÇೀಲಿಸರು ಕೇರಳ ಕರ್ನಾಟಕ ಗಡಿ ಪ್ರದೇಶದಲ್ಲಿ ತಪಾಸಣೆ ನಡೆಸುತ್ತಿದ್ದು. ಗಡಿಯಿಂದ ಅನತಿ ದೂರದಲ್ಲಿ ಕೇರಳದ ಭಾಗದಲ್ಲೇ ನಿಂತು ತಪಾಸಣೆ ನಡೆಸುತ್ತಿದ್ದಾರೆ. ಆದ್ದರಿಂದ ಪೆÇಲೀಸರನ್ನು ಗಡಿ ಪ್ರದೇಶದಲ್ಲಿ ನಿಲ್ಲಿಸಬೇಕೆಂದು ಕಾಸರಗೋಡು ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.