ಬೆಂಗಳೂರು: ಭಾರತದ ಅತಿದೊಡ್ಡ ಪೈಂಟ್ ಹಾಗು ಅಲಂಕರಣ ಸಂಸ್ಥೆಯಾದ ಏಶ್ಯನ್ ಪೈಂಟ್ಸ್ ಸಂಸ್ಥೆಯು 'ಸುಂದರ ಗೃಹಗಳ ಸೇವೆ' ಎಂಬ ಯೋಜನೆಯನ್ನು ಆರಂಭಿಸಿದೆ.
ಗೃಹ ನಿರ್ಮಾಣದ ಭಾವನೆಯ ಅವಿಭಾಜ್ಯ ಅಂಗವಾಗಿರಲು ಸದಾ ಪ್ರಯತ್ನಿಸುತ್ತಿದೆ. ಇದನ್ನು ಗಮನದಲ್ಲಿರಿಸಿಕೊಂಡು, ಜನರು ತಮ್ಮ ಮನೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ಪರಿವರ್ತಿಸಿಕೊಳ್ಳುವುದಕ್ಕೆ ನೆರವಾಗಲು, ಒಂದು ಹೊಸ, ಸುಲಭ ಹಾಗು ತೊಂದರೆಯಿಲ್ಲದ ಸೇವೆಯನ್ನು ಪರಿಚಯಿಸಿದೆ. ಏಶ್ಯನ್ ಪೈಂಟ್ಸ್ ಅವರ ಸುಂದರ ಗೃಹಗಳ ಸೇವೆ ಗ್ರಾಹಕರು ತಮ್ಮ ಕನಸಿನ ಮನೆಗಳನ್ನು ತಮಗಿಷ್ಟವಾದ ರೀತಿಯಲ್ಲಿ ಸೃಷ್ಟಿಸಿಕೊಳ್ಳುವುದಕ್ಕೆ ವೃತ್ತಿಪರ ಅನುಷ್ಠಾನದಿಂದ ಕೂಡಿದ ಒಂದು ವೈಯಕ್ತೀಕೃತ ಒಳಾಂಗಣ ವಿನ್ಯಾಸ ಸೇವೆಯನ್ನು ಒದಗಿಸುವಂತಹ ಒಂದು ವಿಶಿಷ್ಟ ಮೊದಲಿನಿಂದ ಕೊನೆಯವರೆಗಿನ ಪರಿಹಾರವನ್ನು ಒದಗಿಸುತ್ತಿದೆ.
ಪ್ರತಿಯೊಬ್ಬ ಗ್ರಾಹಕರೂ ತಮ್ಮ ಒಳಾಂಗಣಗಳಲ್ಲಿ ಪ್ರತಿಫಲಿತವಾಗಬೇಕು ಎಂದು ಬಯಸುವ ತಮ್ಮದೇ ಆದ ವಿಶಿಷ್ಟ ಶೈಲಿ ಮತ್ತು ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಎಂಬುದನ್ನು ಏಶ್ಯನ್ ಪೈಂಟ್ಸ್ ಅರ್ಥಮಾಡಿಕೊಂಡಿದೆ. ಅದೇ ರೀತಿ, ತಮ್ಮ ವಾಸಸ್ಥಳಗಳನ್ನು ನವೀಕರಿಸಲು ಗ್ರಾಹಕರಿಗೆ ಒಂದು ಬಜೆಟ್ ಮತ್ತು ಕಾಲಾವಧಿ ಕೂಡ ಇರುತ್ತದೆ ಎಂಬುದನ್ನೂ ಏಶ್ಯನ್ ಪೈಂಟ್ಸ್ ಅರ್ಥಮಾಡಿಕೊಂಡಿದೆ. ಆದ್ದರಿಂದ ಬ್ಯೂಟಿಫುಲ್ ಹೋಮ್ಸ್ ಸೇವೆಯೊಂದಿಗೆ ಗ್ರಾಹಕರಿಗೆ ತಮ್ಮ ವಿವರಣೆಯ ಪ್ರಕಾರದ ಒಂದು ವೈಯಕ್ತೀಕೃತ ಒಳಾಂಗಣಗಳು ಮಾತ್ರ ದೊರಕುವುದಲ್ಲದೆ, ಅದು ಅವರ ಬಜೆಟ್ ಮತ್ತು ಕಾಲಮಿತಿಯೊಳಗೂ ಇರುತ್ತದೆ. ಮೊದಲಿನಿಂದ ಹಿಡಿದು ಕೊನೆಯವರೆಗಿನ ಇಡೀ ಒಳಾಂಗಣ ವಿನ್ಯಾಸದ ಪಯಣವನ್ನು ನಿರ್ವಹಿಸಲು ಒಂದು ವೃತ್ತಿಪರ ತಂಡವನ್ನು ಒದಗಿಸುವ ಮೂಲಕ ಈ ಹೊಸ ಸೇವೆಯು ತನ್ನ ಗ್ರಾಹಕರಿಗಾಗಿ ಪ್ರಕ್ರಿಯೆಯನ್ನು ಇನ್ನಷ್ಟು ಸರಳಗೊಳಿಸುತ್ತದೆ. ಗ್ರಾಹಕ ಅನುಭವ ತಜ್ಞ ಎಂದು ಕರೆಯಲ್ಪಡುವ ಈ ಏಕ ಪಾಯಿಂಟ್ ಸಂಪರ್ಕದ ಪ್ರಕ್ರಿಯೆಯು ಒಂದು ಸಹಜವಾದ ಮತ್ತು ತೊಂದರೆಯಿಲ್ಲದ ಅನುಭವವನ್ನು ಖಾತರಿಗೊಳಿಸುವಲ್ಲಿ ಒಳಗೊಂಡಿರುವಂತಹ ಎಲ್ಲಾ ವೆಂಡಾರ್‌ಗಳೊಂದಿಗೂ ಸಹಯೋಗವೇರ್ಪಡಿಸಿಕೊಂಡು ಇಡೀ ಕೆಲಸದ ಮೇಲುಸ್ತುವಾರಿ ನಡೆಸುತ್ತದೆ. ಬ್ಯೂಟಿಫುಲ್ ಹೋಮ್ಸ್ ಸೇವೆಯು ಗೃಹ ಒಳಾಂಗಣ ವಿನ್ಯಾಸದ ಅತ್ಯುತ್ಕೃಷ್ಟ ಗುಣಮಟ್ಟದ ಅನುಷ್ಠಾನವನ್ನು ಖಾತರಿಪಡಿಸುತ್ತದೆ ಮತ್ತು ಏಶ್ಯನ್ ಪೈಂಟ್ಸ್ ಪರಿಚಯಿಸಿರುವ ಎಲ್ಲಾ ಹೊಸ ಸುರಕ್ಷಾ ಪ್ರೊಟೋಕಾಲ್‌ಗಳನ್ನೂ ಅನುಸರಿಸುತ್ತದೆ.
ಏಶ್ಯನ್ ಪೈಂಟ್ಸ್ ಲಿಮಿಟೆಡ್‌ನ ಸಿಇಒ ಹಾಗು ವ್ಯವಸ್ಥಾಪಕ ನಿರ್ದೇಶಕ ಅಮಿತ್ ಸಿಂಗಲ್ “ಇಂದು ಗ್ರಾಹಕರು ತಮ್ಮ ಕನಸಿನ ಮನೆಯ ಸೃಷ್ಟಿಯ ಬೆಂಬೆತ್ತುತ್ತಿರುವಂತಹ ಸಮಯದಲ್ಲಿ, ತಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವಂತಹ ಮನೆಗಳನ್ನು ಬಯಸುತ್ತಿದ್ದಾರೆ. ಆದರೆ ದುರದೃಷ್ಟವಶಾತ್, ಅವರು ಸಾಧಾರಣ ಟೆಂಪ್ಲೇಟ್‌ಗಳಿಂದಲೇ ಆಯ್ಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಮೇಲಾಗಿ, ಹೊಸ ಸಾಮಾನ್ಯವು, ಅನೇಕರು ತಮ್ಮ ಮನೆಗಳು ಹಾಗು ವಾಸಸ್ಥಳಗಳೊಂದಿಗೆ ವಿಭಿನ್ನ ವಿಧಾನಗಳಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುತ್ತಿದೆ ಎಂದು ತಿಳಿಸಿದರು.
ಮನೆಗಳು, ಕಚೇರಿಗಳು, ಜಿಮ್‌ಗಳು, ತರಗತಿಗಳು, ಹಾಗು ಇನ್ನೂ ಅನೇಕ ರೀತಿಯಲ್ಲಿ ಬದಲಾಗುತ್ತಿವೆ. ವಾಸಸ್ಥಳದ ಈ ವೈವಿಧ್ಯಮಯ ಉಪಯೋಗವು ಗೃಹ ವಿನ್ಯಾಸದಲ್ಲಿ ವೈಯಕ್ತೀಕರಣದ ಅಗತ್ಯವನ್ನು ಇನ್ನಷ್ಟು ಮಹತ್ತರಗೊಳಿಸಿದೆ. ಏಶ್ಯನ್ ಪೈಂಟ್ಸ್‌ನಲ್ಲಿ, ಗ್ರಾಹಕರು ಕನಸು ಕಾಣುವುದಕ್ಕೆ ಅವರನ್ನು ಸಬಲಗೊಳಿಸುವುದು ಮಾತ್ರವಲ್ಲದೆ, ಆ ಕನಸುಗಳನ್ನು ಜೀವಂತಗೊಳಿಸುವ ಶಕ್ತಿಯನ್ನೂ ನೀಡುವುದು ನಮ್ಮ ದ್ಯೇಯವಾಗಿದೆ. ಬ್ಯೂಟಿಫುಲ್ ಹೋಮ್ಸ್ ಸೇವೆಯು ಜನರು ಯಾವುದೇ ಚಿಂತೆಯಿಲ್ಲದೆ ತಮ್ಮ ಮನೆಗಳನ್ನು ಪರಿವರ್ತಿಸಿಕೊಳ್ಳುವುದಕ್ಕೆ ನೆರವಾಗುತ್ತದೆ ಎಂದು ವರ್ಚುವಲ್ ಸಭೆಯಲ್ಲಿ ತಿಳಿಸಿದರು. ಗ್ರಾಹಕರಿಗೆ ವೈಯಕ್ತೀಕೃತವಾದ ಮತ್ತು ವೃತ್ತಿಪರ ಒಳಾಂಗಣ ವಿನ್ಯಾಸ ಅನುಭವವನ್ನು ಒದಗಿಸುವುದಕ್ಕೆ ಭಾರತದಾದ್ಯಂತ ಒಂಭತ್ತು ನಗರಗಳಲ್ಲಿ ಬ್ಯೂಟಿಫುಲ್ ಹೋಮ್ಸ್ ಸೇವೆಯನ್ನು ಪರಿಚಯಿಸಲಾಗಿದೆ. ಬ್ಯೂಟಿಫುಲ್ ಹೋಮ್ಸ್ ಸೇವೆಯು, ಗ್ರಾಹಕರಿಗಾಗಿ ಕೂಡ ಕೋವಿಡ್‌ನ ಸಮಯದಲ್ಲಿ ಅತ್ಯುತ್ಕೃಷ್ಟ ಸುರಕ್ಷತಾ ಪ್ರೊಟೋಕಾಲ್ ಕೈಗೊಳ್ಳುತ್ತಿದೆ. ಎರಡು ಡಿಜಿಟಲ್ ಚಿತ್ರಗಳೊಂದಿಗೆ ಈ ಸೇವೆಗಾಗಿ ಏಶ್ಯನ್ ಪೈಂಟ್ಸ್ ಪ್ರಚಾರವನ್ನೂ ಬಿಡುಗಡೆ ಮಾಡಿದೆ ಎಂದು ಅವರು ತಿಳಿಸಿದರು.