ತಿರುವನಂತಪುರ: ಸಾಮಾಜಿಕ ಮಾಧ್ಯಮ ಖಾತೆಗಳನ್ನು ದೊಡ್ಡ ಪ್ರಮಾಣದಲ್ಲಿ ಹ್ಯಾಕ್ ಮಾಡಲಾಗುತ್ತಿದೆ ಎಂದು ಕೇರಳ ಪೋಲೀಸರು ಎಚ್ಚರಿಸಿದ್ದಾರೆ. ಪೋಲೀಸರ ಸೈಬರ್ ಡೊಮೇನ್ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳ ಖಾತೆಗಳನ್ನು ವ್ಯಾಪಕವಾಗಿ ಹ್ಯಾಕ್ ಮಾಡಲಾಗುತ್ತಿರುವುದನ್ನು ಗಮನಿಸಿ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.
ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸುರಕ್ಷಿತಗೊಳಿಸಲು 'ಎರಡು ಅಂಶ ದೃಢೀಕರಣ'ವನ್ನು ಸಕ್ರಿಯಗೊಳಿಸಬೇಕು ಎಂದು ಸೈಬರ್ ಡೋಮ್ ಎಚ್ಚರಿಸಿದೆ. ವಾಟ್ಸಾಪ್ ಬಳಕೆದಾರರಿಗೆ ಎರಡು ಅಂಶಗಳ ದೃಢೀಕರಣಕ್ಕಾಗಿ ಭದ್ರತಾ ಪಿನ್ ಸಂಖ್ಯೆಯನ್ನು ಸೇರಿಸಲು ಎಚ್ಚರಿಕೆ ನೀಡಲಾಗಿದೆ. ಜೊತೆಗೆ ವಾಟ್ಸಾಪ್ ಗೆ ತಮ್ಮದೇ ಇಮೇಲ್ ಐಡಿಯನ್ನು ಸೇರಿಸಲು ಸೂಚಿಸಲಾಗಿದೆ.
ಇತ್ತೀಚೆಗೆ, ರಾಜ್ಯಾದ್ಯಂತ ಫೇಸ್‍ಬುಕ್ ಸೇರಿದಂತೆ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಹ್ಯಾಕ್ ಮಾಡಿದ ವರದಿಗಳು ಕೇಳಿಬಂದಿದ್ದವು. ಸೋಮವಾರ ಕೆಪಿಸಿಸಿ ಮಾಜಿ ಅಧ್ಯಕ್ಷ ವಿ.ಎಂ.ಸಧೀರನ್ ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿತ್ತು.
ವಿಎಂ ಸುಧೀರನ್ ಅವರ ಫೇಸ್‍ಬುಕ್ ಪುಟವನ್ನು ಕಳೆದ ಸೋಮವಾರ ರಾತ್ರಿ ಹ್ಯಾಕ್ ಮಾಡಲಾಗಿತ್ತು. ವಿಷಯ ತನ್ನ ಗಮನಕ್ಕೆ ಬಂದ ಕೂಡಲೇ ಫೇಸ್‍ಬುಕ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಅದನ್ನು ನಿಯಂತ್ರಿಸಿದ್ದೇವೆ ಎಂದು ಸುಧೀರನ್ ಹೇಳಿದ್ದಾರೆ. ಕಳೆದ ತಿಂಗಳು ಮಾಧ್ಯಗಳಲ್ಲಿ ಒಬಾಮಾ ಮತ್ತು ಬಿಲ್ ಗೇಟ್ಸ್ ಸೇರಿದಂತೆ ಜನರ ಟ್ವಿಟ್ಟರ್ ಖಾತೆಗಳನ್ನು ಯುನೈಟೆಡ್ ಸ್ಟೇಟ್ಸ್ನಲ್ಲಿ ಹ್ಯಾಕ್ ಮಾಡಲಾಗಿದೆ ಎಂದು ಸುದ್ದಿ ಹರಿದಾಟಿತ್ತು. ರಾಜ್ಯದಲ್ಲಿ ಹಲವಾರು ಘಟನೆಗಳು ವರದಿಯಾಗುತ್ತಿವೆ.