HEALTH TIPS

ಭಾರತವು ಶಾಂತಿಯಲ್ಲಿ ನಂಬಿಕೆ ಇರಿಸಿದೆ ಆದರೆ ಆಕ್ರಮಣಕಾರರಿಗೆ ಸೂಕ್ತ ಉತ್ತರ ನೀಡುವ ಸಾಮರ್ಥ್ಯವಿದೆ: ಚೀನಾಗೆ ಪರೋಕ್ಷ ಸಂದೇಶ ನೀಡಿದ ರಾಷ್ಟ್ರಪತಿ ಕೋವಿಂದ್

       ನವದೆಹಲಿ: ಗಡಿ ವಿವಾದದ ಮಧ್ಯೆ ಚೀನಾಗೆ ಪರೋಕ್ಷ ಸಂದೇಶ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್  ಭಾರತ ಶಾಂತಿಯನ್ನೇ ನಂಬಿದ್ದರೂ ಯಾವುದೇ ಆಕ್ರಮಣಕಾರಿ ಪ್ರಯತ್ನಗಳಿಗೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡುವ ಸಾಮರ್ಥ್ಯ ಹೊಂದಿದೆ  ಎಂದಿದ್ದಾರೆ.  "ನಮ್ಮ ನೆರೆಹೊರೆಯಲ್ಲಿ ಕೆಲವರು"  "ವಿಸ್ತರಣೆಯಹಪಹಪಿ"ಯನ್ನು ಹೊಂದಿದ್ದಾರೆ ಎಂದು ಕೋವಿಂದ್ ನುಡಿದರು,

      74 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಚೀನಾದ ಹೆಸರನ್ನು ಉಲ್ಲೇಖಿಸದೆ "ಮಾನವ ಸಮುದಾಯ, ವಿಶ್ವ ಸಮುದಾಯವು ದೊಡ್ಡ ಸವಾಲಿನ(ಕೋವಿಡ್-19) ವಿರುದ್ಧ ಒಟ್ಟಾಗಿ ಹೋರಾಡಬೇಕಾದರೆ, ನಮ್ಮ ನೆರೆಹೊರೆಯ ಕೆಲವರು ವಿಸ್ತರಣಾ ವಾದಕ್ಕೆ ತೊಡಗಿದ್ದರು,ಈ ಧೋರಣೆ ದುರದೃಷ್ಟಕರ ಎಂದಿದ್ದಾರೆ.

     ಇದೇ ವೇಳೆ ದೇಶದ ಗಡಿಗಳನ್ನು ರಕ್ಷಿಸಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಕೆಚ್ಚೆದೆಯ ಸೈನಿಕರಿಗೆ ರಾಷ್ಟ್ರಪತಿ ವಂದಿಸಿದ್ದಾರೆ. "ಭಾರತ ಮಾತೆಯ ಶ್ರೇಷ್ಠ ಪುತ್ರರು  ರಾಷ್ಟ್ರೀಯ ಹೆಮ್ಮೆಯಿಂಡ ಬದುಕಿದ್ದರು, ಹಾಗೂ ದೇಶಕ್ಕಾಗಿ ಪ್ರಾಣ ಸಮರ್ಪಿಸಿದರು, ಇಡೀ ರಾಷ್ಟ್ರವು ಗಾಲ್ವಾನ್ ಕಣಿವೆಯ ಹುತಾತ್ಮರಿಗೆ ನಮಸ್ಕರಿಸುತ್ತದೆ. ಪ್ರತಿಯೊಬ್ಬ ಭಾರತೀಯರು ಅವರ ಕುಟುಂಬ ಸದಸ್ಯರಿಗೆ ಕೃತಜ್ಞರಾಗಿರುತ್ತಾರೆ "ಎಂದು ಅವರು ಹೇಳಿದರು.

        ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಪಿಎಲ್‌ಎ ಜೊತೆಗಿನ ಘರ್ಷಣೆಯಲ್ಲಿ ಭಾರತೀಯ ಸೇನೆಯ 20 ಸಿಬ್ಬಂದಿ ಸಾವನ್ನಪ್ಪಿದ್ದರು.

     "ಯುದ್ಧದಲ್ಲಿ ಅವರ ಧೈರ್ಯಸ್ತುತ್ಯಾರ್ಹವಾಗಿದೆ, ನಾವು ಶಾಂತಿಯಲ್ಲಿ ನಂಬಿಕೆ ಇರಿಸಿದ್ದೇವೆ.  ಆದರೆ ಯಾವುದೇ ಆಕ್ರಮಣಕಾರಿ ಪ್ರಯತ್ನಗಳಿಗೆ ಸೂಕ್ತವಾದ ಪ್ರತಿಕ್ರಿಯೆಯನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದೇವೆ ಎಂಬುದನ್ನು ಈ ಘಟನೆ ತೋರಿಸಿದೆ. ನಮ್ಮ ಸಶಸ್ತ್ರ ಪಡೆಗಳ ಸದಸ್ಯರು, ಅರೆಸೈನಿಕ ಪಡೆಗಳು ಗಡಿಗಳನ್ನು ರಕ್ಷಿಸುವ ಪೊಲೀಸ್ ಸಿಬ್ಬಂದಿಗಳ ಬಗ್ಗೆ ನಮಗೆ ಹೆಮ್ಮೆ ಇದೆ ಎಂದು ರಾಷ್ಟ್ರಪತಿ ಹೇಳಿದ್ದಾರೆ.

                        ರಾಷ್ಟ್ರಪತಿಗಳ ಭಾಷಣದ ಇತರೆ ಮುಖ್ಯಾಂಶಗಳು ಹೀಗಿದೆ-

      74 ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾದಿನದಂದು ದೇಶ ಮತ್ತು ವಿದೇಶಗಳಲ್ಲಿ ವಾಸಿಸುವ ಭಾರತದ ಎಲ್ಲ ಜನರಿಗೆ ಶುಭಾಶಯ ಕೋರಲು  ನನಗೆ ಬಹಳ ಸಂತೋಷವಾಗಿದೆ, ಭಾರತದ ಯುವಕರುತಾವು ಸ್ವಾಂತಂತ್ರ್ಯ ಹಾಗೂ ಮುಕ್ತತೆಯನ್ನು ಹೊಂದಿದ ರಾಷ್ಟ್ರದ ನಾಗರಿಕರು ಎಂಬ ವಿಶೇಷ ಹೆಮ್ಮೆಯನ್ನು ಮನಗಾಣಬೇಕು,

       ಈ ಸಂದರ್ಭದಲ್ಲಿ, ನಮ್ಮ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ನಾವು ಕೃತಜ್ಞತೆಯಿಂದ ನೆನಪಿಸಿಕೊಳ್ಳಬೇಕಿದೆ, ಅವರ ತ್ಯಾಗದಿಂದಾಗಿ, ನಾವೆಲ್ಲರೂ ಇಂದು ಸ್ವತಂತ್ರ ಭಾರತದ ನಿವಾಸಿಗಳಾಗಿದ್ದೇವೆ.

       ಮಹಾತ್ಮ ಗಾಂಧಿ ನಮ್ಮ ಸ್ವಾತಂತ್ರ್ಯ ಚಳವಳಿಯ ಮಾರ್ಗದರ್ಶಕರಾಗಿದ್ದದ್ದು ನಮ್ಮ ಅದೃಷ್ಟ. ಸಮಾನತೆ ಮತ್ತು ನ್ಯಾಯಕ್ಕಾಗಿ ಅವರ ಹೋರಾಟ  ನಮ್ಮ ಗಣರಾಜ್ಯದ ಮಂತ್ರವಾಗಿದೆ. ಯುವ ಪೀಳಿಗೆ ಗಾಂಧೀಜಿಯನ್ನು ಪುನಃ ಓದಿಕೊಳ್ಳುವುದು, ತಿಳಿದುಕೊಳ್ಳುವ್ವುದು ನೋಡಿ ನನಗೆ ಸಂತೋಷವಾಗಿದೆ

     ಕೊರೋನಾವೈರಸ್  ವಿರುದ್ಧದ ಈ ಹೋರಾಟದಲ್ಲಿ ಮುಂಚೂಣಿಯ ಯೋಧರಾಗಿರುವ ಎಲ್ಲಾ ವೈದ್ಯರು, ದಾದಿಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರಿಗೆ ರಾಷ್ಟ್ರವು ಋಣಿಯಾಗಿದೆ,

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries