ತಿರುವನಂತಪುರ: ರಾಜ್ಯದಲ್ಲಿ ಮೊದಲ ಬಾರಿಗೆ ಕೋವಿಡ್ ಸೋಂಕಿನಿಂದ ಪೆÇಲೀಸ್ ಅಧಿಕಾರಿ ಸಾವನ್ನಪ್ಪಿದ್ದಾರೆ. ಇಡುಕ್ಕಿ ವಿಶೇಷ ಠಾಣಾ ಎಸ್‍ಐ ಅಜಿತನ್ (55) ಚಿಕಿತ್ಸೆ ಪಡೆಯುತ್ತಿದ್ದವರು ಶನಿವಾರ ಮೃತಪಟ್ಟರು. ಅವರು ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾದರು.
ಕಳೆದ ಕೆಲವು ವಾರಗಳಲ್ಲಿ ಕೋವಿಡ್ ರಾಜ್ಯದ ಹಲವಾರು ಪೆÇಲೀಸ್ ಅಧಿಕಾರಿಗಳಿಗೆ ದೃಢೀಕರಿಸಲ್ಪಟ್ಟಿದೆ. ಆದರೆ ಇದೇ ಮೊದಲ ಬಾರಿಗೆ ಪೆÇಲೀಸ್ ಅಧಿಕಾರಿಯೋರ್ವರು ಕೋವಿಡ್ ನಿಂದ ಮೃತಪಟ್ಟಿರುವುದು ಕಳವಳಕ್ಕೂ ಕಾರಣವಾಗಿದೆ. ಅವರನ್ನು ಇಡುಕ್ಕಿ ವೈದ್ಯಕೀಯ ಕಾಲೇಜಿಗೆ ª ಹಾಗೂ ಆ ಬಳಿಕ ಕೊಟ್ಟಾಯಂ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿತ್ತು. ಆದರೆ ಅವರ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಅವರಿಗೆ ಹೃದ್ರೋಗ ಸೇರಿದಂತೆ ಆರೋಗ್ಯ ಸಮಸ್ಯೆಗಳಿದ್ದವು ಎಂದು ವೈದ್ಯಕೀಯ ತಂಡ ತಿಳಿಸಿವೆ.
ಅಜಿತನ್ ಇಡುಕ್ಕಿ ವೆಲ್ಲಿಯಮಟ್ಟಂ ಪೂಜಪ್ರ ಮೂಲದವರು. ಪತ್ನಿಯಿಂದ ವೈರಸ್ ಸೋಂಕು ಉಂಟಾಗಿದೆ ಎಂದು ತಿಳಿಯಲಾಗಿದೆ. ಅಜಿತನ್ ಅವರ ಪತ್ನಿ ಚೆರುತ್ತೋಣಿ ಎಂಬಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದಾರೆ.