ತಿರುವನಂತಪುರ: ಕೋವಿಡ್ ರೋಗಿಗಳ ದೂರವಾಣಿ ಮಾಹಿತಿ ಸಂಗ್ರಹಿಸುವ ಸರ್ಕಾರದ ಕ್ರಮದ ವಿರುದ್ಧ ಶಾಸಕ ವಿ.ಡಿ.ಸತೀಸನ್ ವಿರೋಧ ವ್ಯಕ್ತಪಡಿಸಿದ್ದು ಕೋವಿಡ್ ಬಾಧಿತರ ವಿವರ ಶೇಖರಣೆ ಮತ್ತು ಈ ಬಗ್ಗೆ ರಾಜ್ಯ ಪೆÇಲೀಸರಿಗೆ ಅಧಿಕಾರ ನೀಡುವುದು ಅಸಾಂವಿಧಾನಿಕ ಎಂದು ಅವರು ಟೀಕೆ ವ್ಯಕ್ತಪಡಿಸಿದ್ದಾರೆ.
ಸೋಂಕು ಎಲ್ಲರಲ್ಲೂ ಬರಬೇಕೆಂದಿಲ್ಲ. ಸಂಶಯಿತರೆಲ್ಲರಿಗೂ ಸೋಂಕು ದೃಢಪಡುತ್ತಿಲ್ಲ. ಜೊತೆಗೆ ಇಂತಹ ಸ್ಥಿತಿಯಲ್ಲಿ ಪೋಲೀಸರಿಗೆ ನೀಡುವ ವ್ಯಕ್ತಿಗಳ ವೈಯುಕ್ತಿಕ ಮಾಹಿತಿಗಳು ಸೋರಿಕೆಯಾಗುವ ಸಾಧ್ಯತೆಯೂ ಇದೆ ಎಂದು ಶಾಸಕರು ಟೀಕೆ ವ್ಯಕ್ತಪಡಿಸಿರುವರು. ವಿ.ಡಿ.ಸತೀಸನ್ ತಮ್ಮ ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ಈ ಬಗ್ಗೆ ಪ್ರತಿಭಟನೆ ವ್ಯಕ್ತಪಡಿಸಿ ಸರ್ಕಾರಕ್ಕೆ ಸ್ಟಾಲಿನ್ ಭೂತ ಹೇಗೆ ಕಾಡುತ್ತಿದೆ ಎಂದು ಪ್ರಶ್ನಿಸಿರುವರು.
ಕೋವಿಡ್ ಬಾಧಿತರ ಪೋನ್ ಸಂಭಾಷಣೆಗಳನ್ನು ಪರಿಶೋಧಿಸುವ ನಿರ್ಣಯದ ವಿರುದ್ದ ಈಗಾಗಲೇ ಪ್ರತಿಪಕ್ಷ ಪ್ರತಿಭಟನೆ ವ್ಯಕ್ತಪಡಿಸಿದೆ. ಕೇರಳವನ್ನು ಕ್ವಾರಂಟೈನ್ ರಾಜ್ಯವನ್ನಾಗಿ ಮಾಡುವ ಪ್ರಯತ್ನ ಸರ್ಕಾರಕ್ಕೆ ಇದೆಯೇ ಎಂದು ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಪತ್ರಿಕಾಗೋಷ್ಠಿಯಲ್ಲಿ ಉಗ್ರವಾಗಿ ಪ್ರಶ್ನಿಸಿದ್ದಾರೆ.
ಸೋಂಕೊಗೊಳಗಾಗುವುದು ಅಪರಾಧವಲ್ಲ, ರೋಗಿಯು ಅಪರಾಧಿಯಲ್ಲ, ಮತ್ತು ಡಿಜಿಪಿ ಕಾನೂನಿನ ಉಲ್ಲಂಘನೆಯನ್ನು ಮಾಡುತ್ತಿದ್ದಾನೆ. ಪೆÇಲೀಸ್ ಕ್ರಮ ಆಘಾತಕಾರಿ. ಎಷ್ಟು ವಿವರಗಳನ್ನು ಸಂಗ್ರಹಿಸಲಾಗಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ರಮೇಶ್ ಚೆನ್ನಿತ್ತಲ ಒತ್ತಾಯಿಸಿದ್ದರು.