ಕಾಸರಗೋಡು: ಹೊಸದುರ್ಗ ಪೆÇಲೀಸ್ ಠಾಣೆಯ ಸಿಐ ಮತ್ತು ಎಸ್‍ಐ ಸೇರಿದಂತೆ ಸುಮಾರು 10 ಪೆÇಲೀಸ್ ಸಿಬ್ಬಂದಿಗಳಿಗೆ ಕೋವಿಡ್ ದೃಢೀಕರಣಗೊಂಡಿದೆ. ಆದರೆ ಪೆÇಲೀಸ್ ಠಾಣೆ ಮುಚ್ಚದೆ ಕಾರ್ಯನಿರ್ವಹಿಸುತ್ತಿದೆ! ಕಾರಣ ಅಲ್ಲಿಯ ಮಹಿಳಾ ಪೆÇಲೀಸರು ಕರ್ತವ್ಯದ ಜವಾಬ್ದಾರಿಯನ್ನು ಹೆಗಲೇರಿಸಲಿದ್ದಾರೆ. ಮೂವರು ಮಹಿಳಾ ಎಸ್ ಐಗಳು ಮತ್ತು ಅವರ ಸಹೋದ್ಯೋಗಿಗಳು ಮಹಿಳೆಯರೂ ಕೂಡ ಪೆÇಲೀಸ್ ಠಾಣೆಯನ್ನು ನಿಯಂತ್ರಿಸಬಹುದು ಎಂದು ಸಾಬೀತುಪಡಿಸುತ್ತಿದ್ದಾರೆ.
ಪ್ರಸ್ತುತ ಕೋವಿಡ್ ಶಂಕೆಯಿರುವ ಇಲ್ಲಿಯ 12 ಮಂದಿಗಿಂತಲೂ ಹೆಚ್ಚು ಪೆÇಲೀಸ್ ಅಧಿಕಾರಿಗಳು ಇದೀಗ ಕೋವಿಡ್ ಕ್ವಾರಂಟೈನ್ ಗೊಳಗಾಗಿದ್ದಾರೆ. ಸಂಪರ್ಕದ ಹರಡುವಿಕೆಯ ಕಾರಣ ಪೂರ್ಣ ಠಾಣೆ, ಪೋಲೀಸ್ ಪಡೆ ಕ್ವಾರಂಟೈನ್ ನಲ್ಲಿದ್ದಾರೆ. ಸಿಐ ಮತ್ತು ಎಸ್‍ಐ ಸೇರಿದಂತೆ ಬಹಳಷ್ಟು ಸಿಬ್ಬಂದಿಗಳೂ ಕ್ವಾರಂಟೈನ್ ನಲ್ಲಿದ್ದಾರೆ. ಇದರೊಂದಿಗೆ ಮಹಿಳಾ ಪೆÇಲೀಸರು ಠಾಣೆಯ ಜವಾಬ್ದಾರಿ ವಹಿಸಿದರು. ಎಸ್ ಐ ಅಜಿತಾ ಸಿ.ಸಿ ಮತ್ತು ಎಂ ಸುಧಾ ಅವರು ಠಾಣೆಯ ದಿನನಿತ್ಯದ ಚಾಲನೆಯ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಕರಿವೆಳ್ಳೂರಿನ ಅಜಿತಾ ಈ ಠಾಣೆಯ ಎಸ್‍ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಂಟ್ರೋಲ್ ರೂಮ್ ಎಸ್‍ಐ ಸುಧಾ ಚೆರುವತ್ತೂರ್ ಮೂಲದವರು.
ಪಿಂಕ್ ಪೆÇಲೀಸ್ ಎಸ್‍ಐ ಚಿತ್ತಾರಿಕಲ್ ಮೂಲದವರು. ಅವರೊಂದಿಗೆ ಹಿರಿಯ ನಾಗರಿಕ ಪೆÇಲೀಸ್ ಅಧಿಕಾರಿಗಳಾದ ಚಂದ್ರಿಕಾ, ಶ್ರೀಜಾ ಮತ್ತು ರೇಷ್ಮಾ ಇದ್ದಾರೆ. ನಾವು ಕೂಡ ದೂರುದಾರರ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ. ಮಹಿಳಾ ಪೆÇಲೀಸ್ ಪಡೆ ರಾತ್ರಿ ಕರ್ತವ್ಯದಲ್ಲಿರುವುದಕ್ಕೆ ಹೆಮ್ಮೆ ಇದೆ. ಏತನ್ಮಧ್ಯೆ, ಕೋವಿಡ್ ಬಂಧನದ ನಂತರ ಕಚೇರಿಯ ಸಂಪೂರ್ಣ ನೆಟ್ವರ್ಕ್ ಅನ್ನು ಆಫ್ ಮಾಡಲಾಗಿದೆ. ಮಹಿಳಾ ಪೆÇಲೀಸ್ ಅಧಿಕಾರಿಗಳು ತಮ್ಮ ಲ್ಯಾಪ್‍ಟಾಪ್ ಮೂಲಕ ದೂರುಗಳನ್ನು ಸ್ವೀಕರಿಸುತ್ತಾರೆ.