HEALTH TIPS

ವೈರಸ್ ಹರಡುವಲ್ಲಿ ಪ್ರತಿಭಟನೆಗಳು ಪಾತ್ರ ವಹಿಸುತ್ತಿವೆ- ಪ್ರತಿಭಟನಾಕಾರರನ್ನು ನಿಯಂತ್ರಿಸಲು ನಿಯೋಜಿತ ಪೋಲೀಸರಲ್ಲಿ 101 ಮಂದಿಗೆ ಸೋಂಕು

  

           ತಿರುವನಂತಪುರ: ರಾಜ್ಯದಲ್ಲಿ 4,000 ಕ್ಕೂ ಮಿಕ್ಕಿದ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಪ್ರತಿದಿನವೂ ಕೋವಿಡ್ ಸೋಂಕು ಹೆಚ್ಚಳಗೊಳ್ಳುತ್ತಿರುವ ಮಧ್ಯೆ ಕೋವಿಡ್ ಮಾನದಂಡಗಳನ್ನು ಪಾಲಿಸದಿರುವುದು ಕಂಡುಬರುತ್ತಿದೆ. ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ತಿರುವನಂತಪುರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ನಡೆಯುತ್ತಿರುವ ಪ್ರತಿಭಟನೆಗಳು ಕೋವಿಡ್ ರಕ್ಷಣೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ ಪೆÇಲೀಸ್ ಅಧಿಕಾರಿಗಳಲ್ಲಿನ ಕೋವಿಡ್ ಆತಂಕಕ್ಕೆ ಕಾರಣವಾಗಿದೆ. ಪ್ರತಿಭಟನಾಕಾರರನ್ನು ಎದುರಿಸಲು ನಿಯೋಜಿಸಲಾದ 101 ಮಂದಿ ಪೆÇಲೀಸರಲ್ಲೂ ಕೋವಿಡ್ ಖಚಿತಗೊಂಡಿದೆ. 

                                ತಿರುವನಂತಪುರದಲ್ಲಿ ಕೋವಿಡ್ ಗಲಭೆ:

         ಸಚಿವ ಕೆ.ಟಿ.ಜಲೀಲ್ ಅವರ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ಮತ್ತು ಸರ್ಕಾರದ ವಿರುದ್ಧ ವಿವಿಧ ಪ್ರತಿಭಟನೆಗಳು ರಾಜಧಾನಿಯಲ್ಲಿ ಹಲವು ದಿನಗಳಿಂದ ಸರಣಿ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 39,258 ಆಗಿದ್ದು, ಅದರಲ್ಲಿ 7047 ಪ್ರಕರಣಗಳು ತಿರುವನಂತಪುರ ಜಿಲ್ಲೆಯಲ್ಲಿವೆ. ರಾಜ್ಯದಲ್ಲಿ ಸಕ್ರಿಯವಾಗಿರುವ ಶೇಕಡಾ 18 ಪ್ರಕರಣಗಳು ತಿರುವನಂತಪುರದಲ್ಲಿವೆ ಎಂಬುದನ್ನು ಈ ವರದಿ ತೋರಿಸುತ್ತದೆ. ರಾಜ್ಯಾದ್ಯಂತ 553 ಸಾವುಗಳು ವರದಿಯಾಗಿದ್ದರೆ, ತಿರುವನಂತಪುರ ಜಿಲ್ಲೆಯಲ್ಲಿ ಮಾತ್ರ 175 ಸಾವುಗಳು ಸಂಭವಿಸಿವೆ. ಈ ಹಿನ್ನೆಲೆಯಲ್ಲಿ ರಾಜಧಾನಿಯಲ್ಲಿ ನಡೆಯುವ ಮುಷ್ಕರಗಳ ಸರಣಿಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯಮಂತ್ರಿ ಎಚ್ಚರಿಸಿದ್ದಾರೆ.

            'ಹೋರಾಟಗಳ ಹೆಸರಿನಲ್ಲಿ ಜನಸಂದಣಿ ಸೃಷ್ಟಿ':

     ಪ್ರತಿಪಕ್ಷಗಳನ್ನು ಟೀಕಿಸಿದ ಮುಖ್ಯಮಂತ್ರಿ ಅವರು ಕೋವಿಡ್ ಹಿನ್ನೆಲೆಯ  ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪ್ರತಿಭಟನೆಗಳು ದುರ್ಬಲಗೊಳಿಸುತ್ತಿದೆ ಎಂದು ಆರೋಪಿಸಿದರು. "ಕೋವಿಡ್ ಆರಂಭದ ಹಂತದಲ್ಲಿದ್ದ ಜಾಗರೂಕತೆಗಳನ್ನು ಇದೀಗ ನಿರ್ಲಕ್ಷ್ಯಿಸಲಾಗುತ್ತಿದೆ. ಸಾರ್ವಜನಿಕ ಸಭೆಗಳು, ಶಿಕ್ಷಣ, ವಿವಾಹಗಳು ಮತ್ತು ಅಂಗಡಿಗಳನ್ನು ನಿಯಂತ್ರಿಸುವ ನಿಬಂಧನೆಗಳಲ್ಲೂ ಬದಲಾವಣೆ ತರಲಾಗುತ್ತಿದೆ. ಆದರೆ ಹೋರಾಟಗಳ ಹೆಸರಿನಲ್ಲಿ ಪ್ರತಿಪಕ್ಷಗಳು ಕೋವಿಡ್ ನಿಯಂತ್ರಣಗಳನ್ನು ದಿಕ್ಕುತಪ್ಪಿಸುತ್ತಿವೆ" ಎಂದು ಅವರು ಹೇಳಿದರು. 'ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಕೋವಿಡ್ ತಡೆಗಟ್ಟುವಿಕೆಗೆ  ಜನಸಂದಣಿಯನ್ನು ತಪ್ಪಿಸುದೇ ಅತೀ ಮುಖ್ಯವಾದುದು ಎಂದು ಹೇಳಲಾಗುತ್ತದೆ. ಮಾಸ್ಕ್ ಬಳಸದೆ   ಜನಸಮೂಹ ಪ್ರತಿಭಟನೆಗಳನ್ನು ಆಯೋಜಿಸುತ್ತಿರುವುದು ಕಳವಳವನ್ನುಂಟುಮಾಡುತ್ತಿದೆ. ಇದು ವೈರಸ್ ಸುಲಭವಾಗಿ ಹರಡಲು ಅವಕಾಶ ನೀಡುತ್ತದೆ ಎಂದು  ಅವರು ಟೀಕಿಸಿದರು.

             ಪ್ರತಿಭಟನಾಕಾರರನ್ನು ನಿಯಂತ್ರಿಸುವ  101 ಪೆÇಲೀಸರಿಗೆ ಸೋಂಕು: 

      ಗೃಹ ಇಲಾಖೆಯ ಉಸ್ತುವಾರಿ ವಹಿಸಿರುವ ಮುಖ್ಯಮಂತ್ರಿಯವರು ಮಾತನಾಡಿ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ರಕ್ಷಣೆಗಾಗಿ ನಿಯೋಜಿಸಲಾದ 101 ಪೆÇಲೀಸ್ ಸಿಬ್ಬಂದಿಗಳಿಗೆ ಕೋವಿಡ್ ಸೋಂಕು ದೃಢಗೊಂಡಿದೆ.  ಕೋವಿಡ್ ಒಬ್ಬ ಡಿವೈಎಸ್ಪಿ, ಒಬ್ಬ ಇನ್ಸ್ಪೆಕ್ಟರ್, 12 ಸಬ್ ಇನ್ಸ್ಪೆಕ್ಟರ್ಗಳು, ಎಂಟು ಎಎಸ್‍ಪಿ ಗಳು, 71 ಸಿವಿಲ್ ಪೆÇಲೀಸ್ ಅಧಿಕಾರಿಗಳು ಮತ್ತು ಎಂಟು ಹಿರಿಯ ಸಿವಿಲ್ ಪೆÇಲೀಸ್ ಅಧಿಕಾರಿಗಳಿಗೆ ಖಚಿತಗೊಂಡಿದೆ.  164 ಪ್ರಾಥಮಿಕ ಸಂಪರ್ಕಗಳು, 171 ಜನರು ಕ್ವಾರಂಟೈನ್ ನಲ್ಲಿದ್ದಾರೆ ಮತ್ತು ಅವರ ಸಹೋದ್ಯೋಗಿಗಳ ಅನಾರೋಗ್ಯದಿಂದಾಗಿ ಅನೇಕ ಪೆÇಲೀಸರು ಕ್ವಾರಂಟೈನ್ ಗೆ ತೆರಳಬೇಕಾಗಿದೆ  ಎಂದು ಮುಖ್ಯಮಂತ್ರಿ ಹೇಳಿದರು.

              ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು:

     ಕೋವಿಡ್ ವಿರುದ್ಧ ಸರ್ಕಾರದ ಕ್ರಮಗಳನ್ನು ಪ್ರತಿಭಟನಾಕಾರರು ನಿರ್ಲಕ್ಷ್ಯಿಸುತ್ತಿದ್ದಾರೆ. ಪ್ರತಿಭಟನಾಕಾರರು ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳುವಂತಹ ಕೋವಿಡ್ ನಿಬಂಧನೆಗಳನ್ನು ಅನುಸರಿಸುತ್ತಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು. ಈ ನಿಟ್ಟಿನಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಸಿಎಂ ವಿನಂತಿಸಿದ್ದಾರೆ. 'ಪ್ರಜಾಪ್ರಭುತ್ವ ಸಮಾಜದಲ್ಲಿ ಪ್ರತಿಭಟಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಆದರೆ ಪ್ರತಿಭಟನಾಕಾರರು ಇಂದಿನ ಸಂಕೀರ್ಣ ಸ್ಥಿತಿಯನ್ನು ಅರ್ಥೈಸಿ ಕಾರ್ಯನಿರ್ವಹಿಸಬೇಕು. ಒಟ್ಟಾರೆಯಾಗಿ ಸಮಾಜಕ್ಕೆ ಅಪಾಯವಿದೆ. ಪ್ರತಿಭಟನೆಗೆ ಇತರ ಮಾರ್ಗಗಳಿವೆ ಎಂದು ಅವರು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries