ಕಾಸರಗೋಡು: ಕಾಸರಗೋಡು ಜಿಲ್ಲೆಯ 10 ಗ್ರಾಮ ಪಂಚಾಯತ್ ಗಳಲ್ಲಿ ಐ.ಎಲ್.ಜಿ.ಎಂ.ಎಸ್ ಯೋಜನೆ ಜಾರಿಗೊಂಡಿದೆ.
ಕಾಸರಗೋಡು ಜಿಲ್ಲೆಯ ಮಧೂರು, ಮೀಂಜ, ಪೈವಳಿಕೆ, ವರ್ಕಾಡಿ, ಬೇಡಡ್ಕ, ಕುತ್ತಿಕೋಲು, ಕೋಡೋಂ-ಬೇಳೂರು, ವೆಸ್ಟ್ ಏಳೇರಿ, ಕಳ್ಳಾರ್, ತ್ರಿಕರಿಪುರ ಗ್ರಾಮ ಪಂಚಾಯತ್ ಗಳಲ್ಲಿ ಇಂಟಗ್ರೇಟೆಡ್ ಲೋಕಲ್ ಗವರ್ನೆನ್ಸ್ ಮೆನೆಜ್ ಮೆಂಟ್ ಸಿಸ್ಟಂ ಜಾರಿಗೊಳಿಸಲಾಗುತ್ತಿದೆ. ಕೆಲವು ಗ್ರಾಮ ಪಂಚಾಯತ್ ಗಳಲ್ಲಿ ಪ್ರಯೋಗಾರ್ಥ ಈ ಯೋಜನೆಯನ್ನು ಈ ಹಿಂದೆಯೇ ಜಾರಿಗೊಳಿಸಲಾಗಿದೆ.
ಜನನ-ಮರಣ ನೋಂದಣಿ ಸಹಿತ ಗ್ರಾಮ ಪಂಚಾಯತ್ ಗಳಿಮದ ಲಭಿಸುವ 200 ಕ್ಕೂ ಅಧಿಕ ಸೇವೆಗಳಿಗೆ ಸಂಬಂಧಿಸಿದ ಅರ್ಜಿಗಳು, ದೂರುಗಳು, ಅಪೀಲುಗಳು, ಸಲಹೆಗಳು ಆನ್ ಲೈನ್ ಆಗಿ ಸಲ್ಲಿಸುವ ಸೌಲಭ್ಯ ಇಲ್ಲಿರಲಿದೆ.