ಕಾಸರಗೋಡು: ಕಾಸರಗೋಡು ಬ್ಲಾಕ್ ಪರಿಶಿಷ್ಟ ಜಾತಿ ಅಭಿವೃದ್ಧಿ ವ್ಯಾಪ್ತಿಯ ಕುಂಬಳೆ, ಮೊಗ್ರಾಲ್ ಪುತ್ತೂರು, ಮಧೂರು, ಚೆಂಗಳ, ಚೆಮ್ನಾಡ್, ಬದಿಯಡ್ಕ ಗ್ರಾಮ ಪಂಚಾಯತ್ ಗಳ, ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಶಾಶ್ವತ ನಿವಾಸಿಗಳಾದ ಪರಿಶಿಷ್ಟ ಜಾತಿ ಜನಾಂಗದ 7 ರಿಂದ 12 ನೇ ತರಗತಿಗಳಲ್ಲಿ ಕಲಿಕೆ ನಡೆಸುತ್ತಿರುವ ವಿದ್ಯಾರ್ಥಿಗಳಿಗಾಗಿ ಕಲಿಕಾ ಕೊಠಡಿ ನಿರ್ಮಾಣ ಆರ್ಥಿಕ ಸಹಾಯಕ್ಕೆ ಸೆ.11 ವರೆಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಅರ್ಜಿ ಸಲ್ಲಿಸಿರುವವರು ಮತ್ತೆ ಸಲ್ಲಿಕೆ ಮಾಡಬೇಕಿಲ್ಲ. ಮಾಹಿತಿಗೆ ದೂರವಾಣಿ ಸಂಖ್ಯೆ: 8547630172 ಸಂಪರ್ಕಿಸಬಹುದಾಗಿದೆ.