ಕಾಸರಗೋಡು: ಓಣಂ ಸಹಿತ ವಿವಿಧ ಹಬ್ಬಗಳು ಕೊನೆಗೊಳ್ಳುತ್ತಿರುವಂತೆ ರಾಜ್ಯಾದ್ಯಂತ ಆಶ್ಚರ್ಯಕರರೀತಿಯಲ್ಲಿ ಇಮದು ಕೋವಿಡ್ ಫಲಿತಾಂಶದಲ್ಲಿ ಗಣನೀಯ ಕುಸಿತ ಕಂಡುಬಂದಿದೆ. ಕಳೆದ ಒಂದು ತಿಂಗಳಿಂದ ಒಂದೂವರೆ ಸಾವಿರಕ್ಕಿಂತಲೂ ಮೇಲ್ಮಟ್ಟದಲ್ಲಿ ಕೋವಿಡ್ ಬಾಧಿತರ ಸಂಖ್ಯೆ ಇಂದು ತೀವ್ರ ಕುಸಿತ ಕಂಡಿರುವುದು ಜನಸಾಮಾನ್ಯರಲ್ಲಿ ಆಶ್ಚರ್ಯಕ್ಕೆ ಕಾರಣವಾಗಿದೆ. ಕಾಸರಗೋಡು ಸಹಿತ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರೀ ಪ್ರಮಾಣದಲ್ಲಿ ಸೋಂಕು ಬಾಧಿತರ ಸಂಖ್ಯೆ ಕುಸಿದಿರುವುದು ಪೂರ್ವ ನಿಗದಿಯಂತೆ ಎಂಬ ಮಾತುಗಳು ಕೇಳಿಬಂದಿದೆ.
ಈಗಾಗಲೇ ಸರ್ಕಾರದ ದೈನಂದಿನ ಕೋವಿಡ್ ಲೆಕ್ಕಾಚಾರ, ಗಡಿ ನಿಯಂತ್ರಣಗಳಂತಹ ಕ್ರಮಗಳಿಂದ ಬೇಸತ್ತಿರುವ ಜನಸಾಮಾನ್ಯರು ರಾಜ್ಯದಲ್ಲಿ ಯಾರಿಗೋ ಆರ್ಥಿಕ ಲಾಭ ಉಂಟಾಗುವ ರೀತಿಯಲ್ಲಿ ಕೊರೊನಾವನ್ನು ಬಳಸಲಾಗುತ್ತಿದೆ ಎಂಬ ಗುಮಾನಿಯ ಮಧ್ಯೆ ಇಂದಿನ ಕೋವಿಡ್ ಫಲಿತಾಂಶ ಅಂತಹ ಸಂಶಯವನ್ನು ಪುಷ್ಠೀಕರಿಸಿದೆ.
ಕರ್ನಾಟಕದೊಂದಿಗೆ ನಿಕಟ ಸಂಪರ್ಕದ ಕಾಸರಗೋಡು ಜಿಲ್ಲೆಯನ್ನು ನ್ಯಾಯಾಲಯ ಮತ್ತು ಕೇಂದ್ರ ಸರ್ಕಾರದ ಆದೇಶದ ಹೊರತಾಗಿಯೂ ನಿರ್ಬಂಧಿಸುತ್ತಿರುವುದು ಧಮನಕಾರಿ ನೀತಿಯಾಗಿ ಈಗಾಗಲೇ ಜನರೆಡೆಯಲ್ಲಿ ಹೇಳಲ್ಪಡುತ್ತಿದ್ದು ಒಟ್ಟು ಕೋವಿಡ್ ಮಹಾಮಾರಿಯ ಕಂಪನದ ಬಳಿಕವೂ ಕೀಳು ರಾಜಕೀಯ, ಮತ, ಧರ್ಮಗಳು ಪಾಠ ಕಲಿಯದಿರುವುದು ಸಮಾಜದ ಮಧ್ಯಮ-ಕೆಳ ವರ್ಗದವರ ಸಂಕಷ್ಟವನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 15 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರೆಲ್ಲರಿಗೂ ಸಂಪರ್ಕ ಮೂಲಕ ಸೋಂಕು ತಗುಲಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಪಾಸಿಟಿವ್ ಆದವರ ಸ್ಥಳೀಯಾಡಳಿತ ಮಟ್ಟದ ಗಣನೆ:
ಮಧೂರು ಪಂಚಾಯತ್ 2, ಮುಳಿಯಾರು ಪಂಚಾಯತ್ 1, ಕುಂಬಳೆ ಪಂಚಾಯತ್ 2,ಮೊಗ್ರಾಲ್ ಪುತ್ತೂರು ಪಂಚಾಯತ್ 3, ಮಂಜೇಶ್ವರ ಪಂಚಾಯತ್ 1, ಮಂಗಲ್ಪಾಡಿ ಪಂಚಾಯತ್ 2, ಎಣ್ಮಕಜೆ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 1, ಅಜಾನೂರು ಪಂಚಾಯತ್ 1 ಮಂದಿಗೆ ಸೋಂಕು ತಗುಲಿದೆ.
90 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ 90 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತ ಮಟ್ಟದ ಗಣನೆ:
ಕಾಸರಗೋಡು ನಗರಸಭೆ 5, ಮಧೂರು ಪಂಚಾಯತ್ 4, ಮಂಜೇಶ್ವರ ಪಂಚಾಯತ್ 1, ಬದಿಯಡ್ಕ ಪಂಚಾಯತ್ 4, ಚೆಂಗಳ ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಪುತ್ತಿಗೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 20, ಕುಂಬಳೆ ಪಂಚಾಯತ್ 3, ಮುಳಿಯಾರು ಪಂಚಾಯತ್ 1, ಕಾಞಂಗಾಡ್ ನಗರಸಭೆ 13, ಅಜಾನೂರು ಪಂಚಾಯತ್ 6, ಉದುಮಾ ಪಂಚಾಯತ್ 6, ಪಳ್ಳಿಕ್ಕರೆ ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 2, ಪನತ್ತಡಿ ಪಂಚಾಯತ್ 1, ಕೋಡೋಂ-ಬೇಳೂರು 3, ಚೆರುವತ್ತೂರು ಪಂಚಾಯತ್ 2, ಪಿಲಿಕೋಡ್ ಪಂಚಾಯತ್ 2, ವೆಸ್ಟ್ ಏಳೇರಿ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 2, ಪಯ್ಯನ್ನೂರು ಪಂಚಾಯತ್ 1, ಕಾಂಗೋಲು ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
6386 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 6386 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ5317 ಮಂದಿ, ಸಾಂಸ್ಥಿಕವಾಗಿ 1069 ಮಂದಿ ನಿಗಾದಲ್ಲಿರುವರು. ನೂತನವಾಗಿ 355 ಮಂದಿ ನಿಗಾ ಪ್ರವೇಶಿಸಿದ್ದಾರೆ. 293 ಮಂದಿ ಮಂಗಳವಾರ ತಮ್ಮನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 120 ಮಂದಿಯ ಸ್ಯಾಂಪಲ್ ತಪಾಸಣೆ ಫಲಿತಾಂಶ ಲಭಿಸಿಲ್ಲ.
ಕೇರಳ ರಾಜ್ಯಾದ್ಯಂತ ವಿವರಗಳು:
ಇಂದು ಕೋವಿಡ್ ರಾಜ್ಯದಲ್ಲಿ 1140 ಹೊಸ ಸೋಂಕಿತರನ್ನು ಗುರುತಿಸಲಾಗಿದೆ. ರೋಗಿಗಳಿಗಿಂತ ರೋಗ ಮುಕ್ತರಾದಚವರ ಸಂಖ್ಯೆ ಹೆಚ್ಚಿದೆ. ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2111 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ಇಂದು, ರೋಗ ಪತ್ತೆಯಾದವರಲ್ಲಿ 14 ಮಂದಿ ವಿದೇಶಗಳಿಂದ ಮತ್ತು 36 ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 1059 ಜನರಿಗೆ ಸೋಂಕು ಬಾಧಿಸಿದೆ. ಅವುಗಳಲ್ಲಿ 158 ರ ಸಂಪರ್ಕ ಮೂಲ ಸ್ಪಷ್ಟವಾಗಿಲ್ಲ. ಇದರೊಂದಿಗೆ 22,512 ಜನರಲ್ಲಿ ಈವರೆಗೆ ಸೋಂಕು ದೃಢಪಟ್ಟಿದೆ. ಈವರೆಗೆ 53,653 ಜನರನ್ನು ಕೋವಿಡ್ ಗುಣಮುಖರಾಗಿದ್ದಾರೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಲಾಗಿದೆ. ಕೋವಿಡ್ ಅಂಕಿಅಂಶಗಳ ವಿವರವಾದ ಮಾಹಿತಿ:
ಕೋವಿಡ್ ಧನಾತ್ಮಕವಾದ ಜಿಲ್ಲಾವಾರು ವಿವರ:
ತಿರುವನಂತಪುರ ಜಿಲ್ಲೆಯ 227, ಮಲಪ್ಪುರಂ ಜಿಲ್ಲೆಯ 191 , ಎರ್ನಾಕುಳಂ ಜಿಲ್ಲೆಯ 161, ಕೋಝಿಕ್ಕೋಡ್ ಜಿಲ್ಲೆಯ 155 , ತ್ರಿಶೂರ್ ಜಿಲ್ಲೆಯ 133, ಕಣ್ಣೂರು ಜಿಲ್ಲೆಯ 77 , ಕೊಟ್ಟಾಯಂ ಜಿಲ್ಲೆಯ 62 , ಪಾಲಕ್ಕಾಡ್ ಜಿಲ್ಲೆಯ 42 ಮತ್ತು ಆಲಪ್ಪುಳ ಜಿಲ್ಲೆಯ 42, ಕೊಲ್ಲಂ ಜಿಲ್ಲೆಯ ಮೂವತ್ತೆರಡು, ಕೊಲ್ಲಂ ಜಿಲ್ಲೆಯ 25, ಕಾಸರಗೋಡು ಜಿಲ್ಲೆಯ 15, ಪತ್ತನಂತಿಟ್ಟು ಜಿಲ್ಲೆಯ 12 ಮತ್ತು ವಯನಾಡ್ ಜಿಲ್ಲೆಯ ಎಂಟು ಜನರಿಗೆ ಇಂದು ರೋಗ ಪತ್ತೆಯಾಗಿದೆ.
ಗುಣಮುಖರಾದವರು:
ಇಂದು ಗುಣಮುಖರಾದ 2,111 ರೋಗಿಗಳ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ ಜಿಲ್ಲೆಯ 394, ಕೊಲ್ಲಂ ಜಿಲ್ಲೆಯ 67 , ಪತ್ತನಂತಿಟ್ಟು ಜಿಲ್ಲೆಯ 78 , ಆಲಪ್ಪುಳ ಜಿಲ್ಲೆಯ 302 , ಕೊಟ್ಟಾಯಂ ಜಿಲ್ಲೆಯ 115 , ಇಡುಕ್ಕಿ ಜಿಲ್ಲೆಯ 14 , ಎರ್ನಾಕುಳಂ ಜಿಲ್ಲೆಯ 134, ತ್ರಿಶೂರ್ ಜಿಲ್ಲೆ ಮತ್ತು ಪಾಲಕ್ಕಾಡ್ ಜಿಲ್ಲೆಯ 120 , ಮಲಪ್ಪುರಂ ಜಿಲ್ಲೆಯ 153 , ಮಲಪ್ಪುರಂ ಜಿಲ್ಲೆಯಿಂದ 286 , ಕೋಝಿಕ್ಕೋಡ್ ಜಿಲ್ಲೆಯಿಂದ 240 , ವಯನಾಡ್ ಜಿಲ್ಲೆಯ 24 , ಕಣ್ಣೂರು ಜಿಲ್ಲೆಯ 97 ಮತ್ತು ಕಾಸರಗೋಡು ಜಿಲ್ಲೆಯ 87 ಮಂದಿಗಳ ಪರೀಕ್ಷಾ ಫಲಿತಾಂಶಗಳು ಇಂದು ನಕಾರಾತ್ಮಕವಾಗಿವೆ.
4 ಸಾವುಗಳು:
ರಾಜ್ಯದಲ್ಲಿ ಇಂದು ನಾಲ್ಕು ಕೋವಿಡ್ ಸಾವುಗಳನ್ನು ದೃಢಪಟ್ಟಿದೆ. ಕರ್ನಾಕುಳಂನ ರಾಜಗಿರಿ ಮೂಲದ ಎನ್.ವಿ ಆಗಸ್ಟ್ 22 ರಂದು ನಿಧನರಾದರು. ಕಾಸರಗೋಡಿನ ಅರೈ ನಿವಾಸಿ ಫ್ರಾನ್ಸಿಸ್ (76), ಜೀವಕ್ಯಾನ್ (64) ಆಗಸ್ಟ್ 23 ರಂದು ನಿಧನರಾದರು ಮತ್ತು ಕಾಸರಗೋಡದ ರಾವನೇಶ್ವರಂ ನಿವಾಸಿ ಕೆ., ತಿರುವನಂತಪುರಂ ಎಲ್ಲುವಿಲಾ ನಿವಾಸಿ ರಮೇಶನ್ (45) ಮತ್ತು ಸೋಮನ್ (67) ಎಂದು ಗುರುತಿಸಲಾಗಿದೆ. ಈ ಮೂಲಕ ಒಟ್ಟು ಸಾವಿನ ಸಂಖ್ಯೆಯನ್ನು 298 ಕ್ಕೆ ಏರಿಕೆಗೊಳಿಸದೆ.