ನವದೆಹಲಿ: ದೇಶದಲ್ಲಿ ಕೋವಿಡ್-19 ಪರೀಕ್ಷಾ ಸಾಮರ್ಥ್ಯ ಪ್ರತಿದಿನ 12 ಲಕ್ಷಕ್ಕೂ ಅಧಿಕವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಪ್ರತಿದಿನ ಕೊರೋನಾ ಪರೀಕ್ಷೆಯನ್ನು 12 ಲಕ್ಷಕ್ಕಿಂತ ಹೆಚ್ಚು ಮಾಡಲಾಗುತ್ತಿದೆ. ಇದುವರೆಗೆ 6.5 ಕೋಟಿಗೂ ಅಧಿಕ ಕೊರೋನಾ ಪರೀಕ್ಷೆಯನ್ನು ಮಾಡಲಾಗಿದೆ. ಹೆಚ್ಚೆಚ್ಚು ಪರೀಕ್ಷೆ ಮಾಡಿದಷ್ಟೂ ಪಾಸಿಟಿವ್ ಕೇಸುಗಳು ಬೇಗನೆ ಪತ್ತೆಯಾಗುತ್ತವೆ. ಪಾಸಿಟಿವ್ ಹೊಂದಿರುವವರ ಸಂಖ್ಯೆ ಕೂಡ ಇಳಿಮುಖವಾಗುತ್ತದೆ ಎಂದು ಎಂದು ಟ್ವೀಟ್ ಮಾಡಿದೆ.
ಭಾರತದಲ್ಲಿ ಪರೀಕ್ಷಾ ಸಾಮರ್ಥ್ಯ ಹೆಚ್ಚಾಗುತ್ತಿದ್ದಂತೆ ಹಲವು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಪ್ರತಿ ಮಿಲಿಯನ್ ಜನರಿಗೆ ಕೋವಿಡ್ -19 ಪರೀಕ್ಷೆಗಳನ್ನು ಉತ್ತಮವಾಗಿ ಅಲ್ಲಿನ ಸರ್ಕಾರಗಳು ನಿರ್ವಹಿಸುತ್ತಿವೆ.