HEALTH TIPS

ಕಾಸರಗೋಡು : 136 ಮಂದಿಗೆ ಸೋಂಕು

         

         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಬುಧವಾರ 136 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. ಇದೇ ವೇಳೆ 310 ಮಂದಿ ಗುಣಮುಖರಾಗಿದ್ದಾರೆ. 128 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ವಿದೇಶದಿಂದ ಬಂದ ಮೂವರು ಹಾಗು ಇತರ ರಾಜ್ಯಗಳಿಂದ ಬಂದ ಐವರಿಗೆ ರೋಗ ಬಾಧಿಸಿದೆ. 

         ರೋಗ ಬಾಧಿತರ ಪಂಚಾಯತಿವಾರು ವಿವರ: ಮೊಗ್ರಾಲ್‍ಪುತ್ತೂರು-3, ಉದುಮ-4, ಚೆಮ್ನಾಡ್-3, ಈಸ್ಟ್ ಎಳೇರಿ-1, ಚೆಂಗಳ-4, ಕಿನಾನೂರು-2, ಮಂಜೇಶ್ವರ-2, ಕಾಸರಗೋಡು-20, ಬೇಡಡ್ಕ-14, ದೇಲಂಪಾಡಿ-1, ಪಳ್ಳಿಕೆರೆ-4, ಪಡನ್ನ-8, ಪಿಲಿಕ್ಕೋಡು-4, ಚೆರ್ವತ್ತೂರು-2, ಬಳಾಲ್-4, ಬದಿಯಡ್ಕ-2, ಅಜಾನೂರು-5, ತೃಕ್ಕರಿಪುರ-4, ವಲಿಯಪರಂಬ-1, ಕಾಂಞಂಗಾಡ್-9, ಮಂಗಲ್ಪಾಡಿ-7, ಪುಲ್ಲೂರು-2, ಮೀಂಜ-1, ಕಯ್ಯೂರು-1, ಕುಂಬಳೆ-6, ಮಧೂರು-5, ಪುತ್ತಿಗೆ-4, ಎಣ್ಮಕಜೆ-2, ಕುತ್ತಿಕ್ಕೋಲ್-1, ಕಳ್ಳಾರ್-4, ಕೋಡೋಂ ಬೇಳೂರು-2, ಮುಳಿಯಾರು-1, ವೆಸ್ಟ್ ಎಳೇರಿ-1, ಕುಂಬ್ಡಾಜೆ-1, ವರ್ಕಾಡಿ-1 ಎಂಬಂತೆ ರೋಗ ಬಾಧಿಸಿದೆ. 

         ನೆಗೆಟಿವ್ ಆದವರ ಪಂಚಾಯತಿವಾರು ವಿವರ:  

     ಕಾಸರಗೋಡು ನಗರಸಭೆ 18, ಮಧೂರು ಪಂಚಾಯತ್ 13, ಮುಳಿಯಾರು ಪಂಚಾಯತ್ 7, ಬದಿಯಡ್ಕ ಪಂಚಾಯತ್ 4, ಮಂಜೇಶ್ವರ ಪಂಚಾಯತ್ 4, ಪುತ್ತಿಗೆ ಪಂಚಾಯತ್ 12, ಮಂಗಲ್ಪಾಡಿ ಪಂಚಾಯತ್ 6, ದೇಲಂಪಾಡಿ ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಕುಂಬಳೆ ಪಂಚಾಯತ್ 6, ಎಣ್ಮಕಜೆ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 7, ಮೊಗ್ರಾಲ್ ಪುತ್ತೂರು ಪಂಚಾಯತ್ 4, ವರ್ಕಾಡಿ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 7, ಕಾಞಂಗಾಡ್ ನಗರಸಭೆ 45, ಅಜಾನೂರುಪಂಚಾಯತ್ 34, ಪಡನ್ನ ಪಂಚಾಯತ್ 5, ಮಡಿಕೈ ಪಂಚಾಯತ್ 6, ಪಿಲಿಕೋಡ್ ಪಂಚಾಯತ್ 13, ಉದುಮಾ ಪಂಚಾಯತ್ 12, ಪಳ್ಳಿಕ್ಕರೆ ಪಂಚಾಯತ್ 18, ಕಳ್ಳಾರ್ ಪಂಚಾಯತ್ 1, ನೀಲೇಶ್ವರ ನಗರಸಭೆ 9, ಪನತ್ತಡಿ ಪಂಚಾಯತ್ 3, ಚೆರುವತ್ತೂರು ಪಂಚಾಯತ್ 3, ವಲಿಯಪರಂಬ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 4, ಪುಲ್ಲೂರು-ಪೆರಿಯ ಪಂಚಾಯತ್ 8, ಕಯ್ಯೂರು-ಚೀಮೇನಿ ಪಂಚಾಯತ್ 14, ಕೋಡೋಂ-ಬೇಳೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 11, ಈಸ್ಟ್ ಏಳೇರಿ ಪಂಚಾಯತ್ 18 ಮಂದಿಗೆ ನೆಗೆಟಿವ್ ಆಗಿದೆ.                                  

         4062 ಮಂದಿ ನಿಗಾದಲ್ಲಿ: 

    ಕಾಸರಗೋಡು ಜಿಲ್ಲೆಯಲ್ಲಿ 4062 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 

  ಮನೆಗಳಲ್ಲಿ 2949 ಮಂದಿ, ಸಾಂಸ್ಥಿಕವಾಗಿ 1113 ಮಂದಿ ನಿಗಾದಲ್ಲಿರುವರು.ನೂತನವಾಗಿ 300 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 968 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

      ಕೋವಿಡ್ ಪಾಸಿಟಿವ್ ಆಗಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1773 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 896 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆಯಲ್ಲಿದ್ದಾರೆ. ನೂತನವಾಗಿ 1312 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 386 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries