ಕಾಸರಗೋಡು: ಕಾಸರಗೋಡು ಜಿಲ್ಲೆಯ ಹೋಮಿಯೋ ಆಸ್ಪತ್ರೆಗಳಲ್ಲಿ ರಾಷ್ಟ್ರೀಯ ಆಯುಷ್ ಮಿಷನ್ ಮುಖಾಂತರ ದಾದಿಯರ(ಜಿ.ಎನ್.ಎಂ.) ಹುದ್ದಗೆ ನೇಮಕಾತಿ ನಡೆಯಲಿದೆ. ಲಿಖಿತ ಪರೀಕ್ಷೆಯ ಮೂಲಕ ನೇಮಕಾತಿ ನಡೆಯಲಿದೆ. 18ರಿಂದ 40 ವರ್ಷದ ಪ್ರಾಯದ ನಡುವಿನ ಮಂದಿ ಶಿಕ್ಷಣಾರ್ಹತೆ ಪತ್ರಗಳು, ಗುರುತುಚೀಟಿ, ಸ್ವಯಂ ದೃಡೀಕರಿಸಿದ ನಕಲುಗಳ ಸಹಿತ ಸೆ.14ರಂದು ಬೆಳಗ್ಗೆ 10 ಗಂಟೆಗೆ ಕಾಞಂಗಾಡ್ ಜಿಲ್ಲಾ ಮೆಡಿಕಲ್ ಕಚೇರಿ(ಹೋಮಿಯೋ) ಯಲ್ಲಿ ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 0467-2206886.