ತಿರುವನಂತಪುರ: ಕೋವಿಡ್ ಕಾರಣ 6 ತಿಂಗಳುಗಳಿಂದ ಮುಚ್ಚಲಾದ ರಾಜ್ಯದ ಡ್ರೈವಿಂಗ್ ಶಾಲೆಗಳನ್ನು ಸೆಪ್ಟೆಂಬರ್ 14 ರಿಂದ ಮತ್ತೆ ತೆರೆಯಲಾಗುವುದು. ತೆರೆದು ಕಾರ್ಯಾನಿರ್ವಹಿಸುವ ಮಾನದಂಡಗಳೊಂದಿಗೆ ನೂತನ ಕೋವಿಡ್ ಮಾರ್ಗಸೂಚಿಗಳನ್ನು ಸರ್ಕಾರ ಗುರುವಾರ ಬಿಡುಗಡೆಮಾಡಿದೆ.
ವಾಹನ ಚಾಲನಾ ತರಬೇತಿ ಶಾಲೆಗಳು ಎಲ್ಲಾ ನಿರ್ದೇಶನಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದರಿಂದ ಈ ಕ್ರಮ ತರಲಾಗಿದೆ ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿದ್ದಾರೆ.
ಕೋವಿಡ್ ಮಾನದಂಡಗಳನ್ನು ಪಾಲಿಸುತ್ತ ತರಬೇತಿ ಶಾಲೆಗಳನ್ನು ಪುನರಾರಂಭಿಸಬೇಕು. ವಾಹನದಲ್ಲಿ ಕೇವಲ ಎರಡು ಜನರಿಗೆ ಮಾತ್ರ ಅವಕಾಶವಿ ನೀಡಲಾಗುವುದು. ಒಂದು ಸಮಯದಲ್ಲಿ ಒಬ್ಬ ವ್ಯಕ್ತಿಗೆ ಮಾತ್ರ ವಾಹನ ಚಲಾಯಿಸಲು ತರಬೇತಿ ನೀಡಬೇಕು. ಒಬ್ಬ ವ್ಯಕ್ತಿಗೆ ಡ್ರೈವಿಂಗ್ ತರಬೇತಿ ನೀಡಿದ ಬಳಿಕ ಇನ್ನೊಬ್ಬರು ವಾಹನ ಏರುವ ಮೊದಲು ವಾಹನವನ್ನು ಸೋಂಕುರಹಿತಗೊಳಿಸಬೇಕು. ಮಾಸ್ಕ್ ಮತ್ತು ಸ್ಯಾನಿಟೈಜರ್‍ಗಳನ್ನು ಬಳಸಬೇಕು. ಈ ಸೂಚನೆಗಳ ಪಾಲನೆಗಳನ್ನು ಸರ್ಕಾರ ಖಚಿತಪಡಿಸಿಕೊಳ್ಳಬೇಕು ಎಂದು ಸಾರಿಗೆ ಸಚಿವ ಎ.ಕೆ.ಶಶೀಂದ್ರನ್ ಹೇಳಿರುವರು.
ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹೊತ್ತಲ್ಲಿಯೇ ವಾಹನ ತರಬೇತಿ ಶಾಲೆಗಳ ಪುನರಾರಂಭವು ತೀವ್ರ ಕಳವಳಕಾರಿಯಾಗುತ್ತಿರುವುದು ಸೋಂಕಿನ ಭೀತಿಯ ಕಾಲಘಟ್ಟದಲ್ಲಿ ಎನ್ನುವುದೂ ತೊಂದರೆಗೆ ಕಾರಣವಾಗುತ್ತಿದೆ.
ಕೋವಿಡ್ ನಿಬಂಧನೆಗಳನ್ನು ಸರಾಗಗೊಳಿಸುವ ಅನ್ಲಾಕ್ ಕ್ರಮಗಳೊಂದಿಗೆ ಕೇಂದ್ರ ಸರ್ಕಾರ ಮುಂದುವರಿಯುತ್ತಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ವಿವಿಧ ಸಂಸ್ಥೆಗಳು ಮತ್ತು ಕಚೇರಿಗಳು ಕಾರ್ಯನಿರ್ವಹಿಸಲು ಈಗಾಗಲೇ ಪ್ರಾರಂಭಿಸಿವೆ. ಅಕ್ಟೋಬರ್ ವೇಳೆಗೆ ಹೆಚ್ಚಿನ ನಿರ್ಬಂಧಗಳನ್ನು ತೆಗೆದುಹಾಕಲು ಕೇಂದ್ರವು ನಿರ್ಧರಿಸಿದೆ. ಸೆಪ್ಟೆಂಬರ್ 21 ರಿಂದ ಒಂಬತ್ತನೇ ತರಗತಿಯಿಂದ ಹನ್ನೆರಡನೇ ತರಗತಿಯ ವಿದ್ಯಾರ್ಥಿಗಳಿಗೆ ಶಾಲೆಗಳನ್ನು ತೆರೆಯಲಾಗುವುದು ಎಂದು ಕೇಂದ್ರವು ಮೊನ್ನೆ ಘೋಷಿಸಿತ್ತು.