ಕಾಸರಗೋಡು: 2020-21ನೇ ವರ್ಷದ ಲಾಟರಲ್ ಎಂಟ್ರಿ ಮುಖಾಂತರ ನಡೆಯುವ ಪಾಲಿಟೆಕಿನ್ಕ್ ಪ್ರವೇಶಾತಿಗೆ ಅರ್ಜಿ ಸಲ್ಲಿಸಿದವರ ರಾಂಕ್ ಲಿಸ್ಟ್ ಪ್ರಕಟಿಸಲಾಗಿದೆ. ಕಾಸರಗೋಡು ಸರಕಾರಿ ಪಾಲಿಟೆಕ್ನಿಕ್ ಕಾಲೇಜಿಗಿರುವ ಪ್ರವೇಶಾತಿ ಕೌನ್ಸಿಲಿಂಗ್ ಸೆ.15ರಂದು ನಡೆಯಲಿದೆ. ಐ.ಟಿ.ಐ. ವಿಭಾಗದ ರಾಂಕ್ ಲಿಸ್ಟ್ ನಲ್ಲಿ ಸಿವಿಲ್ ಇಂಜಿನಿಯರಿಂಗ್ ಗೆ 37 ನೇ ರಾಂಕ್ ವರೆಗೆ, ಇಲೆಕ್ಟ್ರಿಕಲ್, ಕಂಪ್ಯೂಟರ್, ಇಲೆಕ್ಟ್ರಾನಿಕ್ಸ್ ಎಂಬ ಶಾಖೆಗಳಲ್ಲಿ ರಾಂಕ್ ಲಿಸ್ಟ್ ನಲ್ಲಿ ಸೇರಿರುವ ಎಲ್ಲರಿಗೂ ಕೌನ್ಸಲಿಂಗ್ ನಡೆಯಲಿದೆ. ಪ್ಲಸ್ ಟು, ವಿ.ಎಚ್.ಎಸ್.ಇ. ಲಿಸ್ಟ್ ನಲ್ಲಿ 110 ರಾಂಕ್ ವರೆಗಿನ ಮಂದಿ, ಪರಿಶಿಷ್ಟ ಜಾತಿ-ಪಂಗಡ, ಲಾಟಿನ್ ಕೆಥಾಲಿಕ್ ಜನಾಂಗದ ರಾಂಕ್ ಪಟ್ಟಿಯಲ್ಲಿರುವ ಎಲ್ಲರಿಗೂ, 129 ರಾಂಕ್ ವರೆಗಿನ ಈಡಿಗ, 144 ರಾಂಕ್ ವರೆಗಿನ ಮುಸ್ಲಿಂ ಜನಾಂಗದ ಮಂದಿ ಕೌನ್ಸಿಲಿಂಗ್ ನಲ್ಲಿ ಭಾಗವಹಿಸಬಹುದು. ಕೌನ್ಸಿಲಿಂಗ್ ಗೆ ರಾಂಕ್ ನಂಬ್ರ 60 ವರೆಗಿನ ಮಂದಿಗೆ ಅದೇ ದಿನ ಬೆಳಗ್ಗೆ 10 ಗಂಟೆಗೆ ನೋಂದಣಿ, ಉಳಿದ ರಾಂಕ್ ನವರ ನೋಂದಣಿ ಅಂದು ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ. ಪ್ರವೇಶಾತಿ ಪಡೆಯುವವರು ಪ್ರವೇಶಾತಿ ವೇಳೆ 16100 ರೂ. ಶುಲ್ಕ ಸಲ್ಲಿಸಬೇಕು. ಪರಿಶಿಷ್ಟ ಜಾತಿ/ಪಂಗಡ ಜನಾಂಗದವರಿಗೆ ಶುಲ್ಕದಲ್ಲಿ ರಿಯಾಯಿತಿ ಇದೆ. ಎಸ್.ಎಸ್.ಎಲ್.ಸಿ., ಪ್ಲಸ್ ಟು, ವಿ.ಎಚ್.ಎಸ್.ಸಿ., ಐ.ಟಿ.ಐ., ಟಿ.ಸಿ., ಕಾಂಟಾಕ್ಟ್, ಜಾತಿ, ಆದಾಯಗಳ ಅಸಲಿ ದಾಖಲೆಗಳ ಸಹಿತ ಪ್ರವೇಶಾತಿ ವೇಳೆ ಹಾಜರಾಗಬೇಕು. ಹೆಚ್ಚುವರಿ ಮಾಹಿತಿಗೆ ದೂರವಾಣಿ ಸಂಖ್ಯೆ: 9495373926.