HEALTH TIPS

ಕಾಸರಗೋಡು : 150 ಮಂದಿಗೆ ಸೋಂಕು ದೃಢ-104 ಮಂದಿ ಗುಣಮುಖ

    

        ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 150 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 104 ಮಂದಿ ಗುಣಮುಖರಾಗಿದ್ದಾರೆ. 149 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಒಬ್ಬರು ಇತರ ರಾಜ್ಯದಿಂದ ಬಂದವರು. 

           ರೋಗ ಬಾಧಿತರ ಪಂಚಾಯತಿವಾರು ವಿವರ: ನೀಲೇಶ್ವರ-4, ಅಜಾನೂರು-14, ಪುಲ್ಲೂರು-7, ಕಾಂಞಂಗಾಡ್-16, ಮಧೂರು-6, ಕಾಸರಗೋಡು-15, ಪಳ್ಳಿಕೆರೆ-6, ಮುಳಿಯಾರು-2, ಕಾರಡ್ಕ-1, ಮಂಜೇಶ್ವರ-2, ಚೆಮ್ನಾಡ್-14, ಮೊಗ್ರಾಲ್‍ಪುತ್ತೂರು-6, ಚೆಂಗಳ-8, ಕುಂಬಳೆ-2, ವಲಿಯಪರಂಬ-1, ಚೆರ್ವತ್ತೂರು-1, ಪಿಲಿಕೋಡು-4, ಎಣ್ಮಕಜೆ-3, ಉದುಮ-5, ಬದಿಯಡ್ಕ-5, ಈಸ್ಟ್ ಎಳೇರಿ-1, ತೃಕ್ಕರಿಪುರ-1, ಮಡಿಕೈ-5, ವೆಸ್ಟ್ ಎಳೇರಿ-1, ಮಂಗಲ್ಪಾಡಿ-6, ಕಿನಾನೂರು-9, ಪೈವಳಿಕೆ-1, ಕಯ್ಯೂರು-3 ಎಂಬಂತೆ ರೋಗ ಬಾಧಿಸಿದೆ. 

          104 ಮಂದಿ ಗುಣಮುಖ:

    ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 104 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

   ಕೋವಿಡ್ ನೆಗೆಟಿವ್ ಆದವರ ಪಂಚಾಯತಿವಾರು ವಿವರ: 

  ಕಾಸರಗೋಡು ನಗರಸಭೆ 5, ಮಧೂರು ಪಂಚಾಯತ್ 14, ಚೆಮ್ನಾಡ್ ಪಂಚಾಯತ್ 5, ಮಂಗಲ್ಪಾಡಿ ಪಂಚಾಯತ್ 4, ಬದಿಯಡ್ಕ ಪಂಚಾಯತ್ 1, ವರ್ಕಾಡಿ ಪಂಚಾಯತ್ 1, ಕುಂಬಳೆ ಪಂಚಾಯತ್ 3, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಎಣ್ಮಕಜೆ ಪಂಚಾಯತ್ 1, ಮಂಜೇಶ್ವರ ಪಂಚಾಯತ್ 2, ಕಾಞಂಗಾಡ್ ನಗರಸಭೆ 13, ಪಡನ್ನ ಪಂಚಾಯತ್ 2, ಅಜಾನೂರು ಪಂಚಾಯತ್ 16, ಪಳ್ಳಿಕ್ಕರೆ ಪಂಚಾಯತ್ 5, ಪಿಲಿಕೋಡ್ ಪಂಚಾಯತ್ 6, ಮಡಿಕೈ ಪಂಚಾಯತ್ 1, ನೀಲೇಶ್ವರ ನಗರಸಭೆ 4, ಈಸ್ಟ್ ಏಳೇರಿ ಪಂಚಾಯತ್ 1, ಕೋಡೋಂ-ಬೇಳೂರು ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1, ತ್ರಿಕರಿಪುರ ಪಂಚಾಯತ್ 2, ಕಯ್ಯೂರು-ಚೀಮೇನಿ ಪಂಚಾಯತ್ 2, ವಲಿಯಪರಂಬ ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.  

                   5938 ಮಂದಿ ನಿಗಾದಲ್ಲಿ: 

    ಕಾಸರಗೋಡು ಜಿಲ್ಲೆಯಲ್ಲಿ 5938 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 

     ಮನೆಗಳಲ್ಲಿ 4616 ಮಂದಿ, 1322 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿರುವರು. ನೂತನವಾಗಿ 215 ಮಂದಿ ನಿಗಾ ಪ್ರವೇಶಿಸಿದ್ದಾರೆ. 216 ಮಂದಿ ಶನಿವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 

            ನೂತನವಾಗಿ 1051 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 140 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 

      ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 7070 ಮಂದಿಗೆ ಕೋವಿಡ್ ಪಾಸಿಟಿವ್ 

ಕಾಸರಗೋಡು, ಸೆ.12: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 7070 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 

   ಇವರಲ್ಲಿ 5996 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 618 ಮಂದಿ ವಿದೇಶದಿಂದ, 456 ಮಂದಿ ಇತರ ರಾಜ್ಯದಿಂದ ಬಂದವರು. 5005 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 51 ಆಗಿದೆ. ಈಗ 2014 ಮಂದಿ ಕೋವಿಡ್ ನಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries