HEALTH TIPS

ಇಂದು ರಾಜ್ಯದಲ್ಲಿ 1547 ಕೋವಿಡ್ ಬಾಧಿತರು- 2129 ಮಂದಿ ಗುಣಮುಖ-ಕಾಸರಗೋಡು-88 ಮಂದಿಗೆ ಸೋಂಕು

    

        ತಿರುವನಂತಪುರ: ಕೇರಳದಲ್ಲಿ ಇಂದು 1547 ಜನರಿಗೆ ಕೋವಿಡ್ -19 ದೃಢೀಕರಿಸಲಾಗಿದೆ. 2129 ಮಂದಿ ಸೋಂಕಿನಿಂದ ಮುಕ್ತರಾಗಿರುವುದಾಗಿ ರಾಜ್ಯ ಆರೋಗ್ಯ ವಿಭಾಗ ತಿಳಿಸಿದೆ. 

           ಪಾಸಿಟಿವ್ ಬಾಧಿತರ ಜಿಲ್ಲಾವಾರು ವಿವರ:

    ತಿರುವನಂತಪುರ ಜಿಲ್ಲೆ 228 , ಕೋಝಿಕ್ಕೋಡ್ 204 , ಆಲಪ್ಪುಳ 159 , ಮಲಪ್ಪುರಂ 146, ಕೋಟ್ಟಯಂ  145 , ಕಣ್ಣೂರು 142 , ಎರ್ನಾಕುಳಂ 136 , ತ್ರಿಶೂರ್  121 , ಕಾಸರಗೋಡು 88, ಕೊಲ್ಲಂ 81, ವಯನಾಡ್ 38 , ಪಾಲಕ್ಕಾಡ್  30 , ಪತ್ತನಂತಿಟ್ಟು 17, ಇಡುಕ್ಕಿ  12 ಮಂದಿಗಳಲ್ಲಿ ರೋಗ ಪತ್ತೆಯಾಗಿದೆ.

             ನೆಗೆಟಿವ್ ವಿವರ: 

    2129 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ 402, ಕೊಲ್ಲಂ 85 , ಪತ್ತನಂತಿಟ್ಟು 112, ಅಲಪ್ಪುಳ 288, ಕೊಟ್ಟಾಯಂ  69 , ಇಡುಕಿ 42 , ಎರ್ನಾಕುಳಂ 119,   ತ್ರಿಶೂರ್ 100 , ಪಾಲಕ್ಕಾಡ್ 98 , ಮಲಪ್ಪುರಂ  317 , ಕೋಝಿಕ್ಕೋಡ್ 194 , ವಯನಾಡ್ 26 , ಕಣ್ಣೂರು 127,  ಕಾಸರಗೋಡು 150 ಮಂದಿಗಳ ಫಲಿತಾಂಶ ನೆಗೆಟಿವ್ ಆಗಿದೆ. 

          ರಾಜ್ಯದಲ್ಲಿ ಏಳು ಕೋವಿಡ್ ಮರಣ: 

    ಕಾಸರಗೋಡು ಮಂಜೇಶ್ವರದ ಅಬೂಬಕರ್ (60), ತಿರುವನಂತಪುರ ಕಲಾಕೋಡಿನ ಓಮನಕುಟ್ಟನ್ (63), ತಿರುವನಂತಪುರ ಸಿಲ್ವಮ್ಮ (80), , ಪೆರುಂಬಾವೂರಿನ ನಬೀಸಾ ಬೀರನ್ (75),ಎರ್ನಾಕುಳ ಅಲುವಾದ ಸದಾನಂದನ್ (57) ಮತ್ತು ತಿರುವನಂತಪುರನ ಶ್ರೀಕಾರ್ಯಂನ  ಬಾಲಚಂದ್ರನ್ ನಾಯರ್ (63), ಎರ್ನಾಕುಳಂ ಕೋದಮಂಗಲದ ಬೋಬಿ ಜೋರ್ಜ್(60) ರ ಮರಣಗಳು ಕೋವಿಡ್ ಸೋಂಕಿನಿಂದ ಎಂದು ದೃಢೀಕರಿಸಲಾಗಿದೆ. ಈ ಮೂಲಕ ರಾಜ್ಯದಲ್ಲಿ ಕೋವಿಡ್ ಸೋಂಕಿನಿಂದ ಮೃತರಾದವರ ಸಂಖ್ಯೆ ಒಟ್ಟು  305 ಕ್ಕೆ ಏರಿಕೆಯಾಗಿದೆ. 

           36 ಆರೋಗ್ಯ ಕಾರ್ಯಕರ್ತರಿಗೆ ಕೋವಿಡ್:

     ಕೋವಿಡ್ ರಾಜ್ಯದ 36 ಆರೋಗ್ಯ ಕಾರ್ಯಕರ್ತರಲ್ಲಿ  ದೃಢಪಟ್ಟಿದೆ. ತಿರುವನಂತಪುರ 16, ಮಲಪ್ಪುರಂ 5, ಎರ್ನಾಕುಳಂ ಮತ್ತು ಕಣ್ಣೂರು ಜಿಲ್ಲೆಗಳಲ್ಲಿ ತಲಾ 3, ಕೊಲ್ಲಂ, ಆಲಪ್ಪುಳ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ತಲಾ 2 ಮತ್ತು ಕೋಝಿಕ್ಕೋಡ್ , ವಯನಾಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಒಬ್ಬರು ಆರೋಗ್ಯ ಕಾರ್ಯಕರ್ತರಲ್ಲಿ ಸೋಂಕು ದೃಢಪಟ್ಟಿದೆ. 

           ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ:

    ಅನ್ಲಾಕ್ ವಿನಾಯಿತಿ ಮುಂದುವರಿದಂತೆ ದೇಶದಲ್ಲಿ ಕೋವಿಡ್ ಬಾಧಿತರ  ಸಂಖ್ಯೆ ಹೆಚ್ಚುತ್ತಿದೆ. ರೋಗಮುಕ್ತರಾದವರ ಹೆಚ್ಚಳವಿದ್ದರೂ ಸಾವಿನ ಸಂಖ್ಯೆಯೂ ಏರಿಕೆಯಾಗುತ್ತಿದೆ. ದೇಶದ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 37,69,524 ಕ್ಕೆ ಏರಿದೆ. ಈವರೆಗೆ 66,333 ಸಾವುಗಳು ವರದಿಯಾಗಿವೆ. ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶಗಳ ಪ್ರಕಾರ, 29,01,909 ಜನರನ್ನು ಗುಣಪಡಿಸಲಾಗಿದೆ. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿವೆ.

        ಇಂದು ಮಾಧ್ಯಮಗಳಲ್ಲಿ ಎರಡು ಕೋವಿಡ್ ಸಾವುಗಳು: 

    ಕೇರಳದ ಸುದ್ದಿ ಮಾಧ್ಯಮಗಳ ವರದಿಯಂತೆ ಇಂದು ಎರಡು ಕೋವಿಡ್ ಮರಣಗಳೂ ಕೋವಿಡ್ ನಿಂದ ಎಂಬುದು ದೃಢೀಕರಿಸಿದೆ. ಸರ್ಕಾರದ ಅಧಿಕೃತ ವರದಿಗೆ ಕಾಯಲಾಗುತ್ತಿದೆ. ಪತ್ತನಂತಿಟ್ಟು ನಿವಾಸಿಗಳಾದ ಮೃತರನ್ನು ಮುಂಡುಕೊಟ್ಟೈಕ್ಕಲ್‍ನ ಜೋಸೆಫ್ (70) ಮತ್ತು ಅಡೂರ್ ಎರಂ ನಿವಾಸಿ ರವೀಂದ್ರನ್ (68) ಎಂದು ಗುರುತಿಸಲಾಗಿದೆ. ಪಾಲಕ್ಕಾಡ್‍ನ ಶೋಲಾರ್ ಮೂಲದ ನಿಶಾ (24) ಯಕೃತ್ತು ಮತ್ತು ಮೂತ್ರಪಿಂಡದ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ. ಅವರು ಮಂಜೇರಿ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries