ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 120 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 8 ಮಂದಿ ವಿದೇಶದಿಂದ, 5 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾ„ಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದ್ದಾರೆ. ಇದೇ ಸಂದರ್ಭದಲ್ಲಿ 170 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಪಂಚಾಯತಿ ಮಟ್ಟದ ವಿವರ : ಕಾಸರಗೋಡು ನಗರಸಭೆ-26, ಮಧೂರು ಪಂಚಾಯತ್-13, ಕಾರಡ್ಕ-2, ಚೆಮ್ನಾಡ್-12, ಚೆಂಗಳ-8, ಕುತ್ತಿಕೋಲು-1, ಮೊಗ್ರಾಲ್ ಪುತ್ತೂರು-6, ಪೈವಳಿಕೆ-2, ಪುತ್ತಿಗೆ-2, ಎಣ್ಮಕಜೆ-3, ಮುಳಿಯಾರು-5, ಮಂಜೇಶ್ವರ-2, ಮಂಗಲ್ಪಾಡಿ-2, ಕುಂಬಳೆ-5, ಕಾಞಂಗಾಡ್ ನಗರಸಭೆ-10, ಉದುಮ-11, ಮಡಿಕೈ-1, ಪಳ್ಳಿಕ್ಕರೆ-6, ಅಜಾನೂರು-6, ಪಡನ್ನ-2, ನೀಲೇಶ್ವರ ನಗರಸಭೆ-2, ಕಯ್ಯೂರು-ಚೀಮೇನಿ-2, ಕಿನಾನೂರು-ಕರಿಂದಳಂ-1, ಪುಲ್ಲೂರು-ಪೆರಿಯ-1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.
6474 ಮಂದಿ ನಿಗಾದಲ್ಲಿ : ಕಾಸರಗೋಡು ಜಿಲ್ಲೆಯಲ್ಲಿ 6474 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಮನೆಗಳಲ್ಲಿ 5587, ಸಾಂಸ್ಥಿಕವಾಗಿ 887 ಮಂದಿ ನಿಗಾದಲ್ಲಿರುವರು. ನೂತನವಾಗಿ 1254 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 697 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5378 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 4407 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 565 ಮಂದಿ ವಿದೇಶದಿಂದ, 406 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 4044 ಮಂದಿಗೆ ಈ ವರೆಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 1292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ 42 ಮಂದಿ ಮೃತಪಟ್ಟಿದ್ದಾರೆ.
ಕೇರಳದಲ್ಲಿ 1553 ಮಂದಿಗೆ ಸೋಂಕು ದೃಢ :
ಕೇರಳ ರಾಜ್ಯದಲ್ಲಿ ಗುರುವಾರ 1553 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. ಇದೆ ಸಂದರ್ಭದಲ್ಲಿ 1950 ಮಂದಿ ಗುಣಮುಖರಾಗಿದ್ದಾರೆ. 1391 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 10 ಮಂದಿ ಸಾವು ಖಾತರಿಪಡಿಸಲಾಗಿದೆ. ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 21516 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಈ ವರೆಗೆ 57732 ಮಂದಿ ಗುಣಮುಖರಾಗಿದ್ದಾರೆ.
ರೋಗ ಬಾಧಿತರ ಜಿಲ್ಲಾವಾರು ವಿವರ : ತಿರುವನಂತಪುರ-317, ಎರ್ನಾಕುಳಂ-164, ಕೋಟ್ಟಯಂ-160, ಕಾಸರಗೋಡು-133, ಕಲ್ಲಿಕೋಟೆ-131, ಪತ್ತನಂತಿಟ್ಟ-118, ತೃಶ್ಶೂರು-93, ಮಲಪ್ಪುರಂ-91, ಆಲಪ್ಪುಳ-87, ಕಣ್ಣೂರು-74, ಕೊಲ್ಲಂ-65, ಪಾಲ್ಘಾಟ್-58, ಇಡುಕ್ಕಿ-44, ವಯನಾಡು-18 ಎಂಬಂತೆ ರೋಗ ಬಾಧಿಸಿದೆ.
ನಿರ್ಬಂಧಗಳ ತೆರವಿನ ಮಧ್ಯೆ ಮತ್ತೆ ಏರುಗತಿ!:
ರಾಜ್ಯದಲ್ಲಿ ಕಳೆದ ಎರಡು ದಿನಗಳಿಂದ ಕೆಲವು ಪ್ರಯಾಣ ನಿರ್ಬಂಧಗಳನ್ನು ತೆರವುಗೊಳಿಸಲಾಗುತ್ತಿದ್ದು ಗಡಿಗಳಲ್ಲಿ ಅಂತರಾಜ್ಯ ಸಂಪರ್ಕ ನಿಬಂಧನೆಗಳನ್ನು ಸಡಿಲಗೊಳಿಸಲಾಗಿದೆ. ಈ ಮಧ್ಯೆ ಏರುಗತಿಯಲ್ಲಿ ಮತ್ತೆ ಸೋಂಕಿನ ಮಟ್ಟ ಇರುವುದು ಕಳವಳಕ್ಕೆ ಕಾರಣವಾಗಿದೆ. ಈ ಏರುಗತಿಯ ಸೋಂಕು ಮುಂದುವರಿದರೆ ಮತ್ತೆ ಅಂತರ್ ರಾಜ್ಯ ಸಂಪರ್ಕ ಈ ಹಿಂದಿನಂತೆ ಕಠಿಣಗೊಳ್ಳುವುದೇ ಎಂಬ ಭೀತಿ ಎದುರಾಗಿದೆ. ಈ ನಿಟ್ಟಿನಲ್ಲಿ ಜನ ಸಾಮಾನ್ಯರು ತಮ್ಮ ವೈಯುಕ್ತಿಕ ನೆಲೆಗಳಲ್ಲಿ ಸಂಪರ್ಕ ಜಾಗರೂಕತೆ, ಸಾನಿಟೈಸೇಶನ್ ಗಳನ್ನು ಜಾಗರೂಕತೆಯಿಂದ ಪಾಲಿಸಬೇಕಾದ ಅಗತ್ಯ ಇದೆ.