ಕಾಸರಗೋಡು: ಯಾವುದೇ ರೋಗ ಲಕ್ಷಣಗಳಿಲ್ಲದೆ ಕೋವಿಡ್ ಸೋಂಕು ಖಚಿತವಾದ ಮಂದಿಗೆ ಸ್ವ ಗೃಹಗಳಲ್ಲೇ ಚಿಕಿತ್ಸೆನೀಡುವ ವಿನೂತನ ಯೋಜನೆ ಕಾಸರಗೋಡು ಜಿಲ್ಲೆಯಲ್ಲಿ ಯಶಸ್ವಿಯಾಗಿ ಮುಂದುವರಿಯುತ್ತಿದೆ ಎಂದು ಕೊರೋನಾ ಕೋರ್‍ಸಮಿತಿ ಅವಲೋಕನ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಡಿ.ಸಜಿತ್‍ಬಾಬು ತಿಳಿಸಿದ್ದಾರೆ.
ಈ ವರೆಗೆ 1562 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಇವರಲ್ಲಿ 702 ಮಂದಿ ಈಗಲೂದಾಖಲಾತಿ ಚಿಕಿತ್ಸೆಯಲ್ಲಿ ಮುಂದುವರಿಯುತ್ತಿದ್ದಾರೆ. ಎಲ್ಲ ಸ್ಥಳೀಯಾಡಳಿತ ಸಂಸ್ಥೇಗಳೂ ತಮ್ಮ ವ್ಯಾಪ್ತಿಯ ಕೋವಿಡ್ ರೋಗಿಗಳಿಗೆ ಅಗತ್ಯದ ಓಕ್ಸಿ ಮೀಟರ್ ಒದಗಿಸಬೇಕು ಎಂದು ಪಂಚಾಯತ್ ಡೆಪ್ಯುಟಿ ಡೈರೆಕ್ಟರ್ ಅವರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು.
ಅಜಾನೂರು-ಕೋಟಿಕುಳಂ ವಲಯಗಳ ಮನೆಗಳಲ್ಲಿ ಸ್ವಗೃಹಗಳಲ್ಲಿ ಚಿಕಿತ್ಸೆಗೆ ಸೌಲಭ್ಯಗಳಿಲ್ಲದೇ ಇರುವ ಕಾರಣ ಸಿ.ಎಫ್.ಎಲ್.ಟಿ.ಸಿ.ಗಾಗಿ ಪತ್ತೆ ಮಾಡಿರುವ ನೂತನ ಕಟ್ಟಡವನ್ನು ಈ ನಿಟ್ಟಿನಲ್ಲಿ ಬಳಸಬೇಕು ಎಂದು ಜಿಲ್ಲಾದಿಕಾರಿ ತಿಳಿಸಿದರು.