ತಿರುವನಂತಪುರ: ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಹೆಚ್ಚಳಗೊಳ್ಳುತ್ತಿದ್ದು ತೀವ್ರ ಕಳವಳಕಾರಿಯಾಗುತ್ತಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸುಳಿವು ನೀಡಿದ್ದಾರೆ. ಅಕ್ಟೋಬರ್ ಮಧ್ಯದ ವೇಳೆಗೆ ರಾಜ್ಯದಲ್ಲಿ ಕೋವಿಡ್ ತೀವ್ರಗತಿಯಲ್ಲಿ ಏರಿಕೆಯಾಗುವ ನಿರೀಕ್ಷೆಯಿದೆ. ಪ್ರಕರಣಗಳ ಸಂಖ್ಯೆ ದಿನಕ್ಕೆ 15,000 ಕ್ಕೆ ಏರಿಕೆಯಾಗಲಿದೆ ಎಂದು ಎಲ್‍ಡಿಎಫ್ ಸಭೆಯಲ್ಲಿ ಸಿಎಂ ಹೇಳಿದರು.
ಕೋವಿಡ್ ಹರಡುವಿಕೆ ತೀವ್ರಗೊಳ್ಳುತ್ತಿರುವ ಪರಿಸ್ಥಿತಿಯತ್ತ ರಾಜ್ಯ ಸಾಗುತ್ತಿದೆ. ಈ ಪರಿಸ್ಥಿತಿಯಲ್ಲಿ ಪ್ರತಿಭಟನೆ, ಜನ ಸೇರುವುವಂತಹ ಚಟುವಟಿಕೆಗಳನ್ನು ನಿಯಂತ್ರಿಸಬೇಕು ಎಂದು ಮುಖ್ಯಮಂತ್ರಿ ಹೇಳಿದರು. ಕೋವಿಡ್ ಪ್ರಕರಣಗಳು ಹೆಚ್ಚಾಗಿದ್ದರೂ, ಲಾಕ್ ಡೌನ್ ಹೇರುವ ಚಿಂತನೆ ಪ್ರಸ್ತುತ ಇಲ್ಲ ಎಲ್‍ಡಿಎಫ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಹೆಚ್ಚುತ್ತಿವೆ. ಆದರೆ ಮುಂದಿನ ಎರಡು ವಾರಗಳಲ್ಲಿ ಪರಿಸ್ಥಿತಿಯನ್ನು ನಿರ್ಣಯಿಸಲಾಗುವುದು. ಆ ಬಳಿಕ ಲಾಕ್ ಡೌನ್ ಸೇರಿದಂತೆ ನಿಬರ್ಂಧಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ. ಕೋವಿಡ್ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವುದರಿಂದ ಎಲ್‍ಡಿಎಫ್‍ನ ಎಲ್ಲಾ ಹೋರಾಟಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಎಲ್‍ಡಿಎಫ್ ಕನ್ವೀನರ್ ಎ ವಿಜಯರಾಘವನ್ ಹೇಳಿದ್ದಾರೆ.