ಕಾಸರಗೋಡು: ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದ ಹೊಸದುರ್ಗ ತಾಲೂಕು ಮಟ್ಟದ ದೂರು ಪರಿಹಾರ ಆನ್ ಲೈನ್ ಅದಾಲತ್ ಸೋಮವಾರ ಜರುಗಿತು. ಈ ವೇಳೆ 21 ದೂರುಗಳನ್ನು ಪರಿಶೀಲಿಸಲಾಗಿದ್ದು, 17 ದೂರುಗಳಿಗೆ ತೀರ್ಪು ನೀಡಲಾಗಿದೆ. ಉಳಿದ 4 ದೂರುಗಳನ್ನು ಸಂಬಂಧಪಟ್ಟ ಇಲಾಖೆಯ ಸಿಬ್ಬಂದಿಗೆ ಹಸ್ತಾಂತರಿಸಲಾಗಿದೆ.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಸಮಾಜದ ಕೆಳಸ್ತರದಲ್ಲಿರುವ ಮಂದಿಯ ಏಳಿಗೆಗೆ ಸರಕಾರಿ ಸಿಬ್ಬಂದಿ ಯತ್ನಿಸಬೇಕು ಎಂದು ಅಭಿಪ್ರಾಯಪಟ್ಟರು.
ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಸಹಾಯಕ ಜಿಲ್ಲಾಧಿಕಾರಿಗಳಾದ ಕೆ.ರವಿಕುಮಾರ್, ಸಜಿ ಎಫ್ ಮೆಂಡೀಸ್, ಹೊಸದುರ್ಗ ತಹಸೀಲ್ದಾರ್ ಎನ್.ಮಣಿರಾಜ್, ವಿವಿಧ ಇಲಾಖೆ ಮಟ್ಟದ ಸಿಬ್ಬಂದಿ ಉಪಸ್ಥಿತರಿದ್ದರು. ಈ ಮೂಲಕ 8ನೇ ಆನ್ ಲೈನ್ ಅದಾಲತ್ ನಡೆದಂತಾಗಿದೆ.