ಕೊಚ್ಚಿ: ಚಿನ್ನ ಕಳ್ಳಸಾಗಾಣಿಕೆಯ ಪ್ರಕರಣದ ಪ್ರಧಾನ ಆರೋಪಿ ಸ್ವಪ್ನಾ ಸುರೇಶ್ ಮತ್ತು ತಂಡ ಖರ್ಜೂರದ ಹಣ್ಣು ವಿತರಣೆಯ ಮರೆಯಲ್ಲೂ ಭಾರೀ ಗೋಲ್ ಮಾಲ್ ನಡೆಸಿರುವ ಆಘಾತಕಾರಿ ಅಂಶ ನಿನ್ನೆ ಹೊರಬಿದ್ದಿದೆ. ರಾಜ್ಯದ ವಿಶೇಷ ಶಾಲೆಗಳು ಮತ್ತು ಅಂಗನವಾಡಿ ಪುಟಾಣಿಗಳಿಗೆ ಸೇರಿ 40,000 ಖರ್ಜೂರ ಹಣ್ಣುಗಳನ್ನು ಸರ್ಕಾರ ಕೊಡಮಾಡಲು ನಿರ್ಧರಿಸಿತ್ತು. ಆದರೆ ಉದ್ಘಾಟನಾ ದಿನದಂದು ಕೇವಲ 15 ಮಕ್ಕಳಿಗೆ ಮಾತ್ರ ಸಿಎಂ ಕಚೇರಿಯಲ್ಲಿ ಹಣ್ಣನ್ನು ನೀಡಿದ್ದರು.
ಅಂದಿನಿಂದ ಯಾರಿಗೂ ಖರ್ಜೂಋದ ಹಣ್ಣು ನೀಡಿಲ್ಲ. ಮಗುವೊಂದಕ್ಕೆ ಮಗುವಿಗೆ 250 ಗ್ರಾಂ ನಷ್ಟು ಖರ್ಜೂರದ ಹಣ್ಣು ವಿತರಿಸಲಾಗುತ್ತದೆ ಎಂದು ಸರ್ಕಾರ ಹೇಳಿತ್ತು. . ಈ ಯೋಜನೆಯನ್ನು 2017 ಮೇ 26 ರಂದು ಪ್ರಾರಂಭಿಸಲಾಗಿತ್ತು. ಯೋಜನೆಗಾಗಿ 17000 ಕೆಜಿ ಖರ್ಜೂಋಗಳನ್ನು ರಾಜತಾಂತ್ರಿಕ ಚಾನೆಲ್ ಮೂಲಕ ತಲುಪಿಸಲಾಯಿತು. ಇದಕ್ಕಾಗಿ ನಿಯಮ-ನಿಬಂಧನೆಗಳ(ಶಿಷ್ಟಾಚಾರ) ಅಧಿಕಾರಿಯ ಅನುಮತಿಯನ್ನೂ ಪಡೆಯಲಾಗಿತ್ತು. ಆದರೆ ಇದನ್ನು ವಿತರಿಸದ ಕಾರಣ, ಬಳಿಕ ಖರ್ಜೂರದ ಹಣ್ಣುಗಳು ಏನಾದವೆಂಬುದು ಇದೀಗ ಕಾಡುವ ದೊಡ್ಡ ಪ್ರಶ್ನೆಯಾಗಿದೆ!
ಏತನ್ಮಧ್ಯೆ, ಖರ್ಜೂರ ವಿತರಣೆಯ ವಂಚನೆ ಪತ್ತೆಹಚ್ಚಲು ಕಸ್ಟಮ್ಸ್ ಪ್ರಕರಣ ದಾಖಲಿಸಲಾಗಿತ್ತು. ಆದರೆ ಇಲ್ಲಿಯವರೆಗೆ ಯಾರಿಗೆಲ್ಲ ಖರ್ಜೂರದ ಹಣ್ಣುಗಳನ್ನು ನೀಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಆದ್ದರಿಂದ, ಪ್ರಕರಣದ ಅಸ್ತಿತ್ವವು ಅನುಮಾನದಲ್ಲಿದೆ.
ಇದೇ ವೇಳೆ ವಿದೇಶದಿಂದ ತರಲಾಗಿದ್ದ ಹಣ್ಣುಗಳನ್ನು ಅನೇಕ ವರಿಷ್ಠರ ಮನೆಗಳಿಗೆ ತಲಪಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮೇಲಧಿಕಾರಿಗಳೊಂದಿಗೆ ಸಂಪರ್ಕ ಹೊಂದಲು ಸ್ವಪ್ನಾ ಖರ್ಜೂರವನ್ನು ಬಳಸಿರಬೇಕೆಂದು ಕಸ್ಟಮ್ಸ್ ಸಂಶಯಿಸಿದೆ