HEALTH TIPS

ಕೋವಿಡ್ -19 ಇಂದು ಕೇರಳದಲ್ಲಿ 2479 ಸೋಂಕಿತರು-ಕಾಸರಗೋಡು ಗರಿಷ್ಠ ಹೆಚ್ಚಳ-ಇಂದು 236 ಸೋಂಕಿತರು

    

              ತಿರುವನಂತಪುರ: ಕೇರಳದಲ್ಲಿಇಂದು  2479 ಮಂದಿಗಳಲ್ಲಿ ಕೋವಿಡ್ -19 ದೃಢಪಡಿಸಲಾಗಿದೆ. ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ ರಾಜ್ಯದ ಸೋಂಕಿತರ ಅಂಕಿಅಂಶಗಳು ಸ್ಪಷ್ಟವಾಗಿವೆ. 

               ಜಿಲ್ಲಾವಾರು ಸೋಂಕಿತರ ವಿವರ: 

         ಇಂದು ಹೆಚ್ಚಿನ ಪ್ರಕರಣಗಳು ತಿರುವನಂತಪುರ ಜಿಲ್ಲೆಯಲ್ಲಿವೆ. ತಿರುವನಂತಪುರ ಜಿಲ್ಲೆಯಿಂದ 477, ಎರ್ನಾಕುಳಂ ಜಿಲ್ಲೆ 274, ಕೊಲ್ಲಂ ಜಿಲ್ಲೆ 248, ಕಾಸರಗೋಡು ಜಿಲ್ಲೆ 236, ತ್ರಿಶೂರ್ ಜಿಲ್ಲೆ 204, ಕೊಟ್ಟಾಯಂ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತಲಾ 178, ಕೋಝಿಕ್ಕೋಡ್ ಜಿಲ್ಲೆ 167 ಮತ್ತು ಪತ್ತನಂತಿಟ್ಟು  ಜಿಲ್ಲೆ 141, ಕಣ್ಣೂರು ಜಿಲ್ಲೆ 115 ಮಂದಿ, ಆಲಪ್ಪುಳ ಜಿಲ್ಲೆ 106 , ವಯನಾಡ್ ಜಿಲ್ಲೆ 84 , ಪಾಲಕ್ಕಾಡ್ ಜಿಲ್ಲೆ 42 ಮತ್ತು ಇಡುಕ್ಕಿ ಜಿಲ್ಲೆ 29 ಜನರಿಗೆ ಇಂದು ಸೋಂಕು ಪತ್ತೆಯಾಗಿದೆ.

             ಗುಣಮುಖರಾದದವರ ವಿವರಗಳು:

       ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ 2716 ಜನರ ಪರೀಕ್ಷಾ ಫಲಿತಾಂಶಗಳು ನಕಾರಾತ್ಮಕವಾಗಿವೆ. ತಿರುವನಂತಪುರ ಜಿಲ್ಲೆಯ 426 , ಕೊಲ್ಲಂ 114 , ಪತ್ತನಂತಿಟ್ಟ  105 , ಆಲಪ್ಪುಳ 438 , ಕೊಟ್ಟಾಯಂ 117 , ಇಡುಕಿ  26 , ಎರ್ನಾಕುಳಂ 185 , ತ್ರಿಶೂರ್ ಮತ್ತು ಪಾಲಕ್ಕಾಡ್ ಜಿಲ್ಲೆಯ 140,  ಮಲಪ್ಪುರಂ 93 , ಮಲಪ್ಪುರಂ 627 , ಕೋಝಿಕ್ಕೋಡ್ 272 , ವಯನಾಡ್ 28 , ಕಣ್ಣೂರು 73 ಮತ್ತು ಕಾಸರಗೋಡು ಜಿಲ್ಲೆಯ 72 ಮಂದಿಗಳ ಫಲಿತಾಂಶ ನಕಾರಾತ್ಮಕವಾಗಿದೆ. 

            11 ಸಾವುಗಳನ್ನು ಸರ್ಕಾರ ಖಚಿತಪಡಿಸಿದೆ:

     ಇಂದು, ಇನ್ನೂ 11 ಕೋವಿಡ್ ಸಾವುಗಳನ್ನು ಸರ್ಕಾರ ದೃಢಪಡಿಸಿದೆ. ತ್ರಿಶೂರ್ ನ ವಡಕ್ಕಂಚೇರಿ ಮೂಲದ ರಾಫೆಲ್ (78), ಮಲಪ್ಪುರಂನ ಒಳವತ್ತೂರು ಮೂಲದ ಮುಹಮ್ಮದ್ (73), ಕಾಸರಗೋಡು ಮಂಜೇಶ್ವರದ ಅಬ್ದುಲ್ ರಹಮಾನ್ (60), ಕಣ್ಣೂರು ಒಳಪಟ್ಟಣದ ವಾಸುದೇವನ್(83), ಆಗಸ್ಟ್ 30 ರಂದು ಮೃತರಾದ ಕಣ್ಣೂರು ಆಲಕ್ಕೋಡ್ ನಿವಾಸಿ ಸಂತೋಷ್ ಕುಮಾರ್ (45), ತಿರುವನಂತಪುರದ ರವಿದಾಸ್ (69), ಕೊಲ್ಲಂ ಕಲ್ಲಂತಳ ದ ಬುಸ್ರಾ ಬೀವಿ(61), ತಿರುವನಂತಪುರ ವಿಳಿಂಜಮ್ ನ  ಶಬರಿಯಾರ್(65),  ತಿರುವನಂತಪುರಂ ವೆಂಜಾರಾಮೂಡ್ ನ ಸುಲಾಜಾ (56), ತೃಶೂರ್ ವೆಂಗನಕ್ಕಾಡ್ ನ ಶಿಬಿನ್(39) ರು ಕೋವಿಡ್ ಸೋಂಕಿನಿಂದ ಮೃತರಾಗಿರುವುದಾಗಿ ಸರ್ಕಾರ ತಿಳಿಸಿದೆ. 

            ಆರೋಗ್ಯ ಕಾರ್ಯಕರ್ತರಿಗೆ ಸೋಂಕು: 

    ರಾಜ್ಯದ ಆರೋಗ್ಯ ಕಾರ್ಯಕರ್ತರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇಂದು, 34 ಆರೋಗ್ಯ ಕಾರ್ಯಕರ್ತರಿಗೆ ಸೋಂಕಿರುವುದು ಕಂಡುಬಂದಿದೆ. ತಿರುವನಂತಪುರ ಜಿಲ್ಲೆಯಲ್ಲಿ 10, ಕಣ್ಣೂರು ಜಿಲ್ಲೆಯಲ್ಲಿ 8, ಪತ್ತನಂತಿಟ್ಟು ಮತ್ತು ಆಲಪ್ಪುಳ ಜಿಲ್ಲೆಗಳಲ್ಲಿ ತಲಾ 5, ಎರ್ನಾಕುಳಂ ಜಿಲ್ಲೆಯಲ್ಲಿ 4 ಮತ್ತು ಕೊಲ್ಲಂ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ತಲಾ 1 ಆರೋಗ್ಯ ಕಾರ್ಯಕರ್ತರಿಗೆ ಸೋಂಕು ಬಾಧಿಸಿದೆ. ತ್ರಿಶೂರ್ ಜಿಲ್ಲೆಯ ಎ.ಆರ್. ಶಿಬಿರದಲ್ಲಿದ್ದ ಎಲ್ಲಾ 60 ಜನರಿಗೆ ಸೋಂಕು ತಗುಲಿದೆ.

             ರೋಗ ಹರಡುವ ಸಾಧ್ಯತೆಯ ಬಗ್ಗೆ ಆರೋಗ್ಯ ಸಚಿವೆಯಿಂದ ಎಚ್ಚರಿಕೆ: 

     ಓಣಂ ಸಮಯದಲ್ಲಿ ಜನಸಂದಣಿಯಿಂದಾಗಿ ಮುಂದಿನ ಎರಡು ವಾರಗಳಲ್ಲಿ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದ್ದಾರೆ. ಕೋವಿಡ್  ಸಾಮಥ್ರ್ಯವು ಅಗಾಧವಾಗಿದೆ. ಮುಂದಿನ ಎರಡು ವಾರಗಳವರೆಗೆ ಆತಂಕ ಬಲವಾಗಿರುತ್ತದೆ. ಸಣ್ಣ ರೋಗಲಕ್ಷಣಗಳು ಇರುವವರು ಸಹ ಪ್ರಯಾಣದಿಂದ ದೂರವಿರಬೇಕು. ಎಲ್ಲರೂ ಜಾಗರೂಕರಾಗಿರಬೇಕು ಎಂದು ಸಚಿವರು ಹೇಳಿರುವರು.


             

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries