ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 197 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 225 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದಿಂದ 191 ಮಂದಿಗೆ ರೋಗ ಬಾಧಿಸಿದೆ. ಇತರ ರಾಜ್ಯಗಳಿಂದ ಬಂದ ನಾಲ್ವರಿಗೆ, ವಿದೇಶದಿಂದ ಬಂದ ಇಬ್ಬರಿಗೆ ರೋಗ ಬಾಧಿಸಿದೆ. ಜಿಲ್ಲೆಯಲ್ಲಿ ಒಟ್ಟು ಇದು ವರೆಗೆ 8711 ಮಂದಿಗೆ ಸೋಂಕು ಬಾಧಿಸಿದ್ದು, ಇವರಲ್ಲಿ 6694 ಮಂದಿ ಗುಣಮುಖರಾಗಿದ್ದಾರೆ. ಪ್ರಸ್ತುತ ಜಿಲ್ಲೆಯಲ್ಲಿ 1947 ಚಿಕಿತ್ಸೆ ಪಡೆಯುತ್ತಿದ್ದಾರೆ.
ರೋಗ ಬಾಧಿತರು : ಪೈವಳಿಕೆ-2, ಮಧೂರು-9, ತೃಕ್ಕರಿಪುರ-5, ಪುತ್ತಿಗೆ-1, ಬೇಡಡ್ಕ-3, ಚೆಮ್ನಾಡ್-18, ಉದುಮ-13, ಅಜಾನೂರು-6, ಪಳ್ಳಿಕರೆ-8, ಮಂಗಲ್ಪಾಡಿ-13, ಪಿಲಿಕೋಡು-2, ಕಾಂಞಂಗಾಡ್-16, ಕಯ್ಯೂರು-1, ನೀಲೇಶ್ವರ-3, ಕಳ್ಳಾರ್-4, ವೆಸ್ಟ್ ಎಳೇರಿ, ಪುಲ್ಲೂರು-2, ಕುಂಬಳೆ-11, ಕಾಸರಗೋಡು-19, ಮಡಿಕೈ-2, ಬದಿಯಡ್ಕ-7, ಪಡನ್ನ-4, ಮಂಜೇಶ್ವರ-2, ಪನತ್ತಡಿ-1, ಮೊಗ್ರಾಲ್ಪುತ್ತೂರು-7, ಚೆಂಗಳ-31, ಕುತ್ತಿಕೋಲ್-1, ಮುಳಿಯಾರು-4 ಎಂಬಂತೆ ರೋಗ ಬಾಧಿಸಿದೆ.
225 ಮಂದಿಗೆ ಕೋವಿಡ್ ನೆಗೆಟಿವ್:
ಕಾಸರಗೋಡು ಜಿಲ್ಲೆಯಲ್ಲಿ ಮಂಗಳವಾರ 225 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆ 14, ಮಧೂರು ಪಂಚಾಯತ್ 8, ಪುತ್ತಿಗೆ ಪಂಚಾಯತ್ 4, ಮುಳಿಯಾರು ಪಂಚಾಯತ್ 3, ಮಂಗಲ್ಪಾಡಿ ಪಂಚಾಯತ್ 2, ದೇಲಂಪಾಡಿ ಪಂಚಾಯತ್ 2, ಮಂಜೇಶ್ವರ ಪಂಚಾಯತ್ 2, ಪೈವಳಿಕೆ ಪಂಚಾಯತ್ 3, ಕುಂಬಳೆ ಪಂಚಾಯತ್ 7, ಬೇಡಡ್ಕ ಪಂಚಾಯತ್ 5, ಚೆಮ್ನಾಡ್ ಪಂಚಾಯತ್ 20, ಚೆಂಗಳ ಪಂಚಾಯತ್ 9, ಕುತ್ತಿಕೋಲು ಪಂಚಾಯತ್ 2, ಮುಳಿಯಾರು ಪಂಚಾಯತ್ 3, ಕಾರಡ್ಕ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 5, ಕಾಞಂಗಾಡ್ ನಗರಸಭೆ 15, ಉದುಮಾ ಪಂಚಾಯತ್ 22, ಅಜಾನೂರು ಪಂಚಾಯತ್ 22, ಪಿಲಿಕೋಡ್ ಪಂಚಾಯತ್ 15, ಕಳ್ಳಾರ್ ಪಂಚಾಯತ್ 1, ನೀಲೇಶ್ವರ ನಗರಸಭೆ 5, ಕೋಡೋಂ-ಬೇಳೂರು ಪಂಚಾಯತ್ 1, ಚೆರುವತ್ತೂರು ಪಂಚಾಯತ್ 2, ತ್ರಿಕರಿಪುರ ಪಂಚಾಯತ್ 2, ಈಸ್ಟ್ ಏಳೇರಿ ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 2, ವೆಸ್ಟ್-ಏಳೇರಿ ಪಂಚಾಯತ್ 1, ಕಯ್ಯೂರು-ಚೀಮೇನಿ ಪಂಚಾಯತ್ 3, ಪುಲ್ಲೂರು-ಪೆರಿಯ ಪಂಚಾಯಯತ್ 18, ಕರಿವೆಳ್ಳೂರು ಪಂಚಾಯತ್ 1 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ.
4930 ಮಂದಿ ನಿಗಾದಲ್ಲಿ:
ಕಾಸರಗೋಡು ಜಿಲ್ಲೆಯಲ್ಲಿ 4930 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.
ಮನೆಗಳಲ್ಲಿ 3528 ಮಂದಿ, ಸಾಂಸ್ಥಿಕವಾಗಿ 1202 ಮಂದಿ ನಿಗಾದಲ್ಲಿರುವರು. ನೂತನವಾಗಿ 155 ಮಂದಿ ನಿಗಾ ಪ್ರವೇಶಿಸಿದ್ದಾರೆ. 275 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 902 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 290 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8711 ಮಂದಿಗೆ ಕೋವಿಡ್ ಪಾಸಿಟಿವ್ ಕಾಸರಗೋಡು, ಸೆ.22 : ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 8711 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾದಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಇವರಲ್ಲಿ 7540 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 670 ಮಂದಿ ವಿದೇಶಗಳಿಂದ, 501 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ತಿಳಿಸಿದರು. ಈ ವರೆಗೆ ಒಟ್ಟು 6694 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. 1947 ಮಂದಿ ಚಿಕಿತ್ಸೆಯಲ್ಲಿದ್ದಾರೆ. ಇವರಲ್ಲಿ 846 ಮಂದಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ ಮೃತಪಟ್ಟವರ ಸಂಖ್ಯೆ 70 ಆಗಿದೆ.