HEALTH TIPS

ಕೋವಿಡ್ -19 ರೋಗಿಗಳಿಗೆ ಆಮ್ಲಜನಕ ಲಭ್ಯತೆ ಖಾತ್ರಿಪಡಿಸುವುದು ರಾಜ್ಯಸರ್ಕಾರಗಳ ಹೊಣೆ-ಕೇಂದ್ರ ಸರ್ಕಾರ

   ನವದೆಹಲಿ: ಕೆಲ ರಾಜ್ಯಗಳಲ್ಲಿ ಕೋವಿಡ್-19 ರೋಗಿಗಳಿಗೆ ವೈದ್ಯಕೀಯ ಆಮ್ಲಜನಕದ ಕೊರತೆ  ಕಂಡುಬರುತ್ತಿರುವಂತೆಯೇ, ಆಮ್ಲಜನಕ ಲಭ್ಯತೆ ಕೊರತೆಯಾಗದಂತೆ ನೋಡಿಕೊಳ್ಳುವ  ಹೊಣೆಯನ್ನು ರಾಜ್ಯ ಸರ್ಕಾರಗಳ ಮೇಲೆ ಕೇಂದ್ರ ಸರ್ಕಾರ ಹಾಕಿದೆ.

       ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳ ಆಸ್ಪತ್ರೆಗಳಲ್ಲಿ ಆಮ್ಲಜನಕ ಪೂರೈಕೆಯಲ್ಲಿ ತೀವ್ರ ರೀತಿಯ ಕೊರತೆ ಕಂಡುಬರುತ್ತಿದೆ ಎಂಬ ವರದಿಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ರೀತಿಯ ನಿರ್ದೇಶನ ನೀಡಿದೆ. ಮಹಾರಾಷ್ಟ್ರದಲ್ಲಿ ಕೊರೋನಾ ಸೋಂಕಿನ ಪ್ರಕರಣಗಳ ಸಂಖ್ಯೆ 1 ಮಿಲಿಯನ್ ಸಮೀಪ ಸಾಗುತ್ತಿದೆ.

       ಸರ್ಕಾರದ ಅಂಕಿ ಅಂಶಗಳ ಪ್ರಕಾರ ಶುಕ್ರವಾರ  ಒಟ್ಟಾರೇ 9,43,480 ಸಕ್ರೀಯ ಕೋವಿಡ್-19 ರೋಗಿಗಳು  ಅಂದರೆ ಶೇ. 3.7 ರಷ್ಟು ರೋಗಿಗಳಿಗೆ ಆಮ್ಲಜನಕದಿಂದ ಉಸಿರಾಡುತ್ತಿದ್ದಾರೆ. ಕೊರೋನಾ ಸೋಂಕಿತ ರೋಗಿಗಳು ಉಸಿರಾಡುವಲ್ಲಿ ಆಮ್ಲಜನಕ ಪೂರೈಕೆ ಮಹತ್ವದ್ದಾಗಿದ್ದು, ವಾಸ್ತವವಾಗಿ 34, 908 ರೋಗಿಗಳಿಗೆ ಮೆಡಿಕಲ್ ಆಕ್ಸಿಜನ್ ಅಗತ್ಯವಿದೆ.

      ಗಂಭೀರ ಸ್ಥಿತಿಯಲ್ಲಿರುವ ರೋಗಿಗಳ ರಕ್ಷಣೆಗೆ ಅಗತ್ಯವಿರುವ ವೈದ್ಯಕೀಯ  ಆಮ್ಲಜನಕದ ಅಂತರರಾಜ್ಯ ರವಾನೆಯನ್ನು ತಡೆಯದಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ.

         ಈ ಕುರಿತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ  ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್  ಕೆಲ ರಾಜ್ಯ ಸರ್ಕಾರಗಳು ವಿವಿಧ  ಕಾಯ್ದೆಯಡಿ ಇತರ ರಾಜ್ಯಗಳಿಂದ ಆಮ್ಲಜನಕ ಪೂರೈಕೆಗೆ ಅಡ್ಡಿಯಾಗುತ್ತಿವೆ. ಮತ್ತು ಕೇವಲ  ರಾಜ್ಯಗಳ ಆಸ್ಪತ್ರಗಳಿಗೆ ಮಾತ್ರ ಲಭ್ಯವಿರುವ ಆಮ್ಲಜನಕ ಪೂರೈಕೆಯನ್ನು ಸೀಮಿತಗೊಳಿಸಿವೆ  ಎಂಬ ಮಾಹಿತಿ ಲಭ್ಯವಾಗಿವೆ ಎಂದಿದ್ದಾರೆ.

       ಆದರೆ, ಸರ್ಕಾರಗಳು ಕೋವಿಡ್ ರೋಗಿಗಳ  ತುರ್ತು ಚಿಕಿತ್ಸೆಗಾಗಿ ಆಮ್ಲಜನಕ ಅಬಾಧಿತ ಸಂಚಾರಕ್ಕೆಅವಕಾಶ ಒದಗಿಸಿಕೊಡಬೇಕು ಎಂದು  ಪತ್ರದಲ್ಲಿ ಭೂಷಣ್ ಮನವಿ ಮಾಡಿದ್ದಾರೆ. 

      ಆಸ್ಪತ್ರೆಗಳು  ಸೇರಿದಂತೆ ಎಲ್ಲಾ ಕೋವಿಡ್ ಆರೈಕೆ ಕೇಂದ್ರಗಳು ಕೆಲ ನಿರ್ದಿಷ್ಟ ಚಿಕಿತ್ಸಾ  ಮಾರ್ಗಸೂಚಿಗಳನ್ನು ಆಧರಿಸಿದೆ. ಮಧ್ಯಮ ಮತ್ತು ತೀವ್ರವಾದ ಪ್ರಕರಣಗಳಿಗೆ, ಸಾಕಷ್ಟು  ಆಮ್ಲಜನಕದ ಬೆಂಬಲ, ಆಂಟಿ-ಕೋಗುಲಂಟ್ ಗಳ ಸೂಕ್ತ ಮತ್ತು ಸಮಯೋಚಿತ ಆಡಳಿತ ಮತ್ತು  ಶಿಷ್ಟಾಚಾರ ಅನುಗುಣವಾಗಿ ವ್ಯಾಪಕವಾಗಿ ಲಭ್ಯವಿರುವ ಮತ್ತು ಅಗ್ಗದ  ಕಾರ್ಟಿಕೊಸ್ಟೆರಾಯ್ಡ್ ಗಳನ್ನು ಕೋವಿಡ್ -19 ಚಿಕಿತ್ಸೆಯ ಮುಖ್ಯ ಆಧಾರವೆಂದು  ಪರಿಗಣಿಸಬಹುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ. 

       ದೇಶಾದ್ಯಂತ ಸಾಕಷ್ಟು ಪ್ರಮಾಣದ  ಆಮ್ಲಜನಕ ಪೂರೈಕೆಯು ಕೋವಿಡ್ ಸೋಂಕಿತರ ವೈದ್ಯಕೀಯ ಆರೈಕೆಯನ್ನು ಶಕ್ತಗೊಳಿಸಿದೆ.  ಜೊತೆಗೆ, ಮರಣ ಪ್ರಮಾಣವನ್ನು ತಗ್ಗಿಸಿದೆ. ಸದ್ಯ ಸೋಂಕಿತರ ಮರಣ ಪ್ರಮಾಣ ಶೇ.1.67  ರಷ್ಟಿದೆ.



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries