HEALTH TIPS

ಕೋವಿಡ್-19 ಮುಗಿದ ಮೇಲೆಯೂ ವರ್ಚುವಲ್ ಕೋರ್ಟ್ ಕಲಾಪವನ್ನು ಮುಂದುವರಿಸಿ: ಸಂಸದೀಯ ಸಮಿತಿ ಶಿಫಾರಸು

      ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ರೋಗದ ಪ್ರಭಾವ ಕಡಿಮೆಯಾದ ಮೇಲೆ ಸಹ ನಿರ್ದಿಷ್ಟ ಕೇಸುಗಳಿಗೆ ವರ್ಚುವಲ್ ಕೋರ್ಟ್ ಮೂಲಕ ವಿಚಾರಣೆ ನಡೆಸುವ ಪ್ರಕ್ರಿಯೆಯನ್ನು ಮುಂದುವರಿಸಬೇಕು ಎಂದು ಕಾನೂನು ಮತ್ತು ನ್ಯಾಯ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿ ಶುಕ್ರವಾರ ಶಿಫಾರಸು ಮಾಡಿ ವರದಿ ಸಲ್ಲಿಸಿದೆ.

     ಬಿಜೆಪಿಯ ಹಿರಿಯ ನಾಯಕ ಭೂಪೇಂದರ್ ಯಾದವ್ ನೇತೃತ್ವದ ತಂಡ ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಸಲ್ಲಿಸಿದ ವರದಿಯಲ್ಲಿ ಈ ಶಿಫಾರಸು ಮಾಡಿದೆ.

     ನ್ಯಾಯಾಲಯ ಎಂಬುದು ಜನರಿಗೆ ಸೇವೆ ಸಲ್ಲಿಸುವ ಸ್ಥಳ, ನಮ್ಮ ಪುರಾತನ ಕೆಲಸಗಳ ಅಭ್ಯಾಸದ ಕೊನೆಯ ಭದ್ರಕೋಟೆಯಾಗಿರುವ ನ್ಯಾಯಾಲಯ ಆಧುನಿಕ ತಂತ್ರಜ್ಞಾನಕ್ಕೆ ಒಗ್ಗಿಕೊಳ್ಳಬೇಕು ಎಂದು ಕಾನೂನು ಮತ್ತು ನ್ಯಾಯ ಇಲಾಖೆಯ ಸಾರ್ವಜನಿಕ, ಖಾಸಗಿ ಕುಂದು ಕೊರತೆಗಳನ್ನು ನಿವಾರಿಸಲು ರಚಿಸಲಾಗಿರುವ ಸ್ಥಾಯಿ ಸಮಿತಿ ತನ್ನ ವರದಿಯಲ್ಲಿ ಹೇಳಿದೆ.

    ನ್ಯಾಯಾಲಯಕ್ಕೆ ಹೋಗಿ ಹಣ, ಸಮಯ ವ್ಯರ್ಥ ಮಾಡುವ ಬದಲು ಡಿಜಿಟಲ್ ನ್ಯಾಯಾಧೀಕರ ವೇಗವಾಗಿ ಮತ್ತು ಅಗ್ಗದ ಖರ್ಚಿನಲ್ಲಿ ಸಾಗುತ್ತದೆ, ವರ್ಚುವಲ್ ಕೋರ್ಟ್ ಪದ್ಧತಿಯನ್ನು ಕೋವಿಡ್-19 ಮುಗಿದ ನಂತರವೂ ಕೆಲವು ನಿರ್ದಿಷ್ಟ ಪ್ರಕರಣಗಳಿಗೆ ಸಂಬಂಧಪಟ್ಟ ಎಲ್ಲಾ ಕಕ್ಷಿದಾರರು ಮತ್ತು ನ್ಯಾಯಾಧೀಶರ ಒಪ್ಪಿಗೆಯಿದ್ದರೆ ಮುಂದುವರಿಸಬಹುದು ಎಂದು ಹೇಳಿದೆ.

     ದೇಶಾದ್ಯಂತ ಇರುವ ಹಲವು ಟಿಡಿಎಸ್ಎಟಿ, ಐಪಿಎಬಿ, ಎನ್‌ಸಿಎಎಲ್‌ಟಿಯಂತಹ ಮೇಲ್ಮನವಿ ನ್ಯಾಯಾಧಿಕರಣಗಳಲ್ಲಿ ಶಾಶ್ವತವಾಗಿ ವರ್ಚುವಲ್ ಕಲಾಪಗಳನ್ನು ಮುಂದುವರಿಸಬಹುದು ಎಂದು ಶಿಫಾರಸು ಮಾಡಿದೆ.



    ಕಾಮೆಂಟ್‌‌ ಪೋಸ್ಟ್‌ ಮಾಡಿ

    0 ಕಾಮೆಂಟ್‌ಗಳು
    * Please Don't Spam Here. All the Comments are Reviewed by Admin.

    Top Post Ad

    Click to join Samarasasudhi Official Whatsapp Group

    Qries

    Qries

    Below Post Ad


    ಜಾಹಿರಾತು














    Qries